ಮುದ್ದೇಬಿಹಾಳ: ಅಗ್ನಿಶಾಮಕದಳದ ಸಿಬ್ಬಂದಿಗಳ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತವೊಂದು ತಪ್ಪಿದ ಘಟನೆ ಪಟ್ಟಣದ ಬಿದರಕುಂದಿ ರಸ್ತೆಯ ಪೆಟ್ರೋಲ್ ಪಂಪ ಬಳಿಯ ಗುಜರಿ ಅಂಗಡಿಯಲ್ಲಿ ನಡೆದಿದೆ.
ಅಬ್ದುಲಹಮೀದ ಢವಳಗಿ ಎಂಬುವವರಿಗೆ ಸೇರಿದ ಗುಜರಿ ಸರಕಿಗೆ ಏಕಾಏಕಿ ಬೆಂಕಿ ಹತ್ತಿದ್ದು, ಅಗ್ನಿಶಾಮಕದವರಿಗೆ ಕರೆ ಮಾಡಿ ತಿಳಿಸಿದ್ದಾರೆ. ಸಮಯಕ್ಕೆ ಸರಿಯಾಗಿ ಹಾಜರಾದ ಸಿಬ್ಬಂದಿಗಳಾದ ರಮೆಶ ಚಳ್ಳಣ್ಣವರ, ಸುಭಾಷ್ ರಾಠೋಡ, ಭೀಮರಾವ ನಾಟೆಕಾರ, ಮಸ್ತಾನ್ ಮುಲ್ಲಾಗೋಳ, ಪ್ರಕಾಶ ಸುಬ್ಬಣ್ಣಗೋಳ, ಮಹೇಶ ಕರಡ್ಡಿ, ಸಿದ್ದಣ್ಣ ಪೊಲೇಶಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಪಿಎಸ್‌ಐ ಸಂಜೀವ ತಿಪರೆಡ್ಡಿ ಭೇಟಿ ನೀಡಿ ಪರಿಶೀಲಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

