ಸಿಂದಗಿ: ನಿರಂತರ ಸೇವೆಯಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸೇವೆ ಸಲ್ಲಿಸಿದ ಪ್ರತಿಯೊಬ್ಬರಿಗೂ ಶ್ರೀಶೈಲ ಮಲ್ಲಿಕಾರ್ಜುನನ ಆಶೀರ್ವಾದ ಸದಾ ಇರಲಿ ಎಂದು ರಮೇಶ ಹೂಗಾರ ಹೇಳಿದರು.
ಸಿಂದಗಿ ಸದ್ಭಕ್ತರಿಂದ ಶ್ರೀಶೈಲ ಪಾದಯಾತ್ರಿಗಳಿಗೆ ಸತತವಾಗಿ ೧೭ ವರ್ಷಗಳಿಂದ ತೆಲಂಗಾಣ ರಾಜ್ಯದ ಗದ್ವಾಲ್ ಜಿಲ್ಲೆಯ ಗಟ್ಟು ಗ್ರಾಮದಲ್ಲಿ ಹಮ್ಮಿಕೊಂಡ ದಾಸೋಹ ಸೇವೆಯಲ್ಲಿ ನಿರತರಾಗಿ ಮಾತನಾಡಿದ ಅವರು, ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯದಿಂದ ಆಗಮಿಸುವ ಭಕ್ತಾದಿಗಳಿಗೆ ಸಿಂದಗಿಯ ಗುತ್ತಿಗೇದಾರ ಮುತ್ತು ಮುಂಡೇವಾಡಗಿ ಅವರ ನೇತೃತ್ವದ ತಂಡದಿಂದ ಸತತವಾಗಿ ೧೭ವರ್ಷಗಳಿಂದ ತೆಲಂಗಾಣ ರಾಜ್ಯದ ಗದ್ವಾಲ್ ಜಿಲ್ಲೆಯ ಗಟ್ಟು ಗ್ರಾಮದಲ್ಲಿ ದಾಸೋಹ ಸೇವೆ ನಡೆಯುತ್ತಿದೆ. ಬೆಳಿಗ್ಗೆ ಅಲ್ಪೋಪಹಾರ, ಮಧ್ಯಾಹ್ನ ಊಟದ ಸೇವೆ ನಿರಂತರವಾಗಿ ಜರುಗುತ್ತಿದೆ. ಮತ್ತು ಸಿಂದಗಿಯ ಧನ್ವಂತರಿ ಆಸ್ಪತ್ರೆಯ ವತಿಯಿಂದ ಪ್ರಥಮ ಹಂತದ ಚಿಕಿತ್ಸೆ ಸೇವೆ ಮಾಡಲಾಗುತ್ತಿದೆ. ಸಿಂದಗಿಯ ಹಲವಾರು ಭಕ್ತಾದಿಗಳು ದಾಸೋಹಕ್ಕೆ ಸ್ವ-ಇಚ್ಛೆಯಿಂದ ಸಹಾಯ ಮಾಡುತ್ತಾ ಬಂದಿದ್ದಾರೆ. ಅದರಂತೆ ಗಟ್ಟು ಗ್ರಾಮದ ಭಕ್ತಾದಿಗಳು ನಮಗೆ ಬೆಂಬಲವಾಗಿ ನಿಂತಿರುವುದು ಆತ್ಮಸ್ಥೈರ್ಯ ತುಂಬಿದೆ ಎಂದರು.
ಆರು ದಿನಗಳ ಕಾಲ ನಡೆಯುವ ಈ ಸೇವೆಯಲ್ಲಿ ಗುರು ಪಾಟೀಲ್, ಪರಸು ನಾರಾಯಣಕರ, ಗಿರೀಶ ಹೂಗಾರ, ವಿಶ್ವನಾಥ ರೆಡ್ಡಿ, ವಿಜು ಪಟ್ಟಣಶೆಟ್ಟಿ, ರವಿ ನಾವಿ, ಪರಸುರಾಮ ಕೂಚಬಾಳ, ನಿಂಗರಾಜ ಗುಡಿಮನಿ, ಬಾಲಕೃಷ್ಣ ಛಲವಾದಿ, ಶಬೀರ್ ಬೈರಾಮಡಗಿ, ಶಿವಾನಂದ ಆಲಮೇಲ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

