ವಿಜಯಪುರ: ರಾಜ್ಯ ಕಾರ್ಮಿಕರ ಮತ್ತು ಬಡರೋಗಿಗಳ ಕಲ್ಯಾಣ ಬೋರ್ಡ (ಎನ್.ಜಿ.ಓ) ವಿಜಯಪುರ ವತಿಯಿಂದ ವಿಶ್ವ ಜಲ ದಿನವನ್ನು ನಗರದ ಜಲನಗರದಲ್ಲಿ ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷ ಅಶೋಕ ಜುಗತಿ ಮಾತನಾಡಿ, ವಿಶ್ವ ಜಲ ದಿನವನ್ನು ವಿಶ್ವ ಸಂಸ್ಥೆಯು ೧೯೯೩ ಮಾರ್ಚ ೨೨ ರಂದು ರಲ್ಲಿ ಜಾರಿ ಬಂದಿತು. ಅಮೃತಕ್ಕೆ ಸಮಾನವಾದ ಈ ನೀರು ದಿನನಿತ್ಯದ ಬದುಕಿಗೆ ಅತ್ಯಗತ್ಯ. ಕುಡಿಯುವುದರಿಂದ ಹಿಡಿದು ದಿನನಿತ್ಯದ ಕೆಲಸಕಾರ್ಯಗಳಿಗೆ ನೀರು ಅಗತ್ಯವಾಗಿ ಬೇಕು. ನೀರಿಲ್ಲದೇ ಬದುಕುವುದನ್ನು ಊಹೆ ಮಾಡುವುದಕ್ಕೂ ಅಸಾಧ್ಯ. ಆದರೆ ಬೇಸಿಗೆಯೂ ಆರಂಭವಾಗುತ್ತಿದ್ದಂತೆ ಎಲ್ಲೆಡೆ ನೀರಿನ ಹಾಹಾಕಾರವು ಶುರುವಾಗುತ್ತದೆ. ಈ ಸಮಯದಲ್ಲಿ ಕುಡಿಯಲು ನೀರಿಲ್ಲದೆ ಒದ್ದಾಡುವವರು ಇದ್ದಾರೆ. ಈ ನೀರಿನ ಮಹತ್ವವನ್ನು ಸಾರುವ ಸಲುವಾಗಿ ಪ್ರತಿ ವರ್ಷ ಮಾರ್ಚ್ ೨೨ ರಂದು ವಿಶ್ವ ಜಲ ದಿನವನ್ನು ಆಚರಿಸಲಾಗುತ್ತದೆ. ಈ ಪೃಥ್ವಿಯ ಮೇಲಿರುವ ಸಕಲ ಜೀವ ರಾಶಿಗಳಿಗೆ ಆಹಾರ ಹಾಗೂ ಗಾಳಿ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಈ ನೀರು ಕೂಡ. ಆದರೆ ಈ ಮನುಷ್ಯ ಆಹಾರವಿಲ್ಲದೇ ಹೋದರೂ ಬದುಕಬಹುದು. ಆದರೆ ನೀರಿಲ್ಲದೇ ಹೋದರೆ ಬದುಕಲು ಸಾಧ್ಯವಿಲ್ಲ. ಊಟ ತಿಂಡಿಯಿಲ್ಲದೇ ನೀರು ಕುಡಿದೇ ಎಷ್ಟೋ ವರ್ಷಗಳಿಂದ ಇರುವವರನ್ನು ನೋಡಿರಬಹುದು. ಭೂಮಿಯಲ್ಲಿರುವ ಸಕಲ ಜೀವ ರಾಶಿಗಳಿಗೆ ನೀರು ಅಗತ್ಯವಾಗಿ ಬೇಕು. ಆದರೆ ಮಾನವನ ಸ್ವಾರ್ಥದಿಂದ ಅದೆಷ್ಟೋ ಜಲಮೂಲಗಳು ಅಳಿವಿನಂಚಿನಲ್ಲಿದೆ. ಕಾಡಿನ ನಾಶದಿಂದ ಸರಿಯಾದ ಸಮಯಕ್ಕೆ ಮಳೆ ಬಾರದೆ ಹಳ್ಳ ಕೊಳ್ಳ ಸೇರಿದಂತೆ ನೀರಿನ ಮೂಲಗಳು ಬತ್ತಿ ಹೋಗಿವೆ. ಹಾಗೂ ಮುಂಬರುವ ದಿನಗಳಿಗೆ ಜಗತ್ತಿನಾದ್ಯಂತ ಪ್ರತಿಯೊಬ್ಬರಿಗೂ ಸ್ವಚ್ಚ ಕುಡಿಯುವ ನೀರು ಒದಗಿಸುವುದು. ನೈರ್ಮಲ್ಯ ಕಾಪಾಡುವುದು ಈ ಜಲ ದಿನಾಚರಣೆ ಮುಖ್ಯ ಗುರಿಯಾಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಮಹಾದೇವ ಚಂದನಶಿವ, ರಾಘು ಜೋಶಿ, ಅಜೀತ ಪಂಡಿತ, ಮಹಾಂತೇಶ ಅಂಗಡಿಮಠ, ಈರಣ್ಣ ಹಡಪದ ಮುಂತಾದವರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment
