ಕಸಾಪದಿಂದ ಜಿಲ್ಲಾ ಸಮ್ಮೇಳನದ ಸರ್ವಾಧ್ಯಕ್ಷ ಆಹ್ವಾನ ಸ್ವೀಕರಿಸಿದ ಡಾ.ಐಹೊಳ್ಳಿ ಅಭಿಮತ
ವಿಜಯಪುರ: ಜಿಲ್ಲೆಯು ಕನ್ನಡ ನಾಡು- ನುಡಿ, ಕಲೆ-ಸಂಸ್ಕೃತಿಗೆ ಅಪಾರವಾದ ಕೊಡುಗೆ ನೀಡಿದೆ. ವಚನ ಸಾಹಿತ್ಯ ಮತ್ತು ಜಾನಪದ ಸಾಹಿತ್ಯ ಜಿಲ್ಲೆಯನ್ನು ಶ್ರೀಮಂತಗೋಳಿಸಿವೆ ಎಂದು ಡಾ. ವಿ ಡಿ ಐಹೊಳ್ಳಿ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ೧೯ ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸವಾ೯ಧ್ಯಕ್ಷರಾಗಿ ಆಯ್ಕೆಯಾದ ಡಾ ವ್ಢಿ ಡಿ ಐಹೊಳ್ಳಿ ಅವರು ಆವ್ಹಾನ ಹಾಗೂ ಗೌರವ ಸ್ವೀಕರಿಸಿ ಮಾತನಾಡಿದರು.
ನಾನು ಸಮ್ಮೇಳನದ ಸವಾ೯ಧ್ಯಕ್ಷರಾಗಿ ಆಯ್ಕೆಯಾಗಿದ್ದು ಅತ್ಯಂತ ಸಂತಸದ ವಿಷಯ. ಜಿಲ್ಲೆಯಾದ್ಯಂತ ಸಾಹಿತ್ಯ ಚಟುವಟಿಕೆಗಳು ನಿರಂತರವಾಗಿ ಸಾಗಬೇಕು. ಹೊಸ ಪ್ರತಿಭೆಗಳಿಗೆ ಅವಕಾಶ ಹಾಗು ಪ್ರೋತ್ಸಾಹ ಅಗತ್ಯ ಎಂದರು.
ಸವಾ೯ಧ್ಯಕ್ಷರಿಗೆ ಆವ್ಹಾನ ನೀಡಿ ಸನ್ಮಾನಿಸಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಮಾತನಾಡಿ, ಬಹುಮುಖ ವ್ಯಕ್ತಿತ್ವ ಹೊಂದಿರುವ ಡಾ ವ್ಹಿ ಡಿ ಐಹೊಳ್ಳಿಯವರು ಶಿಕ್ಷಣ. ಸಾಹಿತ್ಯ, ಸಂಶೋಧನೆ ಹಾಗು ಗ್ರಂಥ ಸಂಪಾದನೆಯಲ್ಲಿ ಅಪಾರ ಸೇವೆ ಮಾಡಿದ ಅನುಭವಿಗಳು. ಕನ್ನಡ ಸಾಹಿತ್ಯ ಪರಿಷತ್ತಿನ ಕಾಯ೯ಕಾರಣಿ ಸಮಿತಿ ಅವರ ಸೇವೆ ಗುರುತಿಸಿ ಆಯ್ಕೆ ಮಾಡಿದ್ದನ್ನು ಜಿಲ್ಲೆಯ ಸಾಹಿತಿಗಳು ಶ್ಲಾಘಿಸಿದ್ದಾರೆ ಎಂದರು.
ನಗರ ಘಟಕದ ಅಧ್ಯಕ್ಷೆ ಅನ್ನಪೂರ್ಣ ಬೆಳೆನ್ನವರ ಪ್ರಾಥಿ೯ಸಿದರು.
ಗೌರವ ಕೋಶಾಧ್ಯಕ್ಷ ಡಾ:ಸಂಗಮೇಶ ಮೇತ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಗೌರವ ಕಾರ್ಯದರ್ಶಿ ಪ್ರೊ ಸುಭಾಶ್ಚಂದ್ರ ಕನ್ನೂರ ಸ್ವಾಗತಿದರು.
ಡಾ. ಮಾಧವ ಗುಡಿ ನಿರೂಪಿಸಿದರು. ಡಾ: ಆನಂದ ಕುಲಕರ್ಣಿ ವಂದಿಸಿದರು.
ಪದಾಧಿಕಾರಿಗಳಾದ ಅಭಿಷೇಕ ಚಕ್ರವರ್ತಿ, ಮಹಮ್ಮದಗೌಸ ಹವಾಲ್ದಾರ, ವಿದ್ಯಾವತಿ ಅಂಕಲಗಿ, ಶಿಲ್ಪಾ ಬಸ್ಮೆ, ಮಹಾದೇವಿ ತೆಲಗಿ, ಮೋಹನ ಕಟ್ಟಿಮನಿ, ಕೆ ಎಪ್ ಅಂಕಲಗಿ, ಸುರೇಶ ಜತ್ತಿ, ಅಲಿಸಾಬ ಕಡಕೆ, ಸನ್ಮಿತ್ರ ಐಹೊಳ್ಳಿ, ಶಾರದಾ ಕೊಪ್ಪದ, ಬಸವರಾಜ ಕೊನರಡ್ಡಿ, ಭಸೀರ ಬುದ್ನೂರ, ಪರಶರಾಮ ಚಲುವಾದಿ, ನಿಮ೯ಲಾ ಸುಂಠಾಣ
ಪೂರ್ವೀ ಐಹೊಳ್ಳಿ, ಶಿವಯೋಗಿ ಡೋಮನಾಳ, ನಿಂಗಮ್ಮ ಡೋಮನಾಳ, ಡಾ.ಅರುಣ ದೇಸಾಯಿ, ಡಾ.ಅನುಷಾ ದೇಸಾಯಿ
ಉಪಸ್ಥಿತರಿದ್ದರು.

