ಢವಳಗಿ: ಗ್ರಾಮದ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಮಂಜೂರಾತಿ ಮಾಡಿದ 2.00 ಲಕ್ಷ ಡಿಡಿ. ಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ ವಿಜಯಪುರ ಜಿಲ್ಲೆಯ ಜಿಲ್ಲಾ ನಿರ್ದೇಶಕ ಸಂತೋಷ್ ಕುಮಾರ್ ರೈ, ಮತ್ತು ಮುದ್ದೇಬಿಹಾಳ ತಾಲೂಕಿನ ಯೋಜನಾಧಿಕಾರಿ ನಾಗೇಶ್ N P, ಜನ ಜಾಗೃತಿ ಸಮಿತಿಯ ಸದಸ್ಯ ಶ್ರೀಶೈಲ ದೊಡ್ಡಮನಿ ಮತ್ತು ಒಕ್ಕೂಟದ ಅಧ್ಯಕ್ಷರು ಪದಾಧಿಕಾರಿಗಳಿಗೆ ಮಂಜೂರಾತಿ ಚೆಕ್ ಹಸ್ತಾಂತರ ಮಾಡಿದರು.
ನಿರ್ಗತಿಕರಿಗೆ ತಾಲೂಕಿನಲ್ಲಿ 105 ಕುಟುಂಬಕ್ಕೆ ನಿರ್ಗತಿಕರ ಮಾಸಾಸನ ನೀಡುತ್ತಿದ್ದೇವೆ. ಯೋಜನೆ ಕುಟುಂಬದ ಅಭಿವೃದ್ಧಿ ಜೊತೆಗೆ ಸಮಾಜದ ಅಭಿವೃದ್ಧಿಗಾಗಿ ಶಾಲೆಗಳಿಗೆ ಬೆಂಚ್ ಡೆಸ್ಕ್, ಶಾಲೆಯಲ್ಲಿ ಶಿಕ್ಷಕರ ಕೊರತೆ ಇರುವ ಶಾಲೆಗೆ ಶಿಕ್ಷಕರ ಕೊಡುವುದು, ರುದ್ರಭೂಮಿ ಅಭಿವೃದ್ಧಿ, ಶುದ್ಧಗಂಗಾ ಘಟಕ ನಿರ್ಮಾಣ, ಕೆರೆ ಹೋಳುತೆಗೆಯುವುದು, ಇಂತಹ ಕಾರ್ಯಕ್ರಮಗಳನ್ನು ನೀಡುತ್ತ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಬಂದಿದ್ದಾರೆ ಎಂದು ಜಿಲ್ಲಾ ನಿರ್ದೇಶಕ ಸಂತೋಷ ರೈ ಹೇಳಿದರು.
ಸ್ಥಳೀಯ ರಾಮಲಿಂಗೇಶ್ವರ ಸಂಘದ ಅಧ್ಯಕ್ಷ ರವಿ ಹೂಗಾರ್, ಉಪಾಧ್ಯಕ್ಷ ಪ್ರಭು ಹೂಗಾರ, ಕಾರ್ಯದರ್ಶಿ ಮಹಾಂತಗೌಡ ಎಸ್ ಪಾಟೀಲ, ಸಿದ್ದಪ್ಪ ಎಸ್ ಹೂಗಾರ್, ಶಾಂತಪ್ಪ ಬಿ ವಡವಡಗಿ, ಶಾಂತಪ್ಪ ಎಸ್ ಹೂಗಾರ, ಗುರುಬಸಪ್ಪಗೌಡ ಬಿರಾದಾರ, ಪರುತಯ್ಯ S ಮಠಪತಿ, ಸಂಗಣ್ಣ ಜಿ ಕೋಣ್ಣನವರ, ಶ್ರೀಶೈಲ ಎಚ್ ಸಜ್ಜನ, ಮಲ್ಲನಗೌಡ ಬಿ ಬಿರಾದಾರ ಹಾಗೂ ಮೇಲ್ವಿಚಾರಕಿ ಶ್ರೀಮತಿ ಲಲಿತಾ M B, ಸೇವಾಪ್ರತಿನಿಧಿ ಚನ್ನಮ್ಮ ಬಿರಾದಾರ ಹಾಗೂ ಗ್ರಾಮಸ್ಥರು ಸೇರಿದಂತೆ ಪ್ರಗತಿ ಬಂಧು ಸ್ವ ಸಹಾಯ ಸಂಘದ ಸದ್ಯಸರು ಭಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.
ಧರ್ಮಸ್ಥಳ ಸಂಸ್ಥೆಯಿಂದ ದೇಗುಲ ಜೀರ್ಣೋದ್ಧಾರಕ್ಕೆ ರೂ.೨ಲಕ್ಷ ದೇಣಿಗೆ
Related Posts
Add A Comment

