ಮೋರಟಗಿ ಚೆಕ್ ಪೋಸ್ಟಗೆ ಚುನಾವಣಾಧಿಕಾರಿ & ಸಿಪಿಐ ಭೇಟಿ | ದಾಖಲಾತಿ ಪರಿಶೀಲನೆ
ಮೋರಟಗಿ: ಗಡಿ ಭಾಗದ ಕೊನೆಯ ಚೆಕ್ ಪೋಸ್ಟ್ ಇದಾಗಿದೆ ಕಡ್ಡಾಯವಾಗಿ ಪ್ರತಿಯೊಂದು ವಾಹನ ಮೇಲೆ ಹದ್ದಿನ ಕಣ್ಣಿರಿಸಿ ಎಂದು ಸಿಂದಗಿ ೩೩ ಸಹಾಯಕ ಚುನಾವಣಾ ಅಧಿಕಾರಿ ವಿನಯಕುಮಾರ ಪಾಟೀಲ ಹೇಳಿದರು.
ಲೋಕಸಭಾ ಚುನಾವಣೆ ಹಿನ್ನೆಲೆ ನಿರ್ಮಿಸಲಾದ ಚೆಕ್ ಪೋಸ್ಟಗೆ ಶುಕ್ರವಾರ ಭೇಟಿ ನೀಡಿ ದಾಖಲಾತಿ ಪರಿಶೀಲಿಸಿ ಅವರು ಮಾತನಾಡಿದರು.
ರಾಷ್ಟ್ರೀಯ ಹೆದ್ದಾರಿ ಆಗಿರುವುದರಿಂದ ಬೇರೆ ಬೆರೆ ಜಿಲ್ಲೆಗಳಿಂದ ಸಾವಿರಾರು ವಾಹನಗಳು ಸಂಚಿರಿಸುತ್ತವೆ ಕರ್ತವ್ಯದಲ್ಲಿ ಲೋಪ ಮಾಡದೆ ಮುಲಾಜಿಲ್ಲದೆ ಪ್ರತಿ ವಾಹನ ಕೂಡಾ ಪರಿಶೀಲಿಸಿ ಅನಧಿಕೃತ ಸಾರಾಯಿ, ದಾಖಲಾತಿ ಇಲ್ಲದ ದುಡ್ಡು ಕಂಡಲ್ಲಿ ಕೂಡಲೇ ಮೇಲ್ಲಾಧಿಕಾರಿಗಳ ಗಮನಕ್ಕೆ ತನ್ನಿ ಎಂದು ಚೆಕ್ ಪೋಸ್ಟನಲ್ಲಿ ಕಾರ್ಯನಿರ್ವಾಹಿಸುವ ಅಧಿಕಾರಿಗಳಿಗೆ ಸೂಚಿಸಿದರು.
ಮೂಲ ಸೌಕರ್ಯ ವದಗಿಸಲು ಸೂಚನೆ : ಚೆಕ್ ಪೋಸ್ಟನಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಗಳಿಗೆ ಶುದ್ಧ ಕುಡಿಯುವ ನೀರು ಊಟದ ವ್ಯವಸ್ಥೆ ವಿದ್ಯುತ್ ಸಿ ಸಿ ಕ್ಯಾಮೀರಾ, ಟಾರ್ಚಾ ವ್ಯವಸ್ಥೆ ಕಲ್ಪಿಸಬೇಕು ಎಂದು ಸಂಬಂಧ ಪಟ್ಟ ಅಧಿಕಾರಿಗಳಿಗೆ ಫೋನ್ ಕರೆ ಮುಖಾಂತರ ಸೂಚಿಸಿದರು.
ಚುನಾವಣಾ ಅಧಿಕಾರಿ ಬರುತ್ತಿದ್ದಂತೆ ಸಿಂದಗಿ ಸಿಪಿಐ ನಾನಗೌಡ ಪೊಲೀಸ ಪಾಟೀಲ್ ಭೇಟಿನೀಡಿ
ನೀಡಿದರು ಕರ್ತವ್ಯದಲ್ಲಿ ನೀರತಾದ ಎಲ್ಲ ಪೊಲೀಸ್ ಸಿಬ್ಬಂದಿಗಳೊಂದಿಗೆ ಚೆಕ್ ಪೋಸ್ಟ್ ಕುರಿತು ಚರ್ಚಿಸಿ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸಲು ತಿಳಿಸಿದರು.
ವಾಹನ ಪರಿಶೀಲನೆ ಸಂದರ್ಭದಲ್ಲಿ ಆಲ್ಮೆಲ್ ತಾಲೂಕ ದಂಡಾಧಿಕಾರಿ ಮಹಾದೇವ ಸಣಮುರಿ, ರಾಘವೇಂದ್ರ ಚಕ್ರವರ್ತಿ, ಪೊಲೀಸ್ ಸಿಬ್ಬಂದಿಗಳಾದ ಎಸ್ ಎಂ ಬತ್ತಗೌಡರ, ಪರಶುರಾಮ ಕೊಳಕಕೂರ, ಗ್ರಾಮ ಲೆಕ್ಕಾಧಿಕಾರಿ ಎಂ ಎಸ್ ಸಾಳುಂಕೆ, ವಿಶ್ವನಾಥ ವಾಲಿಕಾರ, ರವಿ ನಡುವಿನಕೇರಿ, ಇಸುಫ್ ಮುಲ್ಲಾ, ತಮ್ಮಣ್ಣ ಬೋನಾಳ ಇದ್ದರು.

