ದೇವರಹಿಪ್ಪರಗಿ: ಶ್ರೀಜಗದ್ಗುರು ರೇಣುಕಾಚಾರ್ಯರು ವೀರಶೈವಧರ್ಮವನ್ನು ನೆಲೆಗೊಳಿಸಿದ ಮಹಾತ್ಮರು. ಸರ್ಕಾರ ಅವರ ಜೀವನ, ಸಾಧನೆಗಳನ್ನು ಪಠ್ಯದಲ್ಲಿ ಸೇರಿಸಲು ಮುಂದಾಗಬೇಕು ಎಂದು ಜಡಿಮಠದ ಜಡಿಸಿದ್ಧೇಶ್ವರಶ್ರೀಗಳು ಹೇಳಿದರು.
ಪಟ್ಟಣದ ಪಂಚಾಚಾರ್ಯ ಕಲ್ಯಾಣಮಂಟಪದಲ್ಲಿ ಶುಕ್ರವಾರ ಜರುಗಿದ ರೇಣುಕಾಚಾರ್ಯ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ರೇಣಕಾಚಾರ್ಯರು ಪರಶಿವನ ಪಂಚಬ್ರಹ್ಮ ಮುಖದಿಂದ ಆವಿರ್ಭವಿಸಿದ ಪಂಚಾಚಾರ್ಯರರಲ್ಲಿ ಪ್ರಥಮ ಗಣೇಶ್ವರರಾಗಿದ್ದಾರೆ. ಇವರು ಕೊಲ್ಲಿಪಾಕಿಯಲ್ಲಿ ೧೮ ಮಠಗಳನ್ನು ಕಟ್ಟಿಸಿ ಎಲ್ಲ ಕುಲದವರಿಗೂ ಶಿವಜ್ಞಾನವನ್ನು ಪಡೆಯಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದರು.
ನಿವೃತ್ತ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಸಿ.ಕೆ.ಕುದರಿ ಮಾತನಾಡಿ, ರೇಣುಕಾಚಾರ್ಯರನ್ನು ಕೇವಲ ವೀರಶೈವರಿಗೆ ಸೀಮಿತಗೊಳಿಸದೇ ವೀರಶೈವ ಲಿಂಗಾಯತ ಸಮುದಾಯದ ಪ್ರಮುಖರ ಉಪಸ್ಥಿತಿಯಲ್ಲಿ ಇಂದು ರೇಣುಚಾರ್ಯರ ಜಯಂತಿ ಆಚರಿಸುತ್ತಿರುವುದು ಉತ್ತಮ ಬೆಳವಣಿಗೆ. ಈ ಸಂಪ್ರದಾಯ ಮುಂದುವರೆಯಲಿ ಎಂದರು.
ತಾಲ್ಲೂಕು ಜಂಗಮಾಭಿವೃದ್ಧಿ ಸಂಘದ ತಾಲ್ಲೂಕು ಅಧ್ಯಕ್ಷ ಸೋಮಶೇಖರ ಹಿರೇಮಠ ಹಾಗೂ ಕಲ್ಯಾಣ ಮಂಟಪ ಸಮಿತಿ ಅಧ್ಯಕ್ಷ ಬಸಯ್ಯ ಮಲ್ಲಿಕಾರ್ಜುನಮಠ ಮಾತನಾಡಿದರು.
ಇದೇ ಸಂದರ್ಭದಲ್ಲಿ ರೇಣುಕರ ಭಾವಚಿತ್ರಕ್ಕೆ ಶಾಸ್ತೋಕ್ತ ಪೂಜೆ, ಪುಷ್ಪವೃಷ್ಠಿ ನೆರವೇರಿಸಿ ಮಂಗಳಾರತಿಯೊಂದಿಗೆ ಪ್ರಸಾದ ವಿತರಿಸಲಾಯಿತು.
ಅವೋಗೇಶ್ವರ ಧಾಮದಶ್ರೀ, ಪಟ್ಟಣ ಪಂಚಾಯಿತಿ ಸದಸ್ಯ ಶಾಂತಯ್ಯ ಜಡಿಮಠ, ಬಾಬುಗೌಡ ಪಾಟೀಲ(ಜಿಡ್ಡಿಮನಿ), ಜಿ.ಎನ್.ಕೋರಿ, ಬಂಡೆಪ್ಪಗೌಡ ಬಿರಾದಾರ(ದಿಂಡವಾರ), ಶಾಂತಗೌಡ ಬಿರಾದಾರ(ಯರನಾಳ), ನಾನಾಗೌಡ ಪಾಟೀಲ(ಯರನಾಳ), ಭೀಮರಾಯ ತೆಗನೂರ, ಅಪ್ಪೋಜಿ ದೇಸಾಯಿ, ಶಿವನಗೌಡ ಪಾಟೀಲ(ಯರನಾಳ), ರಮೇಶ ಮಶಾನವರ, ಹಣಮಂತ ಹಳ್ಳದಮನಿ, ಆನಂದ ಪರದೇಶಿಮಠ, ಈರಣ್ಣ ವಸ್ತçದ, ಕುಮಾರಸ್ವಾಮಿ ಹಿರೇಮಠ, ಕಾಶೀನಾಥ ಹಿರೇಮಠ, ಆನಂದ ಜಡಿಮಠ, ಪ್ರಕಾಶ ಹಿರೇಮಠ, ಶಿವಪ್ಪ ವಸ್ತ್ರದ, ಸಿದ್ದಯ್ಯ ಮಲ್ಲಿಕಾರ್ಜುನಮಠ, ವಿದ್ಯಾನಂದ ಅರಳಿಮಟ್ಟಿ, ಮಂಜುನಾಥ ಮಲ್ಲಿಕಾರ್ಜುನಮಠ. ಮಲ್ಲಿಕಾರ್ಜುನ ಜಡಿಮಠ, ವಿನೋದ ನಾಶೀಮಠ, ಮಲ್ಲಿಕಾರ್ಜುನ ಕೋಳಕೂರ, ಸಂತೋಷ ಮಲ್ಲಿಕಾರ್ಜುನಮಠ ಸೇರಿದಂತೆ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

