ಇಂಡಿ: ಭೂಮಿಯಲ್ಲಿರುವ ಸಕಲ ಜೀವ ರಾಶಿಗಳಿಗೂ ನೀರು ಅಗತ್ಯವಾಗಿ ಬೇಕು. ಆದರೆ ಮನುಷ್ಯನು ನೀರನ್ನು ಬಳಸುವ ಪ್ರಮಾಣವು ಮಾತ್ರ ಹೆಚ್ಚಾಗಿರುತ್ತದೆ. ಕುಡಿಯುವುದರಿಂದ ಹಿಡಿದು ದೈನಂದಿನ ಚಟುವಟಿಕೆಗಳಿಗೆ ನೀರಿನ ಬಳಕೆಯು ಹೆಚ್ಚಿದೆ. ನೀರಿನ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಹೊಣೆಯಾಗಿದೆ. ನಗರ ಪ್ರದೇಶಗಳಲ್ಲಿ ನೀರಿನ ಸಮಸ್ಯೆಯು ಕಾಡುತ್ತಿದೆ. ನಗರ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರು ನೀರನ್ನು ಉಳಿತಾಯ ಮಾಡಲು ಈ ಕೆಲವು ಟಿಪ್ಸ್ ಗಳನ್ನು ಪಾಲಿಸುವುದು ಉತ್ತಮ ಎಂದು ರಸಾಯನಶಾಸ್ತ್ರ ಉಪನ್ಯಾಸಕರು, ಎಸ್.ಕೆ. ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯ ತಾಳಿಕೋಟಿಯ ಆಯ್.ವ್ಹಿ.ರೋಡಗಿ ಹೇಳಿದರು.
ಪಟ್ಟಣದ ಜಿ.ಆರ್.ಗಾಂಧಿ ಕಲಾ, ವಾಯ್.ಎ.ಪಾಟೀಲ ವಾಣಿಜ್ಯ ಹಾಗೂ ಎಮ್.ಪಿ.ದೋಶಿ ವಿಜ್ಞಾನ ಪದವಿ ಮಹಾವಿದ್ಯಾಲಯದಲ್ಲಿ ರಸಾಯನಶಾಸ್ತ್ರ ವಿಭಾಗದ ಅಡಿಯಲ್ಲಿ “ವಿಶ್ವ ಜಲ ದಿನಾಚರಣೆ” ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಾಂಶುಪಾಲರಾದ ಡಾ.ಎಸ್.ಬಿ.ಜಾಧವ ಮಾತನಾಡಿ ಬೇಸಿಗೆಕಾಲ ಆರಂಭವಾಗುತ್ತಿದ್ದಂತೆ ನೀರಿನ ಹಾಹಾಕಾರ ಕಾಣಿಸಿಕೊಳ್ಳುತ್ತವೆ. ದೈನಂದಿನ ಚಟುವಟಿಕೆಗಳಿಗೆ ಬಿಡಿ, ಕುಡಿಯುವುದಕ್ಕೂ ನೀರು ಇರುವುದಿಲ್ಲ. ಕಾಡಿನ ನಾಶದಿಂದ ಸರಿಯಾದ ಸಮಯಕ್ಕೆ ಮಳೆ ಬಾರದೆ ಹಳ್ಳ, ಕೊಳ, ನದಿ ಸೇರಿದಂತೆ ಅದೆಷ್ಟೋ ಸಿಹಿ ನೀರಿನ ಮೂಲಗಳು ಬತ್ತಿ ಹೋಗಿವೆ. ಹೀಗಾಗಿ ಸೃಷ್ಟಿಯಲ್ಲಿರುವ ಸಕಲ ಜೀವರಾಶಿಗಳಿಗೂ ಕುಡಿಯಲು ನೀರಿಲ್ಲ. ನೀರನ್ನು ಮಿತವಾಗಿ ಬಳಸುವವರು ಕೆಲವೇ ಕೆಲವು ಜನರಷ್ಟೆ , ಹೀಗಾಗಿ ನೀರಿನ ಬಳಕೆಯಲ್ಲಿ ಸಣ್ಣ ಪುಟ್ಟ ಬದಲಾವಣೆಯನ್ನು ಮಾಡಿಕೊಂಡು ನೀರನ್ನು ಉಳಿತಾಯ ಮಾಡುವುದು ಕಷ್ಟವೆನಲ್ಲ ಎಂದರು.
ಉಪನ್ಯಾಸಕಿ ಶೃತಿ ಬಿರಾದಾರ, ಉಪನ್ಯಾಸಕ ಪರಶುರಾಮ ಅಜಮನಿ, ಉಪನ್ಯಾಸಕಿ ಶೃತಿ ಪಾಟೀಲ ಮಾತನಾಡಿದರು.
ಡಾ.ವಿಶ್ವಾಸ ಕೊರವಾರ, ಡಾ.ಸುರೆಂದ್ರ ಕೆ, ಡಾ.ಸಿ.ಎಸ್.ಬಿರಾದಾರ, ಡಾ.ಶ್ರೀಕಾಂತ ರಾಠೋಡ, ಮಲ್ಲಿಕಾರ್ಜುನ ಕೋಣದೆ, ಆರ್.ಪಿ.ಇಂಗನಾಳ, ಪಂಕಜ ಕುಲಕರ್ಣಿ, ಬಲರಾಮ ವಡ್ಡರ ಮತ್ತಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

