ವಿಜಯಪುರ: ಪ್ರಜಾಪ್ರಭುತ್ವದ ಸಂವಿಧಾನಿಕ ಹಕ್ಕಾಗಿರುವ ಮತದಾನದಿಂದ ಯಾವುದೇ ಮತದಾರರು ವಂಚಿತರಾಗಬಾರದೆನ್ನುವ ನಿಟ್ಟಿನಲ್ಲಿ ಚುನಾವಣಾ ಆಯೋಗವು ಪ್ರಸ್ತುತ ಲೋಕಸಭಾ ಚುನಾವಣೆಗೆ ೮೫ವರ್ಷ ಮೇಲ್ಪಟ್ಟ ವಯಸ್ಸಿನವರಿಗೆ ಹಾಗೂ ವಿಕಲಚೇತನರಿಗೆ ಮನೆಯಲ್ಲಿಯೇ ಮತ ಚಲಾವಣೆ ಮಾಡುವ ಅವಕಾಶ ನೀಡಿರುತ್ತದೆ.
ಈ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರು ಶುಕ್ರವಾರದಂದು ಜಿಲ್ಲೆಯ ಮನಗೂಳಿ ಹಾಗೂ ಯರನಾಳ ಗ್ರಾಮದ ಮನೆ ಮನೆಗೆ ಭೇಟಿ ನೀಡಿ, ಮತಗಟ್ಟೆಗೆ ಬಂದು ಮತದಾನ ಮಾಡಲು ನಿಶಕ್ತರಾಗಿರುವವರನ್ನು ಮತಗಟ್ಟೆಯ ಬಿಎಲ್‌ಓ ಗಳು ಗುರುತಿಸಿ ನಮೂನೆ ೧೨ಡಿ ಪತ್ರದ ಮೂಲಕ ಮನೆಯಲ್ಲೇ ಮತ ಚಲಾವಣೆ ಮಾಡುವ ಅವಕಾಶ ನೀಡುತ್ತಾರೆ. ಇದನ್ನು ೮೫ ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ವಿಕಲಚೇತನರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
೮೫ ವರ್ಷ ಮೇಲ್ಪಟ್ಟ ವಯೋವೃದ್ಧರಿಗೆ ಮತ್ತು ವಿಕಲಚೇತನ ಮತದಾರರಿಗೆ ನಮೂನೆ ೧೨ ಡಿ ಪತ್ರ ವಿತರಿಸುವ ಮೂಲಕ, ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳು ಜಿಲ್ಲೆಯಲ್ಲಿ ಯಾರೊಬ್ಬರೂ ಮತದಾನ ದಿಂದ ದೂರ ಉಳಿಯದಂತೆ ಮತದಾನದ ಶೇಕಡಾ ಪ್ರಮಾಣ ಹೆಚ್ಚಿಸಲು ಕಾರ್ಯೋನ್ಮುಖರಾಗಿ ಕೆಲಸ ಮಾಡಬೇಕು ಎಂದು ಹೇಳಿದರು.
Subscribe to Updates
Get the latest creative news from FooBar about art, design and business.
Related Posts
Add A Comment

