ದೇವರಹಿಪ್ಪರಗಿ: ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಗ್ರಾಮಾಭಿವೃದ್ಧಿ ಯೋಜನೆ ತಾಲ್ಲೂಕಿನ ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ತನ್ನದೇಯಾದ ಸೇವೆ ಸಲ್ಲಿಸಿ ಜನಪರ ಕಾರ್ಯ ಮಾಡುತ್ತಿದೆ ಎಂದು ಯೋಜನಾಧಿಕಾರಿ ಗಿರೀಶಕುಮಾರ ಎಂ. ಹೇಳಿದರು.
ಪಟ್ಟಣದಲ್ಲಿ ಬುಧವಾರ ದಾನಮ್ಮದೇವಿ ದೇವಸ್ಥಾನದ ಅಭಿವೃದ್ಧಿಗಾಗಿ ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ನೀಡಿದ ಅನುದಾನದ ಚೆಕ್ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಶರಣ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಎಸ್.ಎನ್.ಬಸವರೆಡ್ಡಿ ಮಾತನಾಡಿ, ಮಂಜುನಾಥೇಶ್ವರ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಪಟ್ಟಣ ಹಾಗೂ ತಾಲ್ಲೂಕಿನಲ್ಲಿ ಕೈಗೊಂಡ ಕಾರ್ಯಗಳು ಅತ್ಯಂತ ಶ್ಲಾಘನೀಯವಾದವುಗಳು ಎಂದರು .
ನಿವೃತ್ತ ಜಿಲ್ಲಾ ಜನಜಾಗೃತಿ ಸಮಿತಿ ಸದಸ್ಯ ಪಂಚಾಕ್ಷರಿ ಮಿಂಚನಾಳ, ತಾಲ್ಲೂಕು ಜಂಗನಾಭಿವೃದ್ಧಿ ಸಂಘದ ಅಧ್ಯಕ್ಷ ಸೋಮಶೇಖರ ಹಿರೇಮಠ ಹಾಗೂ ದಾನಮ್ಮಾದೇವಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಬಸಯ್ಯ ಮಲ್ಲಿಕಾರ್ಜುನಮಠ ಮಾತನಾಡಿದರು.
ಪಟ್ಟಣ ಪಂಚಾಯಿತಿ ಸದಸ್ಯ ಶಾಂತಯ್ಯ ಜಡಿಮಠ, ನಿವೃತ್ತ ಶಿಕ್ಷಕ ಶಾಂತಗೌಡ ಬಿರಾದಾರ (ಯರನಾಳ), ಬಂಡೆಪ್ಪಗೌಡ ಬಿರಾದಾರ(ದಿಂಡವಾರ), ಗ್ರಾಮಾಭಿವೃದ್ಧಿ ಯೋಜನೆಯ ವಿಶ್ವನಾಥ ಸದಲಗೆ, ಬಾಬುರಾವ್ ಗೋಣಿ, ಮಹಿಳಾ ಒಕ್ಕೂಟದ ಅಧ್ಯಕ್ಷೆಯರಾದ ಶಕುಂತಲಾ, ಪಾರ್ವತಿ, ಪದ್ಮಾವತಿ, ಸೇವಾಪ್ರತಿನಿಧಿಗಳಾದ ನೀಲಮ್ಮಾ ಬಿರಾದಾರ, ಕಮಲಾ, ಭಾಗೀರಥಿ, ಶೈನಾಜ್, ಶ್ರೀಗೌರಿ, ಗೀತಾ ಸೇರಿದಂತೆ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

