ಅಫಜಲಪುರ: ಭೀಮೆಗೆ ನೀರು ಹರಿಸಿ ರೈತರ ಜೀವ ಉಳಿಸಿ ಎಂದು ಶಿವಕುಮಾರ ನಾಟಿಕಾರ ಅವರು ಅಮರಣಾಂತ ಸತ್ಯಾಗ್ರಹ ಹಮ್ಮಿಕೊಂಡಿದ್ದು ಸತ್ಯಾಗ್ರಹದ ೫ನೇ ದಿನದಂದು ಪಕ್ಕದ ಸಿಂದಗಿ ತಾಲೂಕಿನ ಮಾಜಿ ಶಾಸಕ ರಮೇಶ ಭೂಸನೂರ ಭೇಟಿ ನೀಡಿ ಧರಣಿಗೆ ಬೆಂಬಲಿಸಿದರು.
ಈ ಸಂದರ್ಭದಲ್ಲಿ ಕಲಬುರಗಿ ಹೆಚ್ಚುವರಿ ಎಸ್‌ಪಿ, ತಹಸೀಲ್ದಾರ ಸಂಜೀವಕುಮಾರ ದಾಸರ, ಚಿದಾನಂದ ಮಠ, ರಾಜು ಉಕ್ಕಲಿ, ಅಮರಸಿಂಗ ರಜಪೂತ, ಮಲ್ಲಿಕಾರ್ಜುನ ಸಿಂಗೆ, ಭೀಮರಾವ ಕಲಶೆಟ್ಟಿ, ಅವ್ವಣ್ಣ ಮ್ಯಾಕೇರಿ, ಶರಣು ಪದಕಿ, ಬಸಣ್ಣ ಗುಣಾರಿ, ಶೇಖರಗೌಡ ಆನೂರ ಸೇರಿದಂತೆ ಅನೇಕರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

