ವಿಜಯಪುರ: ಚುನಾವಣೆ ಸಮಯದಲ್ಲಿ ಅಕ್ರಮ ಮಧ್ಯ ಹಾಗೂ ಕಳ್ಳಭಟ್ಟಿ, ಸಾರಾಯಿ ತಯಾರಿಸಿ, ಸಂಗ್ರಹಿಸಿ, ಮಾರಾಟ ಮಾಡುವಂತಹ ಅಕ್ರಮಗಳು ಮಾಡುವ ಹಾಗೂ ಇಂತಹ ಕಳ್ಳ ಭಟ್ಟಿಯನ್ನು ಮತದಾರರಿಗೆ ಸರಬರಾಜು ಮಾಡುವ ಸಾಧ್ಯತೆ ಇದ್ದು, ಇವುಗಳನ್ನು ತಡೆಗಟ್ಟಲು ಅಬಕಾರಿ ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಸಾರ್ವಜನಿಕರು ಮಾಹಿತಿ ನೀಡಲು ೧೮೦೦೪೨೫೦೪೬೧ ಸಹಾಯವಾಣಿ ಆರಂಭಿಸಲಾಗಿದೆ ಎಂದು ಅಬಕಾರಿ ಉಪ ಆಯುಕ್ತರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ನಕಲಿ ಮದ್ಯ ತಯಾರಿಕೆ, ಮಾರಾಟ ಮಾಡುವಂತಹ ಚಟುವಟಿಕೆಗಳು ತಮ್ಮ ವ್ಯಾಪ್ತಿ ಪ್ರದೇಶದ ಸುತ್ತ ಮುತ್ತ ಕಂಡುಬಂದಲ್ಲಿ ಸಂಬಂಧಪಟ್ಟ ಕಂಟ್ರೋಲ್ ರೂಮ್ ಟೋಲ್ ಫ್ರೀ ದೂರವಾಣಿ ಸಂಖ್ಯೆಗೆ ಸಾರ್ವಜನಿಕರು ಕರೆ ಮಾಡಿ ಮಾಹಿತಿ ನೀಡಬಹುದು ಮತ್ತು ಕಂಟ್ರೋಲ್ ರೂಮ್ ಹಾಗೂ ಸಹಾಯವಾಣಿಗೆ ಮಾಹಿತಿ ನೀಡುವವರ ವಿವರಗಳನ್ನು ಗೌಪ್ಯವಾಗಿ ಇಡಲಾಗುವುದು. ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ಹಂಚಲು ಅಥವಾ ಅಕ್ರಮ ಚಟುವಟಿಕೆಗಳನ್ನು ನಡೆಸಲು ಮಾಡುವ ಕಳಭಟ್ಟಿ ಸರಾಯಿ, ನಕಲಿ ಮದ್ಯ ತಯಾರಿಕೆ, ಸಂಗ್ರಹಣೆ ಮತ್ತು ಮಾರಾಟ ಮಾಡುವ ಕಾನೂನು ಬಾಹಿರ ಕೃತ್ಯಗಳ ಬಗ್ಗೆ ಸಾರ್ವಜನಿಕರು ಅಬಕಾರಿ ಇಲಾಖೆಗೆ ಮಾಹಿತಿ ನೀಡಬಹುದಾಗಿದಾಗಿದೆ.
ಸಾರ್ವಜನಿಕರ ಮಾಹಿತಿಗಾಗಿ ಅಧಿಕಾರಿಗಳ ಮತ್ತು ದೂರವಾಣಿ ಸಂಖ್ಯೆಗಳ ವಿವರ:
ಅಬಕಾರಿ ಉಪ ಆಯುಕ್ತರ ಕಚೇರಿ ವಿಜಯಪುರ:೦೮೩೫೨-೨೪೪೦೬೨, ೯೪೪೯೫೯೭೧೬೪, ೯೪೪೯೫೯೭೧೬೫, ೯೪೪೯೫೯೭೧೬೬, ಅಬಕಾರಿ ಉಪ ಅಧೀಕ್ಷಕರು ವಿಜಯಪುರ ಉಪ ವಿಭಾಗ: ೦೮೩೫೨-೨೫೨೪೫೧, ೯೪೪೯೫೯೭೧೬೭, ೯೪೪೯೫೯೭೧೬೮, ೮೦೯೫೭೩೬೬೫೪, ಅಬಕಾರಿ ನಿರೀಕ್ಷಕರು ವಿಜಯಪುರ ವಲಯ: ೦೮೩೫೨-೨೫೪೪೭೮, ೯೫೩೮೬೦೮೬೪೧, ೯೦೩೬೬೪೫೯೪೪,೮೯೭೦೯೮೧೫೫೧, ಅಬಕಾರಿ ನಿರೀಕ್ಷಕರು ಬಸವನ ಬಾಗೇವಾಡಿ ವಲಯ: ೦೮೩೫೮-೨೯೫೦೨೯, ೯೧೬೪೮೫೬೩೧೩, ೯೬೧೧೧೯೯೩೧೪, ೯೯೬೪೨೩೦೩೯೮, ಅಬಕಾರಿ ನಿರೀಕ್ಷಕರು ಮುದ್ದೇಬಿಹಾಳ ವಲಯ: ೦೮೩೫೬-೨೨೨೩೩೧, ೯೮೪೫೬೩೮೯೨೦, ಅಬಕಾರಿ ನಿರೀಕ್ಷಕರು ಇಂಡಿ ವಲಯ: ೦೮೩೫೯-೨೨೨೦೯೩, ೯೬೮೬೮೨೪೯೬೯, ೯೦೩೬೬೪೫೯೪೪, ಅಬಕಾರಿ ನಿರೀಕ್ಷಕರು ಸಿಂದಗಿ ವಲಯ: ೮೮೯೨೧೬೩೫೭೫, ೯೯೮೦೧೮೨೭೭೯, ಬಬಲೇಶ್ವರ: ೮೯೭೦೯೮೧೫೫೧, ದೇವರ ಹಿಪ್ಪರಗಿ: ೯೯೬೪೨೩೦೩೯೮ ಇವರನ್ನು ಸಂಪರ್ಕಿಸಬಹುದು ಎಂದು ಅಬಕಾರಿ ಉಪ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
ಅಬಕಾರಿ ಅಕ್ರಮಗಳ ನಿಯಂತ್ರಣಕ್ಕೆ೧೮೦೦೪೨೫೦೪೬೧ ಗೆ ಮಾಹಿತಿ ನೀಡಿ
Related Posts
Add A Comment
