ವಿಜಯಪುರ: ಜಿಲ್ಲೆಯಲ್ಲಿ ಸಾರ್ವಜನಿಕರಿಗೆ ಯಾವುದೇ ಕಾರಣಕ್ಕೂ ಕುಡಿಯುವ ನೀರಿನ ತೊಂದರೆ ಎದುರಾಗದಂತೆ, ಕುಡಿಯುವ ನೀರಿನ ಸಮಸ್ಯೆಯನ್ನು ನಿಗದಿತ ಸಮಯದಲ್ಲಿ ನಿವಾರಿಸುವ ಉದ್ದೇಶದಿಂದ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಕಚೇರಿಗಳಲ್ಲಿ ಸಹಾಯವಾಣಿಯನ್ನು ಪ್ರಾರಂಭಿಸಲಾಗಿದೆ.
ಸಾರ್ವಜನಿಕರು ಕುಡಿಯುವ ನೀರಿನ ಸಮಸ್ಯೆ ಉಂಟಾದರೆ ಜಿಲ್ಲಾ ಪಂಚಾಯತ್ ವಿಜಯಪುರ(೦೮೩೫೨-೨೭೭೨೯೩), ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರ ಕಚೇರಿ(೦೮೩೫೨-೨೭೭೯೪೧), ಮುದ್ದೇಬಿಹಾಳ(೦೮೩೫೬-೨೦೦೬೦೬), ತಾಳಿಕೋಟೆ (೦೮೩೫೬-೨೦೦೧೦೩), ಸಿಂದಗಿ (೦೮೪೮೮-೨೨೧೭೭೨), ದೇವರಹಿಪ್ಪರಗಿ (೦೮೪೨೪-೨೦೦೧೧೪), ಆಲಮೇಲ (೦೮೪೮೮-೨೯೮೯೦೦), ವಿಜಯಪುರ (೦೮೩೫೨-೨೫೪೦೪), ಬಬಲೇಶ್ವರ(೦೮೩೫೫-೨೦೦೦೦೫), ತಿಕೋಟಾ (೦೮೩೫೨-೨೦೦೧೨೯), ಇಂಡಿ (೦೮೩೫೯-೨೦೦೦೨೬), ಚಡಚಣ (೯೪೮೦೮೩೧೭೩೨), ಬಸವನ ಬಾಗೇವಾಡಿ (೦೮೩೫೮-೨೪೫೨೩೬), ನಿಡಗುಂದಿ (೦೮೪೨೬-೨೦೦೧೬೫), ಕೋಲಾರ (೦೮೪೨೬-೨೦೦೧೦೩) ಈ ಸಹಾಯವಾಣಿಗಳನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾ ಅಧಿಕಾರಿ ರಿಶಿ ಆನಂದ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
