Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಕೃಷಿ ಅಧಿಕಾರಿ ಮನೆ ಮೇಲೆ ದಾಳಿ: ರೂ.2.5 ಕೋಟಿ ಅಕ್ರಮ ಆಸ್ತಿ ಪತ್ತೆ

ದೌರ್ಜನ್ಯ ಪ್ರಕರಣ ಗಂಭೀರವಾಗಿ ಪರಿಗಣಿಸಿ ಇತ್ಯರ್ಥಗೊಳಿಸಿ

ಯಶಸ್ಸು ಸಾಧನೆಗೆ ಆಧ್ಯಾತ್ಮಿಕತೆ ನೆರವು :ಮೋಕ್ಷಾನಂದಜಿ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಕೀಳರಿಮೆಯಿಂದ ಮುಕ್ತರಾಗಬೇಕೆ?
ವಿಶೇಷ ಲೇಖನ

ಕೀಳರಿಮೆಯಿಂದ ಮುಕ್ತರಾಗಬೇಕೆ?

By Updated:No Comments3 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

“ಜಯ್ ನುಡಿ” (ವ್ಯಕ್ತಿತ್ವ ವಿಕಸನ ಲೇಖನ)

– ಜಯಶ್ರೀ. ಜೆ.ಅಬ್ಬಿಗೇರಿ
ಸ ಪ ಪೂ ಕಾಲೇಜು ಹಿರೇಬಾಗೇವಾಡಿ, ಜಿ: ಬೆಳಗಾವಿ, ಮೊ:೯೪೪೯೨೩೪೧೪೨

ಬಹುತೇಕರು ದೈಹಿಕವಾಗಿ ಬಲಿಷ್ಟವಾಗಿದ್ದರೂ ಮಾನಸಿಕವಾಗಿ ಶಕ್ತಿಶಾಲಿಯಾಗಿರುವದಿಲ್ಲ. ಧೈರ್ಯದ ಕೊರತೆಯಿಂದ ಕೀಳರಿಮೆ ಎಂಬ ಮಾನಸಿಕ ರೋಗದಿಂದ ಬಳಲುತ್ತಿರುತ್ತಾರೆ. ತನ್ನಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎನ್ನುವುದನ್ನು ಬಲವಾಗಿ ನಂಬಿ ತನ್ನ ಸಾಮರ್ಥ್ಯದ ಬಗೆಗೆ ಅಪನಂಬಿಕೆ ಹೊಂದಿರುವುದು ಕೀಳರಿಮೆಗೆ ಕಾರಣ. ತನ್ನನ್ನು ತಾನರಿಯದೆ ಅಜ್ಞಾನದ ಕೂಪದಲ್ಲಿ ಬಿದ್ದು ನರಳುತ್ತಾರೆ.
ನನ್ನಲ್ಲಿ ಅಪಾರ ಶಕ್ತಿ ಸಾಮರ್ಥ್ಯ ಅಡಗಿದೆ ಕಠಿಣತಮವಾದುದುನ್ನು ನಾನು ಸಾಧಿಸಬಲ್ಲೆ ಎಂಬ ದೃಡನಂಬಿಕೆ ಬೆಳೆಸಿಕೊಳ್ಳಬೇಕು. ಇದನ್ನೇ ಅಲ್ಲವೇ ವಿವೇಕಾನಂದರು ತಮ್ಮ ವಿದ್ಯುತ್ ವಾಣಿಯಲ್ಲಿ ಹೇಳಿದ್ದು. ಆತ್ಮವಿಶ್ವಾಸದ ಮಟ್ಟವನ್ನು ಬೆಳೆಸಿಕೊಳ್ಳಬೇಕೆ ವಿನಃ ನಾನು ಎಂಬ ಅಹಂಕಾರವನ್ನಲ್ಲ. ಅಹಂಭಾವವು ಅಧೋಗತಿಗೆ ಮುನ್ನುಡಿ ಬರೆಯುತ್ತದೆ. ಹೀಗಾಗಿ ಅಹಂಭಾವವನ್ನು ತೊರೆಯಬೇಕು. ಪ್ರಾರಂಭದಲ್ಲಿ ಚಿಕ್ಕ ಪುಟ್ಟ ಕೆಲಸಗಳನ್ನು ಮಾಡುತ್ತ ಅದರಲ್ಲಿ ಯಶ ಪಡೆದ ಮೇಲೆ ನಾನು ದುರ್ಬಲನಲ್ಲ’ ಎನ್ನುವ ನಕಾರಾತ್ಮಕ ಭಾವನೆಯನ್ನು ಮನಸ್ಸಿನಿಂದ ತೊಡೆದು ಹಾಕಬೇಕು. ಪ್ರತಿಯೊಬ್ಬ ವ್ಯಕ್ತಿಗೂ ತಾನೇನಾಗಬೇಕೆಂದು ಬಯಸುವನೋ ಅದೇ ಆಗುವ ಶಕ್ತಿ ಅವನಲ್ಲಿದೆ.ಸಣ್ಣ ಗುರಿಯನ್ನು ಹೊಂದಿರುವದು ಅಪರಾಧ’ ಎಂದು ನಮ್ಮ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು ಹೇಳಿದ್ದಾರೆ. ಸಣ್ಣ ಗುರಿಯನ್ನು ಹೊಂದುವುದೇ ಅಪರಾಧವೆಂದಿರುವಾಗ ಕೀಳರಿಮೆ ಹೊಂದುವದು ಅದಕ್ಕಿಂತ ದೊಡ್ಡ ಅಪರಾಧ. ಅತ್ಯುನ್ನತವಾದುದನ್ನು ಸಿದ್ದಿಸಿಕೊಳ್ಳಬೇಕು ಸಮಾಜದಲ್ಲಿ ಭಿನ್ನ ವ್ಯಕ್ತಿಯಾಗಿ ಇತರರಿಗೆ ಮಾದರಿಯಾಗಿ ಬಾಳಬೇಕೆಂದು ಇಚ್ಛಿಸಿದರೆ ಅಂಥ ಮಹಾನ ಶಕ್ತಿ ನಮ್ಮಲ್ಲಿ ಉತ್ಪತ್ತಿಯಾಗುತ್ತದೆ.
ನಮ್ಮನ್ನು ನಾವು ಕೈಲಾಗದವರು, ಅಬಲರು, ನಿಷ್ಪ್ರಯೋಜಕರು ಎಂದು ತಪ್ಪಾಗಿ ಭಾವಿಸಿಕೊಳ್ಲುವದು ಅಪಾಯಕಾರಿ ಸಂಗತಿ. ನಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಗುರುತಿಸಿಕೊಳ್ಳುವದನ್ನು ಕಲಿಯಬೇಕು. ನಮ್ಮನ್ನು ನಾವು ನಂಬುವ ಮೂಲಕ ಕೀಳರಿಮೆಯಿಂದ ಮುಕ್ತಿ ಪಡೆಯಬಹುದು.
ಬಹಳಷ್ಟು ಸಲ ಚಿಕ್ಕ ಮಕ್ಕಳಿದ್ದಾಗಲೇ ಈ ಕೀಳರಿಮೆ ಭಾವ ಮೊಳಕೆಯೊಡೆಯುವ ಸಾಧ್ಯತೆ ಹೆಚ್ಚಾಗಿರುತ್ತದೆ. ಕಾರಣ ಮಕ್ಕಳಿಗೆ ಸಾಧಕರ ಜೀವನ ಚರಿತ್ರೆಗಳನ್ನು ಬೋಧಿಸಬೇಕು. ಸಾಹಸಮಯ ಕಥೆಗಳಿರುವ ಚಲನಚಿತ್ರಗಳನ್ನು ನೋಡಲು ಪ್ರೇರೇಪಿಸಬೇಕು. ಇದರಿಂದ ಕೀಳರಿಮೆ ಭಾವ ಮಕ್ಕಳಲ್ಲಿ ಮೂಡದೇ ಸಾಹಸ ಪ್ರವೃತ್ತಿಯು ಎಚ್ಚೆತ್ತುಕೊಳ್ಳುತ್ತದೆ. ಅಲ್ಲದೆ ಮಕ್ಕಳು ಬಾಲ್ಯದಿಂದಲೇ ಕೀಳರಿಮೆಯಿಂದ ಮುಕ್ತರಾಗಿ ಭವಿಷ್ಯದ ಜೀವನದಲ್ಲಿ ಸಮಸ್ಯೆಗಳಿಗೆ ಎದೆಗುಂದದೆ, ಸಮಸ್ಯೆಗಳು ಜೀವನದ ಅವಿಭಾಜ್ಯ ಅಂಗಗಳೆಂದು ತಿಳಿದು ಧೈರ್ಯದಿಂದ ಮುನ್ನುಗ್ಗುತ್ತಾರೆ,
ಬಾಲ್ಯದಲ್ಲಿಯೇ ಮಕ್ಕಳಿಗೆ ಅವರಲ್ಲಡಗಿದ ಸೂಪ್ತ ಪ್ರತಿಭೆಯ ಬಗೆಗೆ ಮನದಟ್ಟಾಗುವಂತೆ ವಿವರಿಸುವದು ಅವಶ್ಯ. ಚಿಕ್ಕ ಪುಟ್ಟ ಕೆಲಸಗಳನ್ನು ಅವರಿಗೆ ಮಾಡಲು ಬಿಡಬೇಕು ಅವರು ಕೆಡಿಸುತ್ತಾರೆ ಹಾಳು ಮಾಡುತ್ತಾರೆ ಎಂದು ಅವರಿಗೆ ಅವರ ಕೆಲಸಗಳನ್ನು ಮಾಡಲು ಬಿಡದೆ ಪರಾವಲಂಬಿಗಳನ್ನಾಗಿಸಬಾರದು. ತಮ್ಮ ಕೆಲಸ ತಾವು ಮಾಡಿಕೊಳ್ಳುವುದರಿಂದ ಮನೆಯಲ್ಲಿ ತಂದೆ ತಾಯಿಗೆ ಸಹಾಯ ಮಾಡುವುದರಿಂದ ಅವರ ಆತ್ಮವಿಶ್ವಾಸದ ಮಟ್ಟ ಹೆಚ್ಚುತ್ತದೆ. ಇವೆಲ್ಲವುಗಳಿಂದ `ನಾನೂ ಮಾಡಬಲ್ಲೆ’ ಎನ್ನುವ ನಂಬಿಕೆ ಬೆಳೆಯುತ್ತದೆ. ಅಂಜಿಕೆ ಹೆದರಿಕೆ ಭಯದಂಥ ನಕಾರಾತ್ಮಕ ಭಾವಗಳನ್ನು ಬಿಟ್ಟು ಸಮಸ್ಯೆಗಳನ್ನು ಎದೆಗಾರಿಕೆಯಿಂದ ಎದುರಿಸುವ ಮನೋಭಾವ ಬೆಳೆಯುತ್ತದೆ. ಸ್ವಾವಲಂಬನೆಯ ಬದುಕಿಗೆ ಬುನಾದಿ ಹಾಕಿದಂತಾಗುತ್ತದೆ.


ನಿಮ್ಮ ಮಕ್ಕಳನ್ನು ಇತರರ ಮಕ್ಕಳೊಂದಿಗೆ ಹೋಲಿಸಿ ಬೈಯಬೇಡಿ. ಅವರ ಮೇಲೆ ದುಷ್ಪರಿಣಾಮ ಬೀಳುತ್ತದೆ. ಕೇವಲ ಅವರ ದೌರ್ಬಲ್ಯಗಳ ಕುರಿತು ಹೇಳುತ್ತಾ ಚಿಕ್ಕ ಪುಟ್ಟ ತಪ್ಪುಗಳಿಗೆ ದೊಡ್ಡ ಶಿಕ್ಷೆ ಕೊಡುತ್ತಾ ಹೋದರೆ ಅರಳುವ ಮುನ್ನವೇ ಮೊಗ್ಗನ್ನು ಚಿವುಟಿದ ಹಾಗಾಗುತ್ತದೆ. ಹೆತ್ತವರು ಹೀಗೆ ಮಕ್ಕಳೊಂದಿಗೆ ನಡೆದುಕೊಳ್ಳುವದರಿಂದ ಅವರು ಮುಂದೆ ತೀವ್ರ ಖಿನ್ನತೆಗೊಳಗಾಗಿ ಮಾನಸಿಕ ಸ್ಥಿಮಿತ ಕಳೆದುಕೊಂಡು ಕ್ರೂರಿಗಳಾಗುವ ಅಪಾಯವೂ ಇರುತ್ತದೆ.
ಪ್ರತಿ ಮಗುವಿನಲ್ಲೂ ಅಗಾಧವಾದ ಪ್ರತಿಭೆಯೊಂದು ಸೂಪ್ತವಾಗಿರುತ್ತದೆ ಅದನ್ನು ಅವರ ಅರಿವಿಗೆ ಬರುವಂತೆ ಮಾಡಿ ಶಹಭಾಸಗಿರಿ ನೀಡುತ್ತಿದ್ದರೆ ಅವರ ನಡುವಳಿಕೆಯಲ್ಲಿ ಅಗಾಧವಾದ ಧನಾತ್ಮಕ ಬದಲಾವಣೆಗಳನ್ನು ಕಾಣಬಹುದು. ತಾನು ಸ್ವ ಸಾಮರ್ಥ್ಯದಿಂದ ವಿಶೇಷವಾದುದುನ್ನು ಸಾಧಿಸಬಲ್ಲೆ ಎಂಬ ಸಂಪೂರ್ಣ ವಿಶ್ವಾಸ ತುಂಬುತ್ತದೆ. ತನ್ನ ಜೀವನದ ಗುರಿ ಧ್ಯೇಯಗಳನ್ನು ನಿರ್ಧರಿಸುವ ಅವುಗಳನ್ನು ಸಾಕಾರಗೊಳಿಸಿಕೊಳ್ಳುವ ಶಕ್ತಿಯು ಬೆಳೆಯುತ್ತದೆ.
ಅನುಭವಗಳಿಂದ ಪಾಠ ಕಲಿತು ಯಾವುದು ಸರಿ ಯಾವುದು ತಪ್ಪು ಯಾವ ಸಂಧರ್ಭಗಳಲ್ಲಿ ಹೇಗೆ ನಡೆದುಕೊಳ್ಳಬೇಕು ಮಾತನಾಡಬೇಕು ಎನ್ನುವ ಉತ್ತಮ ಅಂಶಗಳನ್ನು ಅಳವಡಿಸಿಕೊಳ್ಳುತ್ತಾರೆ. ಕೀಳರಿಮೆ ನಮ್ಮ ವಿಚಾರಗಳಿಗೆ ಸಂಬಂಧಿಸಿದೆ. ಆದ್ದರಿಂದ ನಮ್ಮ ಮನಸ್ಸಿನಲ್ಲಿ ಮೂಡುವ ವಿಚಾರಗಳು ಉತ್ತಮವಾಗಿರುವಂತೆ ನೋಡಿಕೊಳ್ಳಬೇಕು. ಮೇಧಾವಿಗಳ ಜೊತೆ ಸಜ್ಜನರ ಸಂಗದಲ್ಲಿರಬೇಕು.
ಶಕ್ತಿಗಿಂತ ಯುಕ್ತಿ ಮೇಲು ಎಂಬ ಮಾತಿನಂತೆ ಮನುಷ್ಯ ಕಾಡು ಪ್ರಾಣಿಗಳಾದ ಸಿಂಹ ಹುಲಿ ಆನೆಗಳಿಗಿಂತ ದೈಹಿಕವಾಗಿ ಅಶಕ್ತವಾಗಿದ್ದರೂ ಯುಕ್ತಿಯಿಂದ ಅವುಗಳನ್ನು ಪಳಗಿಸಿದ್ದಾನೆ. ಬಲಿಷ್ಟ ಪ್ರಾಣಿಗಳ ಮೇಲೆ ಹಿಡಿತ ಸಾಧಿಸಲು ಮಾನವನ ಮನೋಬಲವೇ ಕಾರಣ. ವಿವೇಕಭರಿತವಾದ ಜೀವನವನ್ನು ನಡೆಸಿದರೆ ಕೀಳರಿಮೆಯಿಂದ ಪಾರಾಗಬಹುದು. ನಮ್ಮ ಬದುಕನ್ನು ಹಸನಾಗಿಸಿಕೊಂಡು, ಮಕ್ಕಳಿಗೆ ಸುಂದರವಾದ ಬಾಳನ್ನು ನೀಡಬಹುದು.

– ಜಯಶ್ರೀ. ಜೆ.ಅಬ್ಬಿಗೇರಿ
ಸ ಪ ಪೂ ಕಾಲೇಜು ಹಿರೇಬಾಗೇವಾಡಿ, ಜಿ: ಬೆಳಗಾವಿ, ಮೊ:೯೪೪೯೨೩೪೧೪೨

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಕೃಷಿ ಅಧಿಕಾರಿ ಮನೆ ಮೇಲೆ ದಾಳಿ: ರೂ.2.5 ಕೋಟಿ ಅಕ್ರಮ ಆಸ್ತಿ ಪತ್ತೆ

ದೌರ್ಜನ್ಯ ಪ್ರಕರಣ ಗಂಭೀರವಾಗಿ ಪರಿಗಣಿಸಿ ಇತ್ಯರ್ಥಗೊಳಿಸಿ

ಯಶಸ್ಸು ಸಾಧನೆಗೆ ಆಧ್ಯಾತ್ಮಿಕತೆ ನೆರವು :ಮೋಕ್ಷಾನಂದಜಿ

ಬೆಂಬಲ ಬೆಲೆ ಯೋಜನೆ: ಮೆಕ್ಕೆಜೋಳ ಖರೀದಿಗೆ ರೈತರಿಂದ ನೋಂದಣಿ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಕೃಷಿ ಅಧಿಕಾರಿ ಮನೆ ಮೇಲೆ ದಾಳಿ: ರೂ.2.5 ಕೋಟಿ ಅಕ್ರಮ ಆಸ್ತಿ ಪತ್ತೆ
    In (ರಾಜ್ಯ ) ಜಿಲ್ಲೆ
  • ದೌರ್ಜನ್ಯ ಪ್ರಕರಣ ಗಂಭೀರವಾಗಿ ಪರಿಗಣಿಸಿ ಇತ್ಯರ್ಥಗೊಳಿಸಿ
    In (ರಾಜ್ಯ ) ಜಿಲ್ಲೆ
  • ಯಶಸ್ಸು ಸಾಧನೆಗೆ ಆಧ್ಯಾತ್ಮಿಕತೆ ನೆರವು :ಮೋಕ್ಷಾನಂದಜಿ
    In (ರಾಜ್ಯ ) ಜಿಲ್ಲೆ
  • ಬೆಂಬಲ ಬೆಲೆ ಯೋಜನೆ: ಮೆಕ್ಕೆಜೋಳ ಖರೀದಿಗೆ ರೈತರಿಂದ ನೋಂದಣಿ
    In (ರಾಜ್ಯ ) ಜಿಲ್ಲೆ
  • ಬೂದಿ ತುಂಬಿದ ವಾಹನಗಳಿಂದ ವಾಯು ಮಾಲಿನ್ಯ ತಡೆಗಟ್ಟಲು ಆಗ್ರಹ
    In (ರಾಜ್ಯ ) ಜಿಲ್ಲೆ
  • ಲಿಂ.ಚೆನ್ನಬಸವ ಶ್ರೀ, ದಿ.ಶಾಮನೂರ ಶಿವಶಂಕರಪ್ಪ ರಿಗೆ ಶ್ರದ್ಧಾಂಜಲಿ
    In (ರಾಜ್ಯ ) ಜಿಲ್ಲೆ
  • ಚಡಚಣದಲ್ಲಿ ಕಳ್ಳರ ಹಾವಳಿ: ಭಯಭೀತಿಯಲ್ಲಿ ನಾಗರಿಕರು
    In (ರಾಜ್ಯ ) ಜಿಲ್ಲೆ
  • ಅಂತರ್ಜಾಲದ ಬಳಕೆ ಅತ್ಯಂತ ಜಾಗರೂಕತೆಯಿಂದ ನಿರ್ವಹಣೆ ಮಾಡಿ
    In (ರಾಜ್ಯ ) ಜಿಲ್ಲೆ
  • ದ್ವೇಷ ಭಾಷಣ ವಿರೋಧಿ ಮಸೂದೆಗೆ ರಾಜ್ಯಪಾಲರು ಒಪ್ಪಬಾರದು
    In (ರಾಜ್ಯ ) ಜಿಲ್ಲೆ
  • ಪಿಪಿಪಿ ಮಾದರಿ ಬಿಜೆಪಿ ಹಾಗೂ ಮೋದಿ ಅವರ ಕೂಸು
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2025 udayarashminews.com. Designed by udayarashmi news .

Type above and press Enter to search. Press Esc to cancel.