ವಿಜಯಪುರ: ಜಿಲ್ಲೆಯಲ್ಲಿ ವಿದ್ಯುತ್ ಇಲಾಖೆ ಹಾಗೂ ಅರಣ್ಯ ಇಲಾಖೆಯ ನಿರ್ಲಕ್ಷದಿಂದ ಹಾಗೂ ನಿಷ್ಕಾಳಜಿಯಿಂದ ಸರಕಾರದ ತೆರಿಗೆ ಹಣವನ್ನು ವ್ಯರ್ಥ ಹಾಳುಮಾಡುತ್ತಿದ್ದು ಸರಿಯಾದ ಯೋಜನೆಯಿಲ್ಲದೇ ವಿದ್ಯುತ್ ಕಂಬದ ಕೆಳಗೆ ಗಿಡಗಳು ಹಚ್ಚಿರುವುದರಿಂದ ವಾಯರ್‌ಗಳ ಮಧ್ಯ ಗಿಡದ ಕೊಂಬೆ ಬಂದು ಗಾಳಿಗೆ ಒಂದಕ್ಕೊಂದು ತಾಗಿ ಶಾರ್ಟ ಸರ್ಕಿಟ್ ಆಗಿ ಅನೇಕ ಬಾರಿ ಸಮಸ್ಯೆಗಳಾಗಿವೆ. ಇದನ್ನು ಕೂಡಲೇ ಸಂಬಂಧಿಸಿದ ಅಧಿಕಾರಿಗಳಿಗೆ ಆದೇಶ ಮಾಡುವಂತೆ ಆಗ್ರಹಿಸಿ ರೈತಸಂಘದಿಂದ ಅಪರ ಜಿಲ್ಲಾಧಿಕಾರಿ ಮಹದೇವ ಮುರಗಿ ಅವರಿಗೆ ಮನವಿ ಸಲ್ಲಿಸಲಾಯಿತು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಅವರು ಮನವಿ ಸಲ್ಲಿಸಿ ಮಾತನಾಡಿ, ಜೋರಾದ ಗಾಳಿ ಹಾಗೂ ಮಳೆ ಬಂದಾಗ ಗಿಡಗಳ ಎಲೆಗಳು ವಿದ್ಯುತ್ ಕಂಬದ ವಾಯರಗಳು ಒಂದಕ್ಕೊಂದು ತಾಗಿ ಶಾರ್ಟ ಸರ್ಕಿಟ್ ಆಗಿ ವಾರಗಟ್ಟಲೆ ವಿದ್ಯುತ್ ಹೋಗಿರುವ ಉದಾಹರಣೆಗಳಿವೆ. ಇದರಂತೆ ರೈತರಿಗೆ ಹಾಗೂ ಸಾರ್ವಜನಿಕರಿಗೂ ಅನೇಕ ಸಮಸ್ಯೆಗಳು ಆಗಿರುವುದು ಇದೆ. ಈ ಕುರಿತು ಅನೇಕ ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಅಧಿಕಾರಿಗಳು ತಲೆ ಕೆಡಿಸಿಕೊಳ್ಳದೇ ಜಾರಿಕೊಳ್ಳುತ್ತಿದ್ದಾರೆ.
ನಾಗಠಾಣ – ಜಂಬಗಿ ಹೋಗುವ ಸುಮಾರು ೮ ಕಿ.ಮೀ ವರೆಗೆ ರಸ್ತೆಯ ಮಾರ್ಗದಲ್ಲಿ ವಿದ್ಯುತ್ ಕಂಬದ ನೇರವಾಗಿ ಕೆಳಗಡೆ ಗಿಡಗಳು ಎತ್ತರಕ್ಕೆ ಬೆಳೆದು ಕರೆಂಟ್ ವಾಯರಗಳ ಮೇಲೆ ಹಾದು ಹೋಗಿವೆ. ಇದರಿಂದ ಅನೇಕ ಬಾರಿ ವಿದ್ಯುತ್ ಅವಘಡಗಳು ಸಂಭವಿಸಿವೆ. ಇಲಾಖೆಯವರು ಎಲ್ಲಿ ಸಮಸ್ಯೆ ಇದೆ ಎಂದು ಹುಡುಕಾಡಲು ಹರಸಾಹಸಪಟ್ಟಿರುವುದು ಇದೆ.
ಆದ್ದರಿಂದ ಕೂಡಲೇ ವಿದ್ಯುತ್ ಇಲಾಖೆಯವರು ಕಂಬಗಳನ್ನಾದರೂ ಬೇರೆಡೆಗೆ ಸ್ಥಳಾಂತರಿಸಬೇಕು, ಇಲ್ಲ ಅರಣ್ಯ ಇಲಾಖೆಯವರು ಗಿಡಗಳನ್ನು ಬೇರೆಡೆಗೆ ಕೊಂಡೊಯ್ಯಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಸಮಸ್ತ ರೈತರ ಪರವಾಗಿ ಆಗ್ರಹಿಸುತ್ತಿದ್ದೇವೆ. ಕೂಡಲೇ ಎರಡೂ ಇಲಾಖೆಯವರಿಗೆ ಆದೇಶ ಮಾಡಬೇಕೆಂದು ಆಗ್ರಹಿಸಿದರು.
ಈ ವೇಳೆ ಜಿಲ್ಲಾ ಸಂಚಾಲಕ ರಾಮನಗೌಡ ಪಾಟೀಲ(ಬ್ಯಾಲ್ಯಾಳ), ಗೌರವಾಧ್ಯಕ್ಷ ಕಲ್ಲಪ್ಪನಗೌಡ ಪಾರಶೆಟ್ಟಿ, ತಾ.ಉಪಾಧ್ಯಕ್ಷ ಮಹಾದೇವಪ್ಪ ತೇಲಿ, ತಾ.ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಗೋಡೇಕಾರ, ಮುಖಂಡರಾದ ಹೊನಮಲ್ಲ ಸಾರವಾಡ, ರಾಜಕುಮಾರ ಹೊನ್ನಳ್ಳಿ, ಶಿವರಾಜ ಕುಮಟಗಿ ಸೇರಿದಂತೆ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

