ಸಿಂದಗಿ: ಹುದ್ದೆ ಯಾವುದೇ ಇದ್ರು ಸಮಾಜದ ಕಾರ್ಯಕ್ಕಾಗಿ ಸದಾ ಸ್ಪಂದಿಸುತ್ತೇನೆ ಎಂದು ನೂತನ ಮಂಡಲದ ಅಧ್ಯಕ್ಷ ಸಂತೋಷ ಪಾಟೀಲ ಡಂಬಳ ಹೇಳಿದರು.
ಪಟ್ಟಣದ ಡೈಮಂಡ್ ಬ್ಯಾಂಕ್ ಸಭಾಂಗಣದಲ್ಲಿ ತಾಲೂಕು ಪಂಚಮಸಾಲಿ ಸಮಾಜದ ವತಿಯಿಂದ ಹಮ್ಮಿಕೊಂಡ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಪಕ್ಷ ನಿಷ್ಠೆ, ವೃತ್ತಿ ನಿಷ್ಠೆ ಹಾಗೂ ಸಮಾಜ ಪರ ಚಿಂತನೆಗಳು ನಮ್ಮನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತವೆ. ನಾವು ಹುದ್ದೆಗಾಗಿ ಬಡಿದಾಡದೆ ನಿಷ್ಠೆಯಿಂದ ನಮ್ಮ ಕಾರ್ಯಗಳನ್ನು ನಾವು ಜವಾಬ್ದಾರಿಯಿಂದ ಮಾಡುತ್ತಾ ಹೋದರೆ ಹುದ್ದೆಗಳೇ ನಮ್ಮನ್ನು ಹುಡುಕಿಕೊಂಡು ಬರುತ್ತವೆ. ಕಾರಣ ನಾವು ಯಾರೇ ಇರಲಿ ನಮ್ಮ ನಮ್ಮ ಕರ್ತವ್ಯಗಳನ್ನು ನಿಷ್ಠೆಯಿಂದ ಪಾಲಿಸೋಣ ಎಂದರು.
ಇದೇ ಸಂದರ್ಭದಲ್ಲಿ ಸಮಾಜದ ತಾಲೂಧ್ಯಕ್ಷ ಎಂ.ಎಂ.ಹಂಗರಗಿ, ಅಧ್ಯಕ್ಷತೆ ವಹಿಸಿದ್ದ ವ್ಹಿ.ಬಿ ಕುರುಡೆ ಮಾತನಾಡಿ, ಪಾಟೀಲ ಅವರು ಸದಾ ಕ್ರಿಯಾಶೀಲ ವ್ಯಕ್ತಿ. ಸಮಾಜ ಮುಖಿಯಾಗಿ ಎಲ್ಲರೊಂದಿಗೂ ಬೆರೆಯುವ ಸರಳ ವ್ಯಕ್ತಿತ್ವವನ್ನು ಹೊಂದಿದ್ದಾರೆ. ಜವಾಬ್ದಾರಿಗಳನ್ನು ನಿಭಾಯಿಸುವ ಸಾಮರ್ಥ್ಯವನ್ನು ಕಂಡು ಪಕ್ಷ ಅವರಿಗೆ ಮಂಡಲದ ಅಧ್ಯಕ್ಷ ಸ್ಥಾನ ನೀಡಿದೆ. ಕೊಟ್ಟ ಜವಾಬ್ದಾರಿಯನ್ನು ಸಂತೋಷ ಅವರು ಪ್ರಾಮಾಣಿಕವಾಗಿ ನಿಷ್ಠೆಯಿಂದ ನಿಭಾಯಿಸಿ ಪಕ್ಷ ಕೊಟ್ಟ ಜವಾಬ್ದಾರಿಗೆ ಗೌರವವನ್ನು ತಂದು ಕೊಡಲಿ ಅಲ್ಲದೆ ಮುಂದಿನ ದಿನಮಾನಗಳಲ್ಲಿ ಅವರು ರಾಜ್ಯ ಮಟ್ಟದ ಹುದ್ದೆಗಳನ್ನು ಅಲಂಕರಿಸಲಿ ಎಂದು ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ನೂತನ ಬಿಜೆಪಿ ಪಕ್ಷದ ಮಾಧ್ಯಮ ಸಂಚಾಲಕರಾಗಿ ಆಯ್ಕೆಯಾದ ಎಸ್.ಎನ್. ಹಿರೇಮಠ್ ಅವರನ್ನು ಸನ್ಮಾನಿಸಲಾಯಿತು.
ಈ ವೇಳೆ ಸಮಾಜದ ಕಾರ್ಯದರ್ಶಿ ಆನಂದ ಶಾಬಾದಿ, ಚಂದ್ರಶೇಖರ ನಾಗರಬೆಟ್ಟ, ಗುರು ಬಸರಕೋಡ, ಎಂ.ಎಸ್ ರುದ್ರಗೌಡರ್, ಶ್ರೀಶೈಲ್ ಚಳ್ಳಗಿ, ಆರ್.ಆರ್.ಪಾಟೀಲ ಮಲ್ಲಿಕಾರ್ಜುನ ಅಲ್ಲಾಪುರ್, ಶಿವಾನಂದ್ ಸಬರದ, ಕಸಾಪ ತಾಲೂಕಾಧ್ಯಕ್ಷ ಶಿವಾನಂದ ಬಡಾನೂರ, ಪಂಡಿತ ಯಂಪುರೆ, ಶಂಕರಗೌಡ ಬಿರಾದಾರ ಸೇರಿದಂತೆ ಹಲವರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

