ಕೊಲ್ಹಾರ: ಪಟ್ಟಣದ ವಿಶ್ವಕರ್ಮ ವಿಕಾಸ ಸಂಸ್ಥೆ ಮತ್ತು ಸರ್ವ ಧರ್ಮದ ಜನರ ಸಹಬಾಗಿತ್ವದಲ್ಲಿ ಸರಕಾರಿ ಕನ್ನಡ ಹಿರಿಯ ಹೆಣ್ಣು ಮಕ್ಕಳ ಶಾಲೆಯ ಹತ್ತಿರವಿರುವ ಕಾಳಿಕಾದೇವಿ, ಜಗದ್ಗುರು ಮೌನೇಶ್ವರ ದೇವಸ್ಥಾನದ ೮ನೇ ವಾರ್ಷಿಕೋತ್ಸವ ಹಾಗೂ ಪ್ರತಿವರ್ಷದಂತೆ ಈ ವರ್ಷವೂ ದಿನಾಂಕ ೮-೯ ಎರಡು ದಿನಗಳ ಕಾಲ ಜಾತ್ರಾ ಮಹೋತ್ಸವ ಕಾರ್ಯಕ್ರಮ ಜರುಗುವವು ಎಂದು ಸಂಸ್ಥೆಯ ಅಧ್ಯಕ್ಷರಾದ ಪುಂಡಲೀಕ ಕಂಬಾರ, ಮಳೆಪ್ಪ ಬಡಿಗೇರ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ಮೂಲಕ ಹೇಳಿಕೆ ನೀಡಿರುವ ಅವರು ದಿನಾಂಕ ೮ ಶುಕ್ರವಾರ ಬೆಳಿಗ್ಗೆ ೧೧.೩೦ಕ್ಕೆ ಮೌನೇಶ್ವರ ಭಾವಚಿತ್ರದೊಂದಿಗೆ ಎತ್ತಿನ ಬಂಡಿಯಲ್ಲಿ ಹಂದರ ತಪ್ಪಲ ಮೆರವಣಿಗೆ ಸಾಯಂಕಾಲ ೪ ಘಂಟೆಗೆ ಮಹಿಳೆಯರಿಗಾಗಿ ರಂಗೋಲಿ ಸ್ಪರ್ದೆ ಇರುವದು. ೯ ಶನಿವಾರದಂದು ಬ್ರಾಹ್ಮಿ ಮಹೂರ್ತದಲ್ಲಿ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಕಾಳಿಕಾದೇವಿ ಮತ್ತು ಜಗದ್ಗುರು ಮೌನೇಶ್ವರ ಮೂರ್ತಿಗಳಿಗೆ ಪಂಚಾಮೃತ ಅಭಿಷೇಕ, ಹೋಮ ಹವನ ಹೂವಿನ ಅಲಂಕಾರ ನೈವೇದ್ಯೆ ತೀರ್ಥ ಪ್ರಸಾದದೊಂದಿಗೆ ಮಹಾಮಂಗಳಾರತಿ, ಉಪನಯನ ನೆರವೇರುವದು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕಾಳಿಕಾದೇವಿ ಮತ್ತು ಜಗದ್ಗುರು ಮೌನೇಶ್ವರ ಪಲ್ಲಕ್ಕಿ ಉತ್ಸವ ಪುರವಂತರ ಸೇವೆಯೊಂದಿಗೆ ಬಹು ವಿಜ್ರಂಭನೆಯಿಂದ ನಡೆಯುವದು ತದನಂತರ ಗಾಯತ್ರಿ ವಿಶ್ವಕರ್ಮ ಮಹಿಳಾ ಮಂಡಳ ಕೊಲ್ಹಾರ ಇವರಿಂದ ಮುತೈದೆಯರಿಗಾಗಿ ಉಡಿ ತುಂಬುವ ಕಾರ್ಯಕ್ರಮ ರಾತ್ರಿ ೧೦ ಘಂಟೆಗೆ ಕಲಾಸಿಂಚನ ಮೆಲೋಡೀಸ್ ಇವರಿಂದ ರಸಮಂಜರಿ ಸಂಗೀತ ಸಂಜೆ ಕಾರ್ಯಕ್ರಮ ಇರುವದು. ಭಕ್ತರಿಗೆ ಅನ್ನಪ್ರಸಾದದ ವ್ಯವಸ್ಥೆ ಇರುವದು ಸುತ್ತಮುತ್ತಲಿನ ಗ್ರಾಮಸ್ಥರು, ಪಟ್ಟಣದ ಸಮಸ್ತ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ವಿನಂತಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
