ಕೊಲ್ಹಾರ: ಪ್ರತಿವರ್ಷದಂತೆ ಈ ವರ್ಷವೂ ಕೂಡ ೦೭ ಗುರುವಾರ ದಿವಸ ೨೦ನೇ ಶತಮಾನದ ಸೂಫಿ ಸಂತ ಶ್ರೀಗುರು ಅಲಹಾಜ ಶಾಹ ಮಹ್ಮದ ಅಬ್ದುಲಗಫಾರ ಕಾದ್ರಿಯವರ ೩೧ನೇ ಉರುಸು ಕಾರ್ಯಕ್ರಮವನ್ನು ಪಟ್ಟಣದ ಅಜಾದ ನಗರದಲ್ಲಿರುವ ಕಾದ್ರಿಯಾ ಮಸೀದಿ ಹತ್ತಿರದ ಖಾನಕಾಯ ಗಪಾರಿಯಾ ಆಶ್ರಮದ ಆವರಣದಲ್ಲಿ ಅದ್ದೂರಿಯಾಗಿ ಆಚರಿಸಲಾಗುವದು ಎಂದು ಪೀಠಾಧಿಕಾರಿ ಅಲ್‌ಹಾಜ ಡಾ|| ಭಕ್ತಿಯಾರಖಾನ ಪಠಾಣ, ಉತ್ಸವ ಸಮೀತಿ ಅಧ್ಯಕ್ಷ ಉಸ್ಮಾನಸಾಬ ಪಟೇಲ ತಿಳಿಸಿದರು.
ಈ ಕುರಿತು ಪತ್ರಿಕಾಗೋಷ್ಟಿಯನ್ನು ಉದ್ದೇಸಿಸಿ ಮಾತನಾಡಿದ ಅವರು ಅಂದು ಅಖಂಡ ವಿಜಯಪೂರ ಜಿಲ್ಲೆಯ ಸರ್ವ ಧರ್ಮದ ಜನರ ಸಮಾವೇಶವನ್ನು ಭಾವೈಕ್ಯತೆಯ ಸಂದೇಶ ಸಾರಲು ಏರ್ಪಡಿಸಲಾಗಿದ್ದು ಅಂದಿನ ದಿವಸ ೧೯ನೇಯ ಅಲಹಾಬಾದ ಮೌಲಾನಾ ಭಾವೈಕ್ಯತಾ ಪ್ರತಿಷ್ಟಿತ ಪ್ರಶಸ್ತಿಯನ್ನು ಪ್ರಸಕ್ತ ಸಾಲಿನಲ್ಲಿ ಜಾನಪದ ವಿದ್ವಾಂಸ ಡಾ|| ಶಂಭು ಬಳಗಾರ ಅವರಿಗೆ ಕೊಡಮಾಡಲಾಗುವದು. ಇದು ೨೪ನೇಯ ಸರ್ವಧರ್ಮ ಸದ್ಬವನಾ ಸಮಾರಂಭವಾಗಿದ್ದು ನಾವೆಲ್ಲ ಭಾರತೀಯರು ಎಂಬ ಬಾವ ಮೂಡಲಿ ನಮ್ಮಲ್ಲಿರುವ ಬೇಧ ಭಾವವನ್ನು ಪರಮಾತ್ಮನು ದೂರ ಮಾಡಲಿ ಎಂದು ಶ್ರೀಗಳು ಹೇಳಿದರು.
ಮುಸ್ಲೀಂ ಹಾಗೂ ಹಿಂದೂ ಧರ್ಮದ ನಾಡಿನ ಶ್ರೇಷ್ಠ ಮಠಾಧೀಶರು, ಸ್ಥಳಿಯ ಧರ್ಮಗುರುಗಳು ಸಾನಿಧ್ಯವನ್ನು ವಹಿಸುವರು. ಅತಿಥಿಗಳಾಗಿ ಹಾಲಿ ಹಾಗೂ ಮಾಜಿ ಶಾಸಕರು, ಸಚಿವರು, ಸಂಶೋಧಕ ಡಾ|| ಕೃಷ್ಣಕೊಲ್ಹಾರ ಕುಲಕರ್ಣಿ, ರಾಜಕೀಯ ಧುರೀಣರು, ಸಮಾಜ ಸೇವಕರು, ಸಾಹಿತಿಗಳು, ಹಲವಾರು ಮಹನೀಯರು ಆಗಮಿಸುವರು. ನಂತರ ಬಂದ ಭಕ್ತರಿಗೆ ಅನ್ನ ಪ್ರಸಾದ ವ್ಯವಸ್ಥೆ ಇರುವದು ಎಂದು ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಉಸ್ಮಾನಸಾಬ ಪಟೇಲ, ಹನೀಫ ಮಕಾನದಾರ, ಅಬ್ದುಲ ಪಕಾಲಿ, ಝಾಕೀರ ಸೌದಾಗರ, ಅಲ್ಲಾಭಕ್ಷ ಕಾಖಂಡಕಿ, ನಜೀರ ಖಾಜಿ, ಅಯ್ಯುಬ ಪಠಾಣ ಪ್ರಮುಖರು ಉಪಸ್ತಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment
