ಮುಗಿಲು ಮುಟ್ಟಿದ ಗ್ರಾಮಸ್ಥರ ಆಕ್ರೋಶ | ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ | ಸಂಚಾರ ಅಸ್ತವ್ಯಸ್ತ
ಮೋರಟಗಿ: ವ್ಯಾಪಾರ, ವಹಿವಾಟ, ಸರ್ಕಾರಿ ಕೆಲಸ ಕಾರ್ಯಗಳಿಗಾಗಿ ಸುತ್ತುವರೆದು ದೂರದ ಆಲಮೇಲ ತಾಲೂಕಿಗೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಗಬಸಾವಳಗಿ ಗ್ರಾಮವನ್ನು ಮರಳಿ ಸಿಂದಗಿ ತಾಲೂಕಿಗೆ ಸೇರ್ಪಡೆ ಮಾಡಿ, ಇಲ್ಲವೇ ವಿಷ ಕೊಡಿ ಎಂದು ಮುಖಂಡ ಬಂಗಾರೆಪ್ಪಗೌಡ ಬಿರಾದಾರ ಆಕ್ರೋಶ ವ್ಯಕ್ತಪಡಿಸಿದರು.
ಸಮೀಪದ ಗಬಸಾವಳಗಿ ಗ್ರಾಮವನ್ನು ಮರಳಿ ಸಿಂದಗಿ ತಾಲೂಕಿಗೆ ಸೇರ್ಪಡೆ ಮಾಡಬೇಕೆಂದು ಬುಧವಾರ ಗ್ರಾಮಸ್ಥರು ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಬಾಗವಹಿಸಿ ಅವರು ಮಾತನಾಡಿದರು.
ನಮ್ಮ ಗ್ರಾಮದಿಂದ ಸಿಂದಗಿ ೧೨ ಕಿ ಮಿ ಆಗುತ್ತಿದ್ದು ಇದನ್ನು ೪೦ ಕಿಮಿ ಯ ಆಲಮೇಲ ತಾಲೂಕಿಗೆ ನಮ್ಮ ಹಳ್ಳಿಯನ್ನು ಸೇರ್ಪಡೆ ಮಾಡಿದ್ದಾರೆ. ವೃದ್ಧರು ಅಂಗವಿಕಲರು ದಿನ ನಿತ್ಯದ ಕೆಲಸ ಕಾರ್ಯಗಳಿಗೆ ಅಡೆ- ತಡೆ ಯಾಗುತ್ತಿದ್ದು ಇದು ಯಾವ ನ್ಯಾಯವೆಂದು ಪ್ರಶ್ನಿಸಿದರು. ಮತ್ತು ಈ ಕುರಿತು ರಾಜ್ಯದ ಸಂಬಂಧಪಟ್ಟ ಅಧಿಕಾರಿಗಳಿಗಳಿಗೆ ಮನವಿ ಸಲ್ಲಿಸಿದ್ದು ಕೂಡಾ ಇರುತ್ತದೆ. ನಮ್ಮ ಗ್ರಾಮದ ಸಂಕಷ್ಟ ಕುರಿತು ಜನ ನಾಯಕರು ಮತ್ತು ಅಧಿಕಾರಿಗಳಿಗೆ ಯಾಕೆ ಮುತುವರ್ಜಿ ವಹಿಸುತ್ತಿಲ್ಲ ಎಂದು ಪ್ರಶ್ನೆ ಮಾಡಿದರು.
ನಂತರ ಮುಖಂಡರಾದ ಶಾಂತಗೌಡ ಬಿರಾದಾರ ಮಾತನಾಡಿ, ನಮಗೆ ಸಾರ್ವಜನಿಕರಿಗೆ ತೊಂದರೆ ಕೊಡುವುದು ಇಷ್ಟವಿಲ್ಲ. ಆದರೆ ಅಧಿಕಾರಿಗಳ ನಡತೆಯಿಂದ ಇಂತಹ ತೊಂದರೆಗಳಾಗುತ್ತಿವೆ. ಕಳೆದ ಒಂದು ಗಂಟೆಯಿಂದ ಹೆದ್ದಾರಿ ತಡೆದರೂ ಯಾವೊಬ್ಬ ಅಧಿಕಾರಿಯೂ ಸ್ಥಳಕ್ಕೆ ಆಗಮಿಸುತ್ತಿಲ್ಲ. ಇದರಿಂದ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಎಂದರು.
ನಂತರ ಸಿಂದಗಿ ಮತ್ತು ಆಲಮೇಲ ತಾಲೂಕು ದಂಡಾಧಿಕಾರಿಗಳು ಬಂದು ಗ್ರಾಮಸ್ಥರ ಮನವಿ ಪತ್ರ ಸ್ವೀಕರಿಸಿ ಆದಷ್ಟು ಶಿಘ್ರದಲ್ಲಿ ಇದರ ಕುರಿತು ಚರ್ಚಿಸಿ ಮೆಲಾಧಿಕಾರಿಗಳಿಗೆ ತಿಳಿಸುತ್ತೆವೆಂದು ಹೇಳಿದರು.
ಈ ವೇಳೆ ಗ್ರಾಮದ ಮುಖಂಡರಾದ ಬಾಬಾಗೌಡ ಬಿರಾದಾರ, ಮಲ್ಲನಗೌಡ ಬಿರಾದರ, ಬಾಬುರೆಡ್ಡಿ ಬಿರಾದಾರ, ಬೀಮನಗೌಡ ಬಿರಾದಾರ, ಶಿವಶರಣ ಹೆಳವರ, ಸೊಮನಗೌಡ ಬಿರಾದಾರ, ಸುರೇಶಬಾಬು ಕೊಟೆಖಾನಿ, ಸಾಹೇಬಗೌಡ ಬಿರಾದರ, ಅಶೋಕ ಬಿರಾದಾರ, ಪ್ರಬು ಹೆಳವರ, ಶಿವಪುತ್ರ ಮೇಲಿನಮನಿ, ಸುಭದ್ರ ಮೇಳಿನಮನಿ, ನಾಗೇಶ ಕಟ್ಟಿಮನಿ ಸೇರಿದಂತೆ ಹಾಲುಮತ ಸಮಾಜದ ಬಾಂದವರು ಮತ್ತು ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.

