ವಿಜಯಪುರ: ವಿಜಯಪುರ ರೇಲ್ವೆ ಪೊಲೀಸ್ ಠಾಣೆಯಲ್ಲಿ ಅಂದಾಜು ೫೦ ರಿಂದ ೫೫ ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿರುವ ಕುರಿತು ಪ್ರಕರಣ ದಾಖಲಾಗಿದ್ದು, ಪತ್ತೆಯಾದ ವ್ಯಕ್ತಿಯ ವಾರಸುದಾರರ ಪತ್ತೆಗೆ ರೇಲ್ವೆ ಪೊಲೀಸ್ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಪತ್ತೆಯಾದ ವ್ಯಕ್ತಿಯು ೫.೬ ಅಡಿ ಎತ್ತರ, ಸಾದಗಪ್ಪು ಮೈಬಣ್ಣ, ತೆಳ್ಳನೆಯ ಮೈಕಟ್ಟು ಕೋಲುಮುಖ, ನೇರವಾದ ಮೂಗು, ತಲೆಯಲ್ಲಿ ೨ ಇಂಚು ಬಿಳಿ-ಕಪ್ಪು ಬಣ್ಣದ ಮಿಶ್ರಿತ ಕೂದಲು, ಅರ್ಧ ಇಂಚು ಬಿಳಿ ಬಣ್ಣದ ಕುರುಚಲ ದಾಡಿ, ಮೀಸೆವುಳ್ಳವನಾಗಿದ್ದು, ಚಾಕಲೇಟ್ ಬಣ್ಣದ ಅರ್ಧ ತೊಳಿನ ರೇಡಿಮಢ್ ಅಂಗಿ, ಚಾಕಲೇಟ್ ಬಣ್ಣದ ಪ್ಯಾಂಟ್ ಧರಿಸಿದ್ದು, ಈ ಚಹರೆಪಟ್ಟಿಯುಳ್ಳ ವ್ಯಕ್ತಿಯ ವಾರಸುದಾರರು ಪತ್ತೆಯಾದಲ್ಲಿ ಆರಕ್ಷಕ ಉಪನಿರೀಕ್ಷಕರು, ರೇಲ್ವೆ ಪೊಲೀಸ್ ಠಾಣೆ. ವಿಜಯಪುರ : ೦೮೩೫೨-೨೫೦೮೮೩, e-mail address:- bijapurrly@ksp.gov.in ಅಥವಾ ರೈಲ್ವೆ ಪೊಲೀಸ್ ಕಂಟ್ರೋಲ್ ರೂಂ ೦೮೦-೨೨೮೭೧೨೯೧, ಇ-ಮೇಲ್ : dcrly@ksp.gov.inಮಾಹಿತಿ ನೀಡಲು ಕೋರಿದೆ.
Subscribe to Updates
Get the latest creative news from FooBar about art, design and business.
Related Posts
Add A Comment

