ಮುದ್ದೇಬಿಹಾಳ: ಹಾಲುಮತ ಸಮಾಜ ೧೦೯ ನೇ ಇಸ್ವಿ ಪೂರ್ವ ಗುರುಪೀಠ ಹೊಂದಿತ್ತು ಎನ್ನುವುದಕ್ಕೆ ಕಂಚಿನ ಆದೇಶಪತ್ರವೊಂದು ಸಾಕ್ಷಿಯಾಗಿದೆ ಎಂದು ಎಸ್.ಆರ್.ಜೋಗಿ ವಕೀಲರು ಹೇಳಿದರು.
ಈ ಕುರಿತು ಕಂಚಿನ ಆದೇಶಪತ್ರದ ಜೊತೆಗೆ ಹೇಳಿಕೆ ನೀಡಿರುವ ಅವರು, ಅಂದಿನ ಮೈಸೂರ ದೇಶದ ವ್ಯಾಪ್ತಿಯ ಇಂದಿನ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಸರೂರ(ಸರವೂರ) ಗ್ರಾಮದಲ್ಲಿರುವ ಹಾಲುಮತದ ಮೂಲ ಗುರೂಪೀಠ ಶ್ರೀ ಶಾಂತಮುತ್ತಯ್ಯ ನವರಿಂದ ಸ್ಥಾಪಿತವಾಗಿದ್ದು, ಭಕ್ತರ ಅನುಕೂಲಕ್ಕಾಗಿ ಕೊಪ್ಪಳದ ಕೇಂಡದಮಠ, ಬಂಕಾಪುರಮಠ, ಹಾಸನದ ಅಣತಿ ಮಠ ಹೀಗೆ ಹಲವಾರು ತನ್ನ ಅಧೀನ ಶಾಖಾ ಮಠಗಳನ್ನು ಹೊಂದಿದ ಉದಾಹರಣೆಗಳಿವೆ. ಸುಮಾರು ೨ ಸಾವಿರ ವರ್ಷಕಿಂತ ಹೆಚ್ಚು ತನ್ನ ಅಸ್ತಿತ್ವ ಉಳಿಸಿ ಕೊಂಡು ಬಂದ ಶ್ರೀಮಠಕ್ಕೆ ಫೆ.೦೨ ರಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರು ರೇವಣಸಿದ್ದೇಶ್ವರರ ದರ್ಶನಕ್ಕಾಗಿ ಬೇಟಿ ನೀಡುತ್ತಿರುವುದು ಸ್ವಾಗತಾರ್ಹ. ಮುಖ್ಯ ಮಂತ್ರಿಗಳು ಮುಂಬರುವ ದಿನಗಳಲ್ಲಿ ಸುಕ್ಷೇತ್ರ ಸರೂರ ಗ್ರಾಮವನ್ನು ಅಭಿವೃದ್ಧಿ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.


