ದೇವರಹಿಪ್ಪರಗಿ: ಮಾಚಿದೇವನ ಜನ್ಮಭೂಮಿಯಲ್ಲಿ ಜನಿಸಿದ ನಾವೆಲ್ಲ ಮಾಚಿದೇವ, ಬಸವಣ್ಣ ಸೇರಿದಂತೆ ಎಲ್ಲ ಶರಣರ ಕಾಯಕ ತತ್ವವನ್ನು ತನು, ಮನದಿಂದ ಅಳವಡಿಸಿಕೊಳ್ಳಬೇಕಾಗಿದೆ ಎಂದು ತಹಶೀಲ್ದಾರ ಪ್ರಕಾಶ ಸಿಂದಗಿ ಹೇಳಿದರು.
ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ಗುರುವಾರ ಜರುಗಿದ ಮಡಿವಾಳ ಮಾಚಿದೇವ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಜೀವನದಲ್ಲಿ ಶರಣರ ನಡೆ,ನುಡಿ ಇಂದಿಗೂ ಪ್ರಸ್ತುತ. ಅವರನ್ನು ಕೇವಲ ಜಯಂತಿಗಳಿಗೆ ಸೀಮಿತಗೊಳಿಸದೇ ಅವರ ನಡೆದ ಮಾರ್ಗ, ಕಾಯಕ ತತ್ವಗಳನ್ನು ಅರಿತು ಪಾಲಿಸಬೇಕಾಗಿದೆ ಎಂದರು.
ಶ್ರೀಬಸವ ಶರಣ ಸಂಗಮ ಸೇವಾ ಸಮಿತಿ ಅಧ್ಯಕ್ಷ ಸಂಗಪ್ಪ ತಡವಲ್, ನಿವೃತ್ತ ಶಿಕ್ಷಕರುಗಳಾದ ಪಂಚಾಕ್ಷರಿ ಮಿಂಚನಾಳ, ಬಿ.ಆಯ್.ಹೊಸಳ್ಳಿ ಮಾತನಾಡಿದರು.
ವಚನ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಜೆ.ಆರ್.ಬಿರಾದಾರ, ಉಪತಹಶೀಲ್ದಾರ ಸುರೇಶ ಮ್ಯಾಗೇರಿ, ಆಹಾರ ನಿರೀಕ್ಷಕ ದಳವಾಯಿ, ಗೊಲ್ಲಾಳ ಬಿರಾದಾರ, ರಾಮಯ್ಯ ನಾಶೀಮಠ, ಗುರುಪಾದ ಬುದ್ನಿ, ಮಲ್ಲಪ್ಪ ಭತಗುಣಕಿ. ಶ್ರೀಶೈಲ ಅಗಸರ, ಕಾಶೀನಾಥ ಅಗಸರ, ರಮೇಶ ಹಡಪದ, ಮಡಿವಾಳಪ್ಪ ಹಡಪದ, ದುಂಡೇಶ ಅಗಸರ, ಸುರೇಶ ಅಗಸರ ಸಿಬ್ಬಂದಿ ರಾಜು ಕಂಠಿ, ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

