ಫೆ.೫ರಂದು ಸಿಂದಗಿಯಲ್ಲಿ ಜರುಗಲಿರುವ ತಾಲೂಕು ೬ನೇ ಕನ್ನಡ ಸಾಹಿತ್ಯ ಸಮ್ಮೇಳನ
ಸಿಂದಗಿ: ಪಟ್ಟಣದ ಎಚ್.ಜಿ ಪ್ರೌಢಶಾಲೆ ಆವರಣದಲ್ಲಿ ಫೆ.೫ರಂದು ಜರುಗಲಿರುವ ಸಿಂದಗಿ ತಾಲೂಕು ೬ನೇ ಕನ್ನಡ ಸಾಹಿತ್ಯ
ಸಮ್ಮೇಳನದ ಸರ್ವಾಧ್ಯಕ್ಷರಾಗಿ ವಿಶ್ರಾಂತ ಉಪನ್ಯಾಸಕ, ಮಕ್ಕಳ ಸಾಹಿತಿ ರಾ.ಸಿ, ವಾಡೇದ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಮಕ್ಕಳ ಸಾಹಿತಿ ರಾ.ಸಿ, ವಾಡೇದ ಕನ್ನಡ ವಿಷಯದಲ್ಲಿ ಎಂಎ ಪದವೀಧರರು. ಅವರು ಸ್ಥಳೀಯ ಅಂಜುಮನ್ ಪಿಯು ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ೩೨ ವರ್ಷ ಸೇವೆ ಸಲ್ಲಿಸಿದ್ದಾರೆ. ವೃತ್ತಿ ಉಪನ್ಯಾಸವಾದರೇ ಪ್ರವೃತ್ತಿ ಮಕ್ಕಳ ಸಾಹಿತ್ಯ ರಚನೆಯಾಗಿದೆ. ಅವರು ಸುಂದರ ಚಂದಿರ, ಮಾಯದ ಕುದರೆ ಮತ್ತು ಇತರ ನಾಟಕಗಳು, ಕೈ ತೋಟ, ಚಿಣ್ಣರ ಆಟ, ಬೆಳಕು, ಧಡಂ ಧುಡಕಿ, ತುತ್ತೂರಿ, ಸ್ನೇಹ ಸಿರಿ, ಅಜ್ಜಿಯ ಆಸೆ, ಟಂಟಂ ಗಾಡಿ, ಜಾನಪದ ಕಥೆಗಳು ಹೀಗೆ ಮಕ್ಕಳ ಕೃತಿಗಳು ಸೇರಿದಂತೆ ಹಲವು ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. ಮಕ್ಕಳ ಸಾಹಿತ್ಯ ಚಿಂತನ ವೇದಿಕೆ ಅಧ್ಯಕ್ಷರಾಗಿ, ಚಲನಚಿತ್ರ ಬೆಳ್ಳಿ ಅಡಾಡೆಮಿ ವಿಜಯಪುರದ ಸದಸ್ಯರಾಗಿ, ಚುಟುಕು ಸಾಹಿತ್ಯ ಪರಿಷತ್ ತಾಲೂಕಾಧ್ಯಕ್ಷರಾಗಿ, ಕನ್ನಡ ಸಾಹಿತ್ಯ ಪರಿಷತ್ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸುವ ಜೊತೆಗೆ ಹತ್ತು ಹಲವು ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಸಂಘ-ಸಂಸ್ಥೆಗಳ ವಿವಿಧ ಹುದ್ದೆಗಳನ್ನು ಅಲಂಕರಿಸಿ ಸಾಹಿತ್ಯ ಸೇವೆ ಸಲ್ಲಿಸಿದ್ದಾರೆ.
ಸಿಂದಗಿ ಪಟ್ಟಣದಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ರಾ.ಸಿ. ವಾಡೇದ ಅಯ್ಕೆಯಾಗಿದ್ದು ಸಾಹಿತ್ಯ ಬಳಗಕ್ಕೆ ಸಂತಸ ತಂದಿದೆ.

