ವಿಜಯಪುರ: ಕಲ್ಯಾಣ ಕರ್ನಾಟಕದ ಬಸವ ಕಲ್ಯಾಣದ ಅನುಭವ ಮಂಟಪದ ೧೨ನೇ ಶತಮಾನದಲ್ಲಿ ಸಮ ಸಮಾಜದ ಕನಸು ಕಂಡು ಆದಿಸೆಯಲ್ಲಿ ತಮ್ಮ ವಚನಗಳ ಮೂಲಕ ಪ್ರತಿಪಾದಿಸಿದ ಮಡಿವಾಳ ಮಾಚಿದೇವ ಶರಣರು ಎಂದು ಅಪರ ಜಿಲ್ಲಾಧಿಕಾರಿ ಮಹದೇವ ಮುರಗಿ ಹೇಳಿದರು.
ಗುರುವಾರ ನಗರದ ಕಂದಗಲ್ಲ ಶ್ರೀ ಹನಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶರಣರು ಅಂದು ಹಾಕಿಕೊಟ್ಟ ಹಾಗೂ ತಿಳಿಸಿದ ವಿಚಾರಗಳು ಇಂದಿಗೂ ಎಂದೆಂದಿಗೂ ಪ್ರಸ್ತುತವಾಗಿವೆ. ಅಂದಿನ ಬಸವಾದಿ ಶರಣರು ಕಾಯಕ ತತ್ವವನ್ನು ಅನುಸರಿಸಬೇಕು ಹಾಗೂ ಅವರ ಜೀವನ ಆದರ್ಶಗಳನ್ನು ಅಳವಡಿಕೊಳ್ಳಬೇಕು ಎಂದು ಅವರು ಹೇಳಿದರು.
ಅಪರ ಪೊಲೀಸ್ ವರಿಷ್ಟಾಧಿಕಾರಿ ರಾಮನಗೌಡ ಹಟ್ಟಿ ಮಾತನಾಡಿ, ಶರಣರು ೧೨ ನೇ ಶತಮಾನದಲ್ಲಿ ಸುಮರು ೭೭೦ ಶಿವಶರಣರು ಒಂದೆಡೆ ಸೇರಿ ಅನುಭವ ಮಂಟಪದಲ್ಲಿ ಸಾಮಾಜಿಕ ಪರಿವರ್ತನೆಗಾಗಿ ಏಕತೆಗಾಗಿ ಚಿಂತನ-ಮಂಥನ ಹಾಗೂ ಗೋಷ್ಠಿಗಳನ್ನು ನಡೆಸುತ್ತಿದ್ದರು. ಅಂದಿನ ವಚನಗಳು ಇಂದು ನಮ್ಮ ಜೀವನೋಪಾಯ ನಡೆಸಲು ಒಂದು ದಾರಿಯಾಗಿವೆ ಎಂದರು.
ಉಪನ್ಯಾಸಕ ಮಂಜುನಾಥ ಜುನಗೊಂಡ ಮಾತನಾಡಿದರು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಹೊಂಗಯ್ಯ, ಜಿ.ಪಂ ಯೋಜನಾಧಿಕಾರಿ ಎ.ಬಿ ಅಲ್ಲಾಪುರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿ ಅಯ್ಯುಬ್ ದ್ರಾಕ್ಷಿ, ಜಿಲ್ಲಾ ಮಡಿವಾಳ ಸಂಘದ ಅಧ್ಯಕ್ಷ ಸಾಯಬಣ್ಣ ಮಡಿವಾಳರ, ಸಮಾಜದ ಮುಖಂಡರಾದ ಬಾಬು ಬಳ್ಳಾರಿ, ಮುತ್ತಪ್ಪ ಮಡಿವಾಳರ, ಪ್ರಭು ಮಡಿವಾಳರ, ಶಿವಪ್ಪ ಹುಬ್ಬಳ್ಳಿ, ಶ್ರೀಶೈಲ ಅಗಸರ, ಮಲಕಪ್ಪ ಹುಬ್ಬಳ್ಳಿ, ಸಂತೋಷ ಬಾಗಲಕೋಟ, ವಿದ್ಯಾವತಿ ಅಂಕಲಗಿ, ಭೀಮರಾಯ ಜಿಗಜಿಣಗಿ, ದೇವೇಂದ್ರ ಮಿರೇಕರ, ಗಿರೀಶ ಕುಲಕರ್ಣಿ ಹಾಗೂ ಇತರರು ಉಪಸ್ಥಿತರಿದ್ದರು. ಸುಭಾಸ ಕಲ್ಲೂರ ನಿರೂಪಿಸಿದರು.
ಇದಕ್ಕೂ ಮೊದಲು ಬೆಳಿಗ್ಗೆ ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಆರಂಭಗೊಂಡ ಭಾವಚಿತ್ರ ಮೆರವಣಿಗೆಗೆ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಚಾಲನೆ ನೀಡಿದರು.
Subscribe to Updates
Get the latest creative news from FooBar about art, design and business.
Related Posts
Add A Comment

