ವಿಜಯಪುರ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್ ಸರ್ವೇ ಜನ ಸುಖಿನೋ ಭವಂತು: ಎಂಬ ಉಕ್ತಿಗೆ ಉದಾಹರಣೆಯಾಗಿದೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಉಮೇಶ ಕಾರಜೋಳ ಹೇಳಿದ್ದಾರೆ.
ಕೇಂದ್ರ ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ರೈತ ಕಲ್ಯಾಣ, ಕಾರ್ಮಿಕ ಸಬಲೀಕರಣ, ಮಹಿಳಾ ಸಬಲೀಕರಣ ಹೀಗೆ ಎಲ್ಲರ ಅಭಿವೃದ್ಧಿಗೆ ಪೂರಕವಾದ ಬಜೆಟ್ ಮಂಡನೆಯಾಗಿದೆ. ಜನಪ್ರೀಯತೆಗಿಂತ ಜನಪರಕ್ಕೆ ಆದ್ಯತೆ ದೊರಕಿದೆ.
ಜನಸಾಮಾನ್ಯರಿಗೆ ಯಾವುದೇ ಆದಾಯ ತೆರಿಗೆ ಹೊರೆ ಇಲ್ಲ,
ಆಶಾ ಅಂಗನವಾಡಿ ಕಾರ್ಯಕರ್ತೆಯರಿಗೆ ಆಯುಷ್ಮಾನ ವಿಸ್ತರಣೆ ಮಾಡುವ ನಿರ್ಧಾರ, ಲಕ್ಷಾಧಿಪತಿ ದೀದಿ ಮಹಿಳಾ ಆರ್ಥಿಕ ಸಬಲೀಕರಣಕ್ಕೆ ಒತ್ತು ಹೀಗೆ ಹಲವಾರು ಉತ್ತಮ ಕಾರ್ಯಕ್ರಮಗಳನ್ನು ಹೊಂದಿರುವ ಬಜೆಟ್ ಇದಾಗಿದೆ ಎಂದು ಕಾರಜೋಳ ಹೇಳಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

