ಸಿಂದಗಿ: ವಿಶ್ವ ವಿಖ್ಯಾತ ಹಂಪಿ ಉತ್ಸವ ಕವಿಗೋಷ್ಠಿಗೆ ತಾಲೂಕಿನ ಬೋರಗಿ ಗ್ರಾಮದ ಆರಕ್ಷಕ ಮೌಲಾಲಿ ಕೆ. ಆಲಗೂರ ಆಯ್ಕೆಯಾಗಿದ್ದಾರೆ.
ಫೆ.೨ರಂದು ವಿರೂಪಾಕ್ಷೇಶ್ವರ ದೇವಸ್ಥಾನ ವೇದಿಕೆಯಲ್ಲಿ ನಡೆಯಲಿರುವ ಕವಿಗೋಷ್ಠಿ ಕಾರ್ಯಕ್ರಮವನ್ನು ಡಾ.ನಿಷ್ಠಿ ರುದ್ರಪ್ಪ ಉದ್ಘಾಟನೆ ಮಾಡಲಿದ್ದಾರೆ. ವೇದಿಕೆಯ ಮೇಲೆ ಡಾ.ಅಮರೇಶ ನುಗಡೋಣಿ, ಶರಣೆಗೌಡ ಪೊಲೀಸ್ ಪಾಟೀಲ್, ಡಾ.ದಯಾನಂದ ಕಿನ್ನಾಳ ಇವರ ಉಪಸ್ಥಿತಿ ಇರಲಿದೆ. ಮೌಲಾಲಿ ಆಯ್ಕೆಗೆ ಮಕ್ಕಳ ಸಾಹಿತಿ ಫ.ಗುಸಿದ್ಧಾಪುರ, ಹ.ಮಾ.ಪೂಜಾರ, ಡಿವೈಎಸ್ಪಿ ಡಾ.ವಿನೋದ್ ಮುಕ್ತೆದಾರ, ಇನ್ಸ್ಪೆಕ್ಟರ್, ಕೆ.ವಿಶ್ವನಾಥ, ಭೈರ್, ಜ್ಯೋತಿರ್ಲಿಂಗ ಹೊನ್ನಕಟ್ಟಿ, ಕಾರ್ಯನಿರತ ಪರ್ತಕರ್ತರ ಸಂಘದ ಅಧ್ಯಕ್ಷ ಆನಂದ ಶಾಬಾದಿ, ಸಿದ್ದಲಿಂಗ ಚೌಧರಿ, ಸಿದ್ಧಲಿಂಗ ಕಿಣಗಿ ಶುಭ ಕೋರಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

