ಸಿಂದಗಿ: ಪುಸ್ತಕದ ವಿದ್ಯೆ ಮಸ್ತಕಕ್ಕೆ ಬಂದರೆ ಅವನು ವಿದ್ಯಾವಂತ. ಆದರೆ ಮಸ್ತಕಕ್ಕೆ ಬಂದ ವಿದ್ಯೆ ಸಿದ್ಧಿ ಮಾಡಿಕೊಂಡರೆ ಮಾತ್ರ ಅವನು ಜ್ಞಾನಿ ಎಂದು ರಾಮನರಸಿಂಹ ಸಂಸ್ಕೃತ ವಿದ್ಯಾಲಯದ ಕುಲಪತಿ ನರಹರಿ ಆಚಾರ್ಯ ಮುತ್ತಗಿ ಹೇಳಿದರು.
ಪಟ್ಟಣದ ಆರ್.ಡಿ. ಪಾಟೀಲ ಕಾಲೇಜಿನ ಆವರಣದಲ್ಲಿ ಹಮ್ಮಿಕೊಂಡ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದ ಅತಿಥಿ ಸ್ಥಾನವನ್ನು ವಹಿಸಿ ಮಾತನಾಡಿ ಅವರು, ವಾರ್ಷಿಕ ಸ್ನೇಹ ಸಮ್ಮೇಳನ ಎಂಬುದು ಕೇವಲ ಕುಣಿತಕ್ಕೆ ಚೀರಾಟಕ್ಕೆ ವೇದಿಕೆಯಾಗದೆ ಸಮ್ಮಿಲನಕ್ಕೆ ವೇದಿಕೆಯಾಗಬೇಕು. ನಮ್ಮಲ್ಲಿ ಕೆಲವು ವಿಷಯಗಳು ಮೀಲನವಾಗಿ ಬದಲಾವಣೆಯಾದಾಗ ಮಾತ್ರ ವಾರ್ಷಿಕ ಸ್ನೇಹ ಸಮ್ಮೇಳನವು ಸಾರ್ಥಕವಾಗುತ್ತದೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಅನೇಕ ವಿಷಯಗಳ ಬಗ್ಗೆ ಅಧ್ಯಯನ ಮಾಡಬೇಕು. ಇಂತಹ ಅನೇಕ ವಿಷಯಗಳು ವಿಲೀನವಾಗಬೇಕು. ಆದರೆ ಇಂದಿನ ಸಮಾಜದಲ್ಲಿ ನಾವು ಕೇವಲ ವಿದ್ಯಾವಂತರಾಗೋದಕ್ಕೆ ಮಾತ್ರ ಬದುಕುತ್ತಿದ್ದೇವೆ ವಿನಃ ಜ್ಞಾನದ ಕಡೆಗೆ ಹೋಗುತ್ತಿಲ್ಲ. ಆದಕಾರಣ ನಾವು ಜ್ಞಾನಿಗಳಾಗಬೇಕೇ ಹೊರತು ಕೇವಲ ವಿದ್ಯಾವಂತರಾಗಬಾರದು. ಆ ನಿಟ್ಟಿನಲ್ಲಿ ನಮ್ಮ ಹೆಜ್ಜೆ ಸಾಗಬೇಕು ಎಂದರು
ಈ ವೇಳೆ ಕಾರ್ಯಕ್ರಮದ ಸಾನಿಧ್ಯ ವಹಿಸಿದ ಸಾರಂಗಮಠದ ಡಾ.ಪ್ರಭುಸಾರಂಗದೇವ ಶೀವಾಚಾರ್ಯರು ಮಾತನಾಡಿದರು.
ಇದೇ ಸಂದರ್ಭದಲ್ಲಿ ಪ್ರಾಚಾರ್ಯ ವಿಮಲಕಾಂತ ಪಾಟೀಲ, ಉಪಪ್ರಾಚಾರ್ಯ ಭೀಮನಗೌಡ ಸಿಂಗನಳ್ಳಿ, ಎಸ್.ಜಿ.ಮಾರ್ಸನಳ್ಳಿ, ಪಿ.ವಿ.ಮಹಲಿನಮಠ, ಬಿ.ಬಿ.ಜಮಾದಾರ, ಸುರೇಶ ಜಾಧವ, ಡಾ. ಶರಣು ಜೋಗೂರ, ಶಿವಶರಣ ಬೂದಿಹಾಳ, ಶಿವಯೋಗಿ ತಾಳಿಕೋಟಿ, ಗವಿಸಿದ್ದಪ್ಪ ಆನೆಗುಂದಿ, ಸುಭಾಸ ಹೊಸಮನಿ, ಸಂಗಮೇಶ ಚಾವರ್, ನವೀನ ಶೆಳ್ಳಗಿ, ರೋಹಿತ ಸುಲ್ಪಿ, ರುಕ್ಮಣ್ಣಾ ಕೊಳ್ಳೂರೆ, ಈರಣ್ಣ ಶಿವಸಿಂಪಿಗೇರ್, ಅಡಿವೆಪ್ಪ ದಸ್ಮಾ, ಚಂದ್ರು ಬಬಲೇಶ್ವರ್, ನೀಲಕಂಠ ಮೇತ್ರಿ, ಎಂ.ಐ.ಮುಜಾವರ್, ವ್ಹಿ.ಕೆ.ಹಿರೇಮಠ, ಸುನೀಲ ಪಾಟೀಲ, ರಾಹುಲ ನಾರಾಯಣಕರ್, ಜಟ್ಟಿಂಗರಾಯ ಗಾಣಗೇರ್ ಸೇರಿದಂತೆ ವಿದ್ಯಾರ್ಥಿಗಳು ಇನ್ನಿತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

