ವಿಜಯಪುರ: ವಿದ್ಯಾರ್ಥಿಗಳು ಸಮಯವನ್ನು ವ್ಯರ್ಥ ಕಳೆಯಬಾರದು. ಸಮಯ ಅಮೂಲ್ಯವಾದದ್ದು, ಯಾವ ವ್ಯಕ್ತಿಯಲ್ಲಿ ಸಂಸ್ಕೃತಿ, ಸಂಸ್ಕಾರ ಇರುತ್ತದೆಯೋ ಅಂತಹ ವ್ಯಕ್ತಿಗಳಲ್ಲಿ ವಿನಯತೆ ಇರುತ್ತದೆ ಎಂದು ಜ್ಞಾನಯೋಗಾಶ್ರಮದ ಶ್ರೀಗಳಾದ ಬಸವಲಿಂಗ ಶ್ರೀಗಳು ಹೇಳಿದರು.
ಬಂಜಾರಾ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ‘ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬಿಳ್ಕೋಡುವ’ ಸಮಾರಂಭ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು. ಸಂಸ್ಕೃತಿ ಮತ್ತು ಸಂಸ್ಕಾರ ಹೊಂದಿರುವ ಶಿಕ್ಷಕ ಎಂದಿಗೂ ಅಪವ್ಯಯ ಆಗಲು ಸಾಧ್ಯ ಇಲ್ಲ. ನಿರಂತರ ಪರಿಶ್ರಮ ಶ್ರದ್ಧೆಯಿಂದ ಪ್ರಯತ್ನಪಟ್ಟಲ್ಲಿ ನಿಮ್ಮ ಗುರಿ ಸುಲಭವಾಗುತ್ತದೆ. ಶಿಕ್ಷಣವು ಮಾನವವೀಯತೆಯ ಮೌಲ್ಯಗಳನ್ನು ಬೆಳೆಸುತ್ತದೆ. ವ್ಯಕ್ತಿ ಹೆಚ್ಚು ಹೆಚ್ಚು ಶಿಕ್ಷಣ ಪಡೆದಂತೆ ಆತನ ಜ್ಞಾನವು ವೃದ್ಧಿಯಾಗಿ ಸಂಸ್ಕಾರ ಕಲಿಯುತ್ತಾನೆ ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ವಿಜಯಪುರ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಕೆ.ಹೊಸಮನಿಯವರು ಮಾತನಾಡುತ್ತ. ಆತ್ಮವಿಶ್ವಾಸ, ಬದ್ಧತೆ, ದಕ್ಷತೆ, ಸ್ಥಿರತೆ ಈ ನಾಲ್ಕು ಅಂಶಗಳನ್ನು ಜೀವನದಲ್ಲಿ ಸಾಧಿಸಬೇಕು. ಇದಕ್ಕೆ ಪ್ರಮುಖವಾಗಿ ಏಕಾಗ್ರತೆ ಇರಬೇಕು. ವಿದ್ಯೆಯೊಂದಿಗೆ ವಿದ್ಯಾರ್ಥಿಗಳಿಗೆ ಸ್ವಾಮಿ ಭಕ್ತಿ, ಪಿತೃಭಕ್ತಿ ತುಂಬಿಸಬೇಕು. ತಾಂತ್ರಿಕತೆಯನ್ನು ತಲೆಗೆ ತುಂಬುವುದಕ್ಕೂ ಮುನ್ನ ಸಂಸ್ಕೃತ, ಸಂಸ್ಕಾರದ ಬೋಧನೆ ಮಾಡಬೇಕು. ಹಿರಿಯರ ತಪ್ಪುಗಳ ಬಗ್ಗೆ ಕಿರಿಯರು ಹೇಳಿದಾಗ ತಿದ್ದಿಕೊಳ್ಳುವ ಹೃದಯ ವೈಶಾಲ್ಯತೆ ಇದ್ದರೆ ಅವರು ಸಮಾಜದ ಆಸ್ತಿಯಾಗುತ್ತಾರೆ ಎಂದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ಭಾಷಣ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಈ ವೇಳೆ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಎಂ.ಬಿ.ಪೂಜಾರಿ, ಕನ್ನಡ ಮಾಧ್ಯಮ ಪ್ರೌಢ ಶಾಲೆಯ ಮುಖ್ಯ ಗುರುಗಳಾದ ಇ.ಡಿ.ಲಮಾಣಿ, ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಮುಖ್ಯ ಗುರುಗಳಾದ ಸಂದೀಪ ರಾಠೋಡ, ಪದವಿ ಕಾಲೇಜು ಪ್ರಾಚಾರ್ಯರಾದ ಎ.ಪಿ.ಬಿರಾದಾರರವರು ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ಸ್ವಾಗತವನ್ನು ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಎಸ್.ಬಿ.ಪವಾರ, ನಿರೂಪಣೆ ಎಸ್.ಸಿ.ಮಾಳಗಿ ಹಾಗೂ ವಂದನಾರ್ಪಣೆ ಎಸ್.ಎಸ್.ತೆನಿಹಳ್ಳಿಯವರು ನೆರವೇರಿಸಿದರು.
Subscribe to Updates
Get the latest creative news from FooBar about art, design and business.
ವಿದ್ಯಾರ್ಥಿಗಳಿಗೆ ಸಂಸ್ಕಾರ-ಸಂಸ್ಕೃತಿ ಅಗತ್ಯ :ಬಸವಲಿಂಗ ಶ್ರೀ
Related Posts
Add A Comment

