ಸಿಂದಗಿ: ಶಿಕ್ಷಣ ಎನ್ನುವದು ಒಂದು ಸಂಘಟನಾ ಶಕ್ತಿ. ಅದಕ್ಕೆ ಒಗ್ಗೂಡಿಸುವ ಶಕ್ತಿ ಇರುತ್ತದೆ ಎಂದು ನಿವೃತ್ತ ಆಯುಕ್ತ ಎಸ್.ಜಿ. ಬಿರಾದಾರ ಹೇಳಿದರು.
ಪಟ್ಟಣದ ಆಲಮೇಲ ರಸ್ತೆಯ ಹೊರ ವಲಯದಲ್ಲಿರುವ ಪಿಇಎಸ್ ಶಿಕ್ಷಣ ಸಂಸ್ಥೆಯ ಪಪೂ ಕಾಲೇಜಿನ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾವೆಲ್ಲ ಶಿಕ್ಷಣದಿಂದ ನೈತಿಕ ಪ್ರಜ್ಞೆಯನ್ನು ಬೆಳೆಸಿಕೊಂಡು ಸಮಾಜದೊಳಗೆ ಎಲ್ಲರೊಳಗೆ ಒಂದಾಗಿ ಬದುಕಬೇಕು. ಅಸಾಧ್ಯವೆಂಬುದು ತೊರೆದು ಸಾಧ್ಯ ಎಂಬ ಸಿದ್ಧಾಂತವನ್ನು ಮೈಗೂಡಿಸಿಕೊಂಡಾಗ ಮಾತ್ರ ವಿದ್ಯಾರ್ಥಿಯ ಬದುಕು ಹಸನಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳಾದವರು ಕಷ್ಟಪಟ್ಟು ಓದಿ ಯಶಸ್ಸು ಗಳಿಸಬೇಕೆಂದು ಸಲಹೆ ನೀಡಿದರು.
ಅತಿಥಿಗಳಾದ ಎನ್.ಎಸ್.ಬಿರಾದಾರ, ಶರತ್ ನಾಡಗೌಡ ಮಾತನಾಡಿದರು.
ಈ ವೇಳೆ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಯಲ್ಲಿ ೧೦೦ಕ್ಕೆ ೧೦೦ ಅಂಕಗಳನ್ನು ಪಡೆದ ೨೦ ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಡಾ.ಸಂತೋಷಕುಮಾರ ಕರ್ಜಗಿ ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪಿ.ಇ.ಎಸ್ ಸಂಸ್ಥೆಯ ಗೌರವ ಕಾರ್ಯದರ್ಶಿ ಬಿ.ಪಿ. ಕರ್ಜಗಿ, ಆಯ್.ಬಿ. ಬಿರಾದಾರ, ಕೆ.ಎಚ್.ಸೋಮಾಪೂರ, ಪ್ರಾಚಾರ್ಯ ಆರ್.ಬಿ. ಗೋಡಕರ, ಜಿ.ಎಸ್.ಕಡಣಿ, ಉಪನ್ಯಾಸಕರಾದ ಪಿ.ಎಮ್.ಮಡಿವಾಳರ, ವಸಂತ ಪಾಟೀಲ, ಶಕುಂತಲಾ ಬಿರಾದಾರ, ಪೂಜಾ ಪಾಟೀಲ, ವಿದ್ಯಾರ್ಥಿ ಪ್ರತಿನಿಧಿ ಆಕಾಶ ಗಿರಣಿ, ದಾನಮ್ಮ ಅಗಸರ ಸೇರಿದಂತೆ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು. ಪ್ರಾಚಾರ್ಯ ಜಿ.ಎಸ್. ಕಡಣಿ ನಿರೂಪಿಸಿದರು. ಉಪನ್ಯಾಸಕಿ ಕರಿಷ್ಮಾ ವರದಿ ವಾಚಿಸಿದರು. ಸಿ.ಜೆ. ರಾಠೋಡ ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

