ಇಂಡಿ: ಇಂದು ಪ್ರತಿಯೊಬ್ಬರು ತಮ್ಮ ತಮ್ಮ ಮಕ್ಕಳನ್ನು ಅಕ್ಷರವಂತರಾಗಿ ಮಾಡಿದಾಗ ಮಾತ್ರ ದೇಶದ ಹಾಗೂ ಸಮಾಜದ ಪ್ರಗತಿಗೆ ಸಾಧ್ಯ ಎಂದು ಜೆಡಿ ಎಸ್ ಮುಖಂಡ ಬಿ.ಡಿ.ಪಾಟೀಲ ಹೇಳಿದರು.
ಪಟ್ಟಣದ ಶ್ರೀ ಹಡಪದ ಅಪ್ಪಣ್ಣ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯ ೧೫ನೇಯ ವಾರ್ಷಿಕ ಸಮ್ಮೇಳನದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ನಗರದಲ್ಲಿ ಶ್ರೀ ಹಡಪದ ಅಪ್ಪಣ್ಣನವರ ಶಿಕ್ಷಣ ಸಂಸ್ಥೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಮುಂಚೂಣಿಯಲ್ಲಿದೆ ಎಂದರು.
ಸಾನಿಧ್ಯ ವಹಿಸಿದ ಅಭಿನವ ರಾಚೋಟೇಶ್ವರ ಶ್ರೀಗಳು ಮಾತನಾಡಿದರು.
ವೇದಿಕೆಯ ಮೇಲೆ ದಯಾನಂದ ಹಿರೇಮಠ, ಸಂಸ್ಥೆಯ ಅಧ್ಯಕ್ಷ ಸಂತೋಷ ಗೌಳಿ, ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿದ್ದರಾಯ ಅಪ್ತಾಗಿರಿ, ಎನ್ ಎಸ್.ಕಟ್ಟಿಮನಿ, ಆಯ್,ಜಿ ಆಳೂರ, ಪಂಡಿತ ಬಿರಾದಾರ, ಮುಖ್ಯ ಗುರು ಎ.ಎಸ್.ಬೋರಾಮಣಿ, ಮುಖ್ಯ ಗುರುಮಾತೆಯರಾದ ಜಯಶ್ರೀ.ಟಿ.ಗೌಡ, ಕುಮಾರಿ ಭವಾನಿ ಗೌಡ, ಶ್ರೀದರ ಹಿಪ್ಪರಗಿ, ಸಿದ್ದಪ್ಪ ಗುನ್ನಾಪೂರ, ನಿರ್ದೇಶಕರಾದ ನಟರಾಜ್ ಗೌಳಿ, ಬಸವರಾಜ ನಾವಿ, ಧೂಳಪ ನಾವಿ, ಶಿವಾನಂದ ನಾವಿ, ನಾರಾಯಣ ರಾಠೋಡ, ಸಾಯಬಣ್ಣ ನಾವಿ, ಶಿಕ್ಷಕರು ಹಾಗೂ ಪೋಷಕರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

