ವಿಜಯಪುರ: ನಗರದ ಕನಕದಾಸ ಬಡಾವಣೆಯಲ್ಲಿರುವ ಐರಿಶ್ ಎಜುಕೇಶನಲ್ ಅಕ್ಯಾಡೆಮಿಯಲ್ಲಿ ರಾಜ್ಯೋತ್ಸವ ನಿಮಿತ್ತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭ ಐರಿಶ್ ಶಾಲೆಯ ಮುಖ್ಯಸ್ಥೆ ಶ್ರೀಮತಿ ದೀಪಾ ಆದಿತ್ಯ ಗೋಟಸಗಿ ಮಾತನಾಡಿ, ಮಕ್ಕಳಿಗೆ ಕ್ರೀಯಾತ್ಮಕ ಚುಟವಟಿಕೆಗಳ ಶಿಕ್ಷಣ ಅವಶ್ಯಕತೆ ಇದೆ. ಮಕ್ಕಳ ಬೌದ್ದಿಕ ಮತ್ತು ದೈಹಿಕ ಶಿಕ್ಷಣದಿಂದ ಮಕ್ಕಳು ಸದೃಢವಾಗಿ ಬೆಳೆಯಬೇಕು. ಈಗಿಂದಲೇ ಮಕ್ಕಳಿಗೆ ಸಂಸ್ಕಾರ ನೀಡಿ ಒಳ್ಳೆಯ ಪ್ರಜೆಗಳನ್ನಾಗಿ ಮಾಡುವ ಜವಾಬ್ದಾರಿ ಶಿಕ್ಷಕರ ಮೇಲೆ ಇದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮಕ್ಕಳಿಗಾಗಿ ವಿವಿಧ ಕಾರ್ಯಚಟುವಟಿಕೆಗಳನ್ನು ಏರ್ಪಡಿಸಲಾಗಿತ್ತು. ಮಕ್ಕಳು ಸಸ್ಯದ ಭಾಗಗಳ ಕಲಾ ಕೃತಿಗಳನ್ನು ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ವಿಜುಗೌಡ ಕಾಳಶೆಟ್ಟಿ , ಶಿಕ್ಷಕಿಯರಾದ ಶ್ರೀಮತಿ ಧನಲಕ್ಷ್ಮೀ ದೊಡಮನಿ, ಶೃತಿ ಗಾಯಕವಾಡ ಹಾಗೂ ಭೋದಕ ಭೋದಕೇತರ ಸಿಬ್ಬಂದಿ ಹಾಜರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

