ವಿಜಯಪುರ: ಜಿಲ್ಲಾ ವ್ಯಾಪ್ತಿಯ ಅರ್ಹ ವಿಕಲಚೇತನರಿಗೆ ಪ್ರಸಕ್ತ ಸಾಲಿನಲ್ಲಿ ಬ್ಯಾಟರಿ ಚಾಲಿತ ವ್ಹೀಲ್ ಚೇರ್ ವಿತರಿಸುವುದಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಫೆಬ್ರವರಿ ೧೫ ಕೊನೆಯ ದಿನವಾಗಿದೆ.
ಕುಟುಂಬ ವಾರ್ಷಿಕ ಆದಾಯ ರೂ.೨ ಲಕ್ಷ ಒಳಗಿರಬೇಕು. ವಿಕಲಚೇತನರ ವಿಶಿಷ್ಟ ಗುರುತಿನ ಚೀಟಿ (ಯುಡಿಐಡಿ) ಪಡೆದಿರಬೇಕು. ದೈಹಿಕ ವಿಕಲಚೇತನರ ಶೇ.೭೫ರಷ್ಟು ಇದಕ್ಕಿಂತ ಹೆಚ್ಚಿನ ವಿಕಲಚೇತನ ಹೊಂದಿದ ಯಂತ್ರ ಚಾಲಿತ ದ್ವಿಚಕ್ರ ವಾಹನ ಚಾಲನೆ ಮಾಡುವ ಸಾಮರ್ಥ್ಯ ಹೊಂದಿದ, ಬ್ಯಾಟರಿ ಚಾಲಿತ ವ್ಹೀಲ್ ಚೇರ್ ಚಲಾಯಿಸಲು ಇತರೇ ಎಲ್ಲಾ ರೀತಿಯಲ್ಲಿ ಸದೃಢರಾಗಿರುವ ವಿಕಲಚೇತನರಾಗಿರಬೇಕು. ಸರ್ಕಾರದಿಂದ ಯಂತ್ರಚಾಲಿತ ದ್ವಿಚಕ್ರ ವಾಹನ ಪಡೆದಿರಬಾರದು.
ಹೆಚ್ಚಿನ ಮಾಹಿತಿಗಾಗಿ ವಿಜಯಪುರ – ರವಿ ರಾಠೋಡ ( ಮೊ.೯೦೩೫೫೫೩೩೩೭), ಇಂಡಿ – ಪರಶುರಾಮ ಭೋಸಲೆ (ಮೊ.೯೯೭೨೪೪೧೪೬೪), ಸಿಂದಗಿ – ಮುತ್ತುರಾಜ ಸಾತಿಹಾಳ (ಮೊ.೯೯೮೦೦೧೯೬೩೫), ಬಸವನ ಬಾಗೇವಾಡಿ – ಎಸ್. ಡಿ ಬಿರಾದಾರ (ಮೊ.೮೭೨೨೧೩೫೬೬೦) ಹಾಗೂ ಮುದ್ದೇಬಿಹಾಳ – ಎಸ್.ಕೆ. ಘಾಟಿ (ಮೊ.೯೭೪೦೬೮೨೯೭೯) ಕಚೇರಿ ದೂರವಾಣಿ ಸಂಖ್ಯೆ ೦೮೩೫೨-೭೯೬೦೬೦ಗೆ ಸಂಪರ್ಕಿಸುವಂತೆ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿಗಳಾದ ರಾಜಶೇಖರ ದೈವಾಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
