ಕಲಕೇರಿ: ಕಲಬುರ್ಗಿ ನಗರದ ಕೋಟನೂರ್ ಲುಂಬುಣಿ ಉಧ್ಯಾನವನದಲ್ಲಿರುವ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಪುತ್ಥಳಿಗೆ ಅವಮಾನ ಮಾಡಿರುವ ದುಷ್ಕರ್ಮಿಗಳನ್ನು ಬಂದಿಸಿ ಅವರಿಗೆ ಕಠಿಣ ಶಿಕ್ಷೆಗೆ ಒಳಪಡಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಘಟನೆಯ ಸದಸ್ಯರು ಕಲಕೇರಿ ಗ್ರಾಮದಲ್ಲಿ ಅಂಬೇಡ್ಕರ್ ವೃತ್ತದಿಂದ ಮುಖ್ಯ ಬಜಾರ ವರೆಗೆ ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಸಿದರು.
ಬ್ರಹತ್ ಪ್ರತಿಭಟನಾ ರ‍್ಯಾಲಿ ಮುಖಾಂತರ ಮುಖ್ಯ ಬಜಾರ ತಲುಪಿ ಅಲ್ಲಿ ಟೈರ್‌ಗೆ ಬೆಂಕಿಯನ್ನು ಹಚ್ಚಿ ಪ್ರತಿಭಟನಾಕಾರರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ನಂತರ ಪ್ರತಿಭಟನಾ ಸ್ಥಳಕ್ಕಾಗಮಿಸಿದ ತಾಳಿಕೋಟಿ ಕಂದಾಯ ನೀರಿಕ್ಷಕ ದುಂಡಯ್ಯ ಮಠಪತಿ ಅವರ ಮೂಲಕ ಘನವೆತ್ತ ರಾಜ್ಯಪಾಲರಿಗೆ ತಲುಪುವಂತೆ ಮನವಿಯನ್ನು ಪ್ರತಿಭಟನಾಕಾರರು ಸಲ್ಲಿಸಿದರು.
ಈ ಸಂದರ್ಭದಲ್ಲಿ ಅನೇಕ ಪ್ರತಿಭಟನಾಕಾರರು ಮಾತನಾಡಿ, ಈ ಘಟನೆಗೆ ಸಂಬಂಧಿಸಿದ ಎಲ್ಲ ದುಷ್ಕರ್ಮಿಗಳನ್ನು ಬಂದಿಸಿ, ಅವರ ಮೇಲೆ ಸೂಕ್ತ ಕಾನೂನು ಕ್ರಮವನ್ನು ಜರುಗಿಸುವಂತೆ ಆಗ್ರಹಪಡಿಸಿದರು. ಇಂತಹ ದುಷ್ಕೃತ್ಯಗಳು ಮತ್ತೆ ನಡೆಯದಂತೆ ಸೂಕ್ತ ಪೋಲಿಸ್ ಬಂದೋಬಸ್ತಿ ಮತ್ತು ಗುಪ್ತಚರ ಇಲಾಖೆಗಳು ಕ್ರಮವಹಿಸಬೇಕೆಂದು ಅವರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ಲಕ್ಕಪ್ಪ ಬಡಿಗೇರ, ಹಣಮಂತ ವಡ್ಡರ, ಶರಣು ಶಿಂದೆ, ಪರಶುರಾಮ ದೋರೇಗೋಳ, ಸಲಿಂ ನಾಯ್ಕೋಡಿ, ಚಾಂದಪಾಶಾ ಹವಾಲ್ದಾರ, ಭಿಮಣ್ಣ ವಡ್ಡರ, ಮಾದೇವ ಲಿಂಗದಳ್ಳಿ, ಶಿವಶರಣ ಹೋಸಮನಿ, ಶಿವಾನಂದ ವಾಲಿಕಾ, ರನಬಿಲಾಲ್ ನಾಯ್ಕೋಡಿ, ಸಂತೋಷ ಮೋಪಗಾರ, ಸಂಗು ದೇಸಾಯಿ, ಹಾಜಿಪಾಷಾ ಜಾಗೀರದಾರ, ದೇವಿಂದ್ರ ಬಡಿಗೇರ, ಪ್ರಕಾಶ ಪುಜಾರಿ, ಲಕ್ಷ್ಮಣ ಹೋಸಮನಿ, ರಮೇಶ ಹೋಸಮನಿ, ಶಿವು ಹೋಸಮನಿ, ಅಶೋಕ ವಡ್ಡರ್, ದತ್ತಪ್ಪ ಬನ್ನೇಟ್ಟಿ, ರವಿ ಸುದಾಕರ್, ವಿನೋದ ವಡಗೇರಿ, ಅಶೋಕ ಕೇರೂಟಗಿ, ಸಂಜೀವ ಪವಾರ,ಮಹೇಶ ದೋಡಮನಿ, ಅಶೋಕ ಗಡಸಲಮನಿ ಸೇರಿದಂತೆ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

