Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಮೇ 01, 2026

ಮೂಢನಂಬಿಕೆಯಿಂದ ವೈಚಾರಿಕತೆಯತ್ತ ಕರೆದೊಯ್ದ ಬಸವಣ್ಣನವರು

ಶ್ರಮಯೇವ ಜಯತೆ..

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಕಡಣಿಯಲ್ಲಿ ಸಾಹಿತ್ಯಿಕ ಕ್ಷೇತ್ರದ ಮೈಲಿಗಲ್ಲು!
(ರಾಜ್ಯ ) ಜಿಲ್ಲೆ

ಕಡಣಿಯಲ್ಲಿ ಸಾಹಿತ್ಯಿಕ ಕ್ಷೇತ್ರದ ಮೈಲಿಗಲ್ಲು!

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಜ.೩೦ರಂದು ೩೦ ಪುಸ್ತಕಗಳ ಲೋಕಾರ್ಪಣೆ | ಬೆರಗು ಪ್ರಶಸ್ತಿ ಪ್ರದಾನ


ಆಲಮೇಲ: ತಾಲ್ಲೂಕಿನ ಕಡಣಿ ಗ್ರಾಮದ ಬೆರಗು ಪ್ರಕಾಶನ ಸಂಸ್ಥೆಯು ಪ್ರಕಟಿಸಿದ ೩೦ ಪುಸ್ತಕಗಳ ಲೋಕಾರ್ಪಣೆ ಹಾಗೂ ಬೆರಗು ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಜ್ಞಾನಯೋಗಿ ಶ್ರೀಸಿದ್ದೇಶ್ವರ ಶ್ರೀಗಳ ಸಂಸ್ಮರಣಾರ್ಥ ಜ.೩೦ ರಂದು ಕಡಣಿ ಗ್ರಾಮದ ಪಿ.ಬಿ.ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದ ಆವರಣದಲ್ಲಿ ಹಮ್ಮಿಕೊಂಡಿದೆ.
ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಮಹೇಶ ಜೋಶಿ ಅವರು ಪುಸ್ತಕಗಳನ್ನು ಲೋಕಾರ್ಪಣೆ ಮಾಡುವರು. ಬೆರಗು ಪ್ರಶಸ್ತಿಗಳನ್ನು ಬೆಂಗಳೂರು ವೀರಲೋಕ ಪ್ರಕಾಶನದ ವೀರಕಪುತ್ರ ಶ್ರೀನಿವಾಸ ಅವರು ಬೆರಗು ಸಮಗ್ರ ಸಾಹಿತ್ಯ ಪ್ರಶಸ್ತಿ ಪಡೆದ ಡಾ.ಸಂಗಮನಾಥ ಲೋಕಾಪೂರ ಅವರಿಗೆ ಹಾಗೂ ದಿ.ಯಮುನಾಬಾಯಿ ರಾಜಣ್ಣ ಭೋವಿ ದತ್ತಿ ಪುಸ್ತಕ ಪ್ರಶಸ್ತಿ ಪಡೆದ ಕಲಬುರಗಿಯ ಡಾ. ಲಕ್ಷ್ಮಣ ಕೌಂಟೆ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಸಿಂದಗಿ ಶಾಸಕ ಅಶೋಕ ಮನಗೂಳಿ ಕಾರ್ಯಕ್ರಮ ಉದ್ಘಾಟಿಸುವರು. ಗುಲಬರ್ಗಾ ವಿವಿಯ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ. ಎಚ್.ಟೊ.ಪೋತೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಡಾ.ಶ್ರೀಶೈಲ ನಾಗರಾಳ ಪುಸ್ತಕ ಪರಿಚಯಿಸಲಿದ್ದಾರೆ, ಜಿಲ್ಲಾ ಕಸಾಪ ಅಧ್ಯಕ್ಷ ಹಾಸಿಂಪೀರ ವಾಲೀಕಾರ, ಕಡಣಿ ಗ್ರಾಮ ಪಂಚಾಯತಿ ಅಧ್ಯಕ್ಷ ಬಸಲಿಂಗಪ್ಪ ಕತ್ತಿ  ಮುಖ್ಯ ಅತಿಥಿಗಳಾಗಿದ್ದಾರೆ. ವಿವಿಧ ಗ್ರಂಥಗಳಿಗೆ ಗ್ರಂಥ ದಾನ ಮಾಡಿದ ದಾನಿಗಳನ್ನು, ಪುಸ್ತಕಗಳ ಲೇಖಕರನ್ನು, ಕಲಾವಿದರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಗುತ್ತದೆ.
ವಿವಿಧ ಸಾಹಿತ್ಯ ಪ್ರಕಾರಕ್ಕೆ ಸೇರಿದ ೨೧ ಪುಸ್ತಕಗಳು ಹಾಗೂ ನಾವು-ನಮ್ಮ ಸಾಧಕರ ಮಾಲೆಯ ೯ ಪುಸ್ತಕಗಳು ಹಾಗೂ ಎರಡು ಕನ್ನಡ ಸಾಹಿತ್ಯದ ಇಂಗೀಷ್ ಪುಸ್ತಕಗಳು ಬಿಡುಗಡೆಗೆ ಸಜ್ಜಾಗಿವೆ ಎಂದು ಬೆರಗು ಪ್ರಕಾಶನ ಸಂಸ್ಥೆಯ ಅಧ್ಯಕ್ಷೆ ವಿಜಯಲಕ್ಷ್ಮಿ ಆರ್. ಕತ್ತಿ ತಿಳಿಸಿದ್ದಾರೆ.
ನಾವು ನಮ್ಮ ಸಾಧಕರ ಮಾಲೆ : ಮೊದಲಿನ ಎರಡು ಆವೃತ್ತಿಗಳಲ್ಲಿ ಹೊರಬಂದ ಜಿಲ್ಲೆಯ ಸಾಧಕರ ಪುಸ್ತಕಗಳಿಗೆ ಬೇಡಿಕೆ ಮತ್ತು ಜನಪ್ರಿಯವಾಗಿರುವದರಿಂದ ಈಸಲ ೩ನೇ ಆವೃತ್ತಿಯಲ್ಲಿ ಜ್ಞಾನಯೋಗಿ ಸಿದ್ದೇಶ್ವರ ಶ್ರೀಗಳ ಕುರಿತು ಹಾಗೂ ವಿವಿಧ ಕ್ಷೇತ್ರದ ೯ ಸಾಧಕರ ಕುರಿತು ಪುಸ್ತಕ ಬರೆಯಿಸಿ ಅವುಗಳನ್ನು ಪ್ರಕಟಿಸಿ ಶಾಲಾ-ಕಾಲೇಜುಗಳಿಗೆ ತಲುಪಿಸುತ್ತೇವೆ. ವಿದ್ಯಾರ್ಥಿಗಳು ನಮ್ಮ ಸಾಧಕರ ಬಗ್ಗೆ ತಿಳಿದುಕೊಂಡು ಅವರ ಪ್ರಭಾವ ಮಕ್ಕಳ ಮೇಲೆ ಆಗಲಿ ಎಂಬುದು ನಮ್ಮ ಆಶಯ ಎಂದು ಬೆರಗು ಪ್ರಕಾಶನದ ಪ್ರಕಟಣಾ ವಿಭಾಗದ ಡಾ. ರಮೇಶ ಎಸ್. ಕತ್ತಿ ತಿಳಿಸಿದ್ದಾರೆ. ಈ ಮಾಲೆ ಜನರ ಹತ್ತಿರಕ್ಕೆ ಹೋಗುತ್ತಿರುವುದು ಸಮಾಧಾನ ತಂದಿದೆ ಎಂದು ಹೇಳಿದ್ದಾರೆ.


*ಲೋಕಾರ್ಪಣೆಗೊಳ್ಳಲಿರುವ ೩೦ ಪುಸ್ತಕಗಳು*

ನೋವಿಗೂ ಇದೆ ಚಲನೆ ಲೇ:ಹೇಮಾ ನಾಯಕ, ಓದಿದಷ್ಟೂ ಅರಿವು ಲೇ:ಡಾ. ರಮೇಶ ಎಸ್. ಕತ್ತಿ, ಕಾಯಿನ ಬೂತ್ ಲೇ: ಡಾ. ಲಕ್ಷö್ಮಣ ವಿ.ಎ, ದೀಪ ಹಚ್ಚುವ ಸಮಯ  ಲೇ:ಸಿದ್ಧರಾಮ ಉಪ್ಪಿನ, ಭವದ ಸಂತಿ ಮಾಡುತ ಕುಂತಿ  ಲೇ:ಇಸ್ಮಾಯಿಲ್ ಮೋರಟಗಿ,ಕನ್ನಡ ಅಸ್ಮಿತೆಯ ಚಹರೆಗಳು ಲೇ:ಪ್ರೊ. ರಾಜಕುಮಾರ ಬಡಿಗೇರ, ಆಧುನಿಕ ಕನ್ನಡ ಖಂಡ ಕಾವ್ಯ ಲೇ: ಡಾ.ಮಲ್ಲಪ್ಪ ಬಂಡಿ, ಅಪ್ಪನ ಲೆಕ್ಕ ಲೇ:ಪುಂಡಲೀಕ ಕಲ್ಲಿಗನೂರ, ಒಳನೋಟ ಲೇ:ಪ್ರಭಾವತಿ ದೇಸಾಯಿ, ಜೌರಂಗಜೇಬ (ನಾಟಕ)ಲೇ:ಡಾ.ಮಲ್ಲಪ್ಪ ಬಂಡಿ, ಗ್ರಾಮೀಣಾಭಿವೃದ್ದಿ ಮತ್ತು ಸಮೂಹ ಮಾಧ್ಯಮಗಳು ಲೇ: ಡಾ.ಸಂಜಯಕುಮಾರ ಮಾಲಗತ್ತಿ, ಅನುರಣನ ಲೇ:ಡಾ.ಮಲ್ಲಪ್ಪ ಬಂಡಿ, ಅಪ್ಪನೆಂಬೊ ಆಗಸಲೇ:ಡಾ. ವೈ.ಎಂ.ಯಾಕೊಳ್ಳಿ, ಅಳುವ ನದಿ ಲೇ: ಸನಾವುಲ್ಲಾ ನವಿಲೇಹಾಳು,  ನನ್ನೆದೆಯ ಕೊಳಲು  ಲೇ:ಲಕ್ಷ್ಮೀ ಮುದೇನೂರು, ಬುದ್ದ ಇದ್ದನಲ್ಲಿ ಲೇ:ಡಾ.ಸುಜಾತ ಚಲವಾದಿ, ಅಮ್ಮ ಲೇ:ಪಿ.ಬಿ.ಅವಜಿ, ಗೊಲ್ಲಾಳೇಶತನಯ ಸಂ:ಶಂಕರ ಬೈಚಬಾಳ, ಹುಟ್ಟು ಸಾವಿನ ಕಟ್ಟು ಹರಿದು (ತತ್ವಪದಗಳು) ಸಂ:ಸಾಹೇಬಗೌಡ ಯ. ಬಿರಾದಾರ, ಕೆ.ಎಚ್.ಸೋಮಾಪೂರ-೭೫ ಸಂ:ಡಾ. ಮಿರಾಜಪಾಶಾ
ನಾವು- ನಮ್ಮ ಸಾಧಕರು ಮಾಲೆಯ ಪ್ರಕಟಣೆಗಳು: ಶಬ್ದಾತೀತರೊಂದಿಗಿನ ಶಬ್ದಗಳು (ಶ್ರೀ ಸಿದ್ದೇಶ್ವರ ಶ್ರೀಗಳು) ಲೇ:ಶಂಕರ ಬೈಚಬಾಳ, ರಾಗಂ ಬರಹ ಬೆರಗು ಲೇ:ಅನುಸೂಯ ಯತೀಶ, ಡಾ.ಪದ್ಮರಾಜ ದಂಡಾವತಿ ಅವರ ಜೀವನ ಮತ್ತು ಸಾಧನೆಗಳು: ಲೇ:ಡಾ.ಶ್ರೀದೇವಿ ಎನ್.ಎಂ, ಜಾನಪದ ಸಿರಿ ಡಾ.ಎಂ.ಎಂ ಪಡಶೆಟ್ಟಿ ಲೇ:ಡಾ. ಎಚ್.ಎಸ್.ಘಂಟಿ, ಕಥಾಸಂಗಮ ಲೇ:ಪ್ರೊ.ಚಂದ್ರಶೇಖರ ಹೆಗಡೆ, ಬೀದಿ ನಾಟಕದ ಭೀಷ್ಮ ಸೋಮಶೇಖರ ಬದುಕು-ಬಣ್ಣ ಲೇ:ಸಿ.ಎಂ.ಬಂಡಗರ, ಡಾ.ಚನ್ನಪ್ಪ ಕಟ್ಟಿ ಅವರ ಸಾಹಿತ್ಯ ಮತ್ತು ಸಾಧನೆ ಲೇ:ರಾಜೇಶ್ವರಿ ಸಾಲಿಮಠ, ಸುರಗಿಯ ಮೊನೆ (ಡಾ.ಬಸವರಾಜ ಡೋಣೂರ ಬದುಕು ಬರಹ) ಲೇ:ವಿಜಯಲಕ್ಷ್ಮಿ ದಾನರಡ್ಡಿ, ಹಣತೆಯ ಬೆಳಕು (ಶಶಿಕಲಾ ವಸ್ತçದ ಬದುಕು ಬರಹ)ಲೇ:ಹೇಮಲತಾ ವಸ್ತ್ರದ

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಮೂಢನಂಬಿಕೆಯಿಂದ ವೈಚಾರಿಕತೆಯತ್ತ ಕರೆದೊಯ್ದ ಬಸವಣ್ಣನವರು

ಶ್ರಮಯೇವ ಜಯತೆ..

ಕೆಎಸ್ಒಯು ಜೊತೆ ಶೈಕ್ಷಣಿಕ ಒಪ್ಪಂದ :ಡಾ.ಅರುಣ್ ಕುಮಾರ್

ಕೃಷಿ ಮತ್ತು ಉದ್ಯಮಿ ವಲಯಕ್ಕೆ ಹೆಚ್ಚಿನ ಒತ್ತು :ಸಿಇಓ ರಿಷಿ ಆನಂದ್

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಮೇ 01, 2026
    In ದಿನಪತ್ರಿಕೆ
  • ಮೂಢನಂಬಿಕೆಯಿಂದ ವೈಚಾರಿಕತೆಯತ್ತ ಕರೆದೊಯ್ದ ಬಸವಣ್ಣನವರು
    In (ರಾಜ್ಯ ) ಜಿಲ್ಲೆ
  • ಶ್ರಮಯೇವ ಜಯತೆ..
    In ವಿಶೇಷ ಲೇಖನ
  • ಕೆಎಸ್ಒಯು ಜೊತೆ ಶೈಕ್ಷಣಿಕ ಒಪ್ಪಂದ :ಡಾ.ಅರುಣ್ ಕುಮಾರ್
    In (ರಾಜ್ಯ ) ಜಿಲ್ಲೆ
  • ಕೃಷಿ ಮತ್ತು ಉದ್ಯಮಿ ವಲಯಕ್ಕೆ ಹೆಚ್ಚಿನ ಒತ್ತು :ಸಿಇಓ ರಿಷಿ ಆನಂದ್
    In (ರಾಜ್ಯ ) ಜಿಲ್ಲೆ
  • ವಿಜಯಪುರ ಜಿಲ್ಲಾ ಬಾಲಭವನದ ಬೇಸಿಗೆ ಶಿಬಿರದ ಸಮಾರೋಪ
    In (ರಾಜ್ಯ ) ಜಿಲ್ಲೆ
  • ಮಲೇರಿಯಾ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ
    In (ರಾಜ್ಯ ) ಜಿಲ್ಲೆ
  • ಮಲೇರಿಯಾ ಕೆಲವೊಮ್ಮೆ ಮಾರಕವಾಗಬಹುದು :ಕೋಳೆಕರ
    In (ರಾಜ್ಯ ) ಜಿಲ್ಲೆ
  • ಶಿಕ್ಷಕರ ಸಂಘಕ್ಕೆ ಮೇ ೧೦ಕ್ಕೆ ಚುನಾವಣೆ :ಅಂದೇ ಫಲಿತಾಂಶ
    In (ರಾಜ್ಯ ) ಜಿಲ್ಲೆ
  • ಪ್ರಸ್ತುತ ಸಮಾಜಕ್ಕೆ ಬಸವಣ್ಣನವರ ಆದರ್ಶಗಳು
    In ವಿಶೇಷ ಲೇಖನ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.