ಕೆಂಭಾವಿ: ಪಟ್ಟಣದ ಹಳೆ ಬಸ್ ಸ್ಟ್ಯಾಂಡ್ ಹತ್ತಿರ ಜ.೨೬ರಂದು ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ನೂತನ ಪುತ್ಥಳಿ ಅನಾವರಣ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಸಾನಿಧ್ಯವನ್ನು ಬಂತೆ ದಮ್ಮಾನಂದ ಮಾಹಾತೇರ ಬೀದರ ಇವರು ವಹಿಸಿದ್ದರು. ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಯನ್ನು ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿದ್ದನಗೌಡ ಪೋಲೀಸ್ ಪಾಟೀಲ್ ಉದ್ಘಾಟಿಸಿ, ಮಾತನಾಡಿ, ಎಲ್ಲಾ ಶೋಷಿತ ವರ್ಗದವರಿಗೆ ನ್ಯಾಯತವಾದ ಹಕ್ಕುಗಳನ್ನು ಕೊಡಿಸುವುದರಲ್ಲಿ ಅಂಬೇಡ್ಕರ್ ಅವರೇ ಮುಂಚೂಣಿ ನಾಯಕರು. ಅವರು ಸಂವಿಧಾನ ರಚನೆಗೆ ಎರಡು ವರ್ಷ 11 ತಿಂಗಳನ್ನು 18 ದಿವಸ ತಮ್ಮ ಜೀವನವನ್ನೇ ಮುಡುಪಾಗಿ ಇಟ್ಟವರು. ನಾವೆಲ್ಲರೂ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ವಾಮನರಾವ ದೇಶಪಾಂಡೆ. ಅಶೋಕ್ ಸೊನ್ನದ. ಶಿವನಗೌಡ ಮಾಲಿ ಪಾಟೀಲ್. ಸುಧಾಕರ್ ಡಿಗ್ಗಾವಿ. ಕೃಷ್ಣಯ್ಯ ಗುತ್ತೇದಾರ್. ರೈಮನ್ ಪಟೇಲ್ ಯಲ್ಗೋಡ. ಲಕ್ಷ್ಮೀಬಾಯಿ ಕಂಬಾರ. ಮಲ್ಲಿಕಾರ್ಜುನ್ ಪಾಟೀಲ್, ಉಪ ತಹಶೀಲ್ದಾರ್ ಲಾಲಪ್ಪ ಹೊಸ್ಮನಿ. ಬಸವರಾಜ್ ಮಲ್ಲೆ, ಮಲ್ಲಿಕಾರ್ಜುನ ಕಡಕಲ, ಶಿವಶರಣಪ್ಪ ವಾಡಿ, ಶರಣು ಹೂನಹಳ್ಳಿ, ಧರ್ಮಣ್ಣ ಬಡಿಗೇರ್ ಸೇರಿದಂತೆ ಹಲವರಿದ್ದರು.
ನಿರೂಪಣೆ ಶರಣಪ್ಪ ಗಾಯಕ್ವಾಡ ಮಾಡಿದರು. ಸ್ವಾಗತವನ್ನು ರಾಯಪ್ಪ ಕಡಕಲ್ ಮಾಡಿದರು. ವಂದನಾರ್ಪಣೆಯನ್ನು ಬಸವಣ್ಣಪ್ಪ ಆರ್ ಮಾಳಳ್ಳಿಕರ್ ಮಾಡಿದರು.
Subscribe to Updates
Get the latest creative news from FooBar about art, design and business.
Related Posts
Add A Comment

