ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಗಣರಾಜ್ಯೋತ್ಸವ
ವಿಜಯಪುರ: ದೇಶದ ಏಳಿಗೆಗಾಗಿ ಶ್ರಮಿಸಬೇಕಾಗಿರುವಂಥದ್ದು ಪ್ರತಿಯೊಬ್ಬರ ಆದ್ಯ ಕರ್ತವ್ಯ ಸಂವಿಧಾನದ ಆಶಯಗಳನ್ನು ಕಾರ್ಯರೂಪಕ್ಕೆ ಬರಲು ಪ್ರತಿಯೊಬ್ಬರಿಗೂ ಸಂವಿಧಾನದ ಹಕ್ಕುಗಳು, ಕಾನೂನುಗಳು ಹಾಗೂ ಮೌಲ್ಯಗಳನ್ನು ಎತ್ತಿ ಹಿಡಿದು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಈ ದಿನ ಆಚರಣೆ ಸಾರ್ಥಕವಾಗುತ್ತದೆ ಎಂದು ಪ್ರಾಚಾರ್ಯೆ ಡಾ.ಆರ್.ಎಮ್.ಮಿರ್ದೆ ಹೇಳಿದರು.
ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್. ಬಿ. ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ನಡೆದ ೭೫ನೇ ಗಣರಾಜ್ಯೋತ್ಸವದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ದೇಶದ ಉದ್ದಗಲಕ್ಕೂ ಪ್ರತಿ ಮೂಲೆಯಲ್ಲಿಯೂ ಈ ಸಂಭ್ರಮ ಆಚರಿಸುತ್ತಿದ್ದು ದೇಶದ ಸಂಸೃತಿಯನ್ನು ಬಿಂಬಿಸುವಂತಹ ಆಚರಣೆಯಾಗಿದೆ ಎಂದರು.
ಪ್ರತಿಯೊಂದು ದೇಶವೂ ತನ್ನದೇ ಆದಂತಹ ಸಂವಿಧಾನವನ್ನು ಹೊಂದಿರುತ್ತದೆ. ಅದೇ ತೆರನಾಗಿ ಭಾರತವು ಕೂಡ ವಿವಿಧ ಗಣಗಳಿಂದ ಕೂಡಿದ ಅಖಂಡ ಭಾರತದ ಜನತೆಗೆ ಸ್ವಾತಂತ್ರ್ಯ, ಸಮಾನತೆ, ಭಾತೃತ್ವ, ಹಾಗೂ ಜಾತಾತೀತೆಯ ಮೌಲ್ಯಗಳನ್ನು ಭಾರತೀಯರಿಗೆ ಅವಕಾಶ ಕಲ್ಪಿಸಿದ ಸಂವಿಧಾನದ ಜಾರಿಯಾದ ಸುದಿನ ಎಂದು ಹೇಳಿದರು.
ನ್ಯಾಯ, ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಜಾತ್ಯಾತೀತ ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ ಸಂವಿಧಾನವನ್ನು ಜನವರಿ ೨೬ ೧೯೫೦ ರಲ್ಲಿ ಜಾರಿಗೊಳಿಸುವ ಮೂಲಕ ಭಾರತ ಸ್ವಾತಂತ್ರ್ಯ ಗಣರಾಜ್ಯವಾಯಿತು.ಭಾರತದ ಸುದೀರ್ಘ ಇತಿಹಾಸವು ಕೇವಲ ದಾಳಿಗಳು, ಆಕ್ರಮಣಗಳು, ಸೋಲು, ಗುಲಾಮಗಿರಿ, ಬಡತನ ಅನಕ್ಷರತೆ, ಜಾತೀಯತೆ ಮತ್ತು ಯುದ್ಧಗಳನ್ನು ಮಾತ್ರ ಪ್ರತಿಬಿಂಬಿಸುವುದಿಲ್ಲ. ಬದಲಿಗೆ ಸಮಸ್ಯೆಗಳಿಂದ ಹೊರ ಬರುವ ನಿಟ್ಟಿನಲ್ಲಿ ಅವಿರತವಾಗಿ ಶ್ರಮಿಸಿದ ಮಹಾನ್ ದೇಶಭಕ್ತರ ಹೋರಾಟವನ್ನು ಸಾರುತ್ತದೆ. ಮಹಾನ್ ದೇಶಪ್ರೇಮಿಗಳ ತ್ಯಾಗ-ಬಲಿದಾನಗಳ ಚಿರಂತನ ಸ್ಪೂರ್ತಿಗಳಾಗಿವೆ ಎಂದು ಹೇಳಿದರು.ಅದರಂತೆ ಇಂದಿನ ಯುವಕರು ದೇಶದ ಏಳಿಗೆಗೆ ಶ್ರಮಿಸಿದ ಮಹಾನ್ ದಾರ್ಶನಿಕರನ್ನು ಸ್ಪೂರ್ತಿಯಾಗಿಸಿಕೊಂಡು ದೇಶದ ಪ್ರಗತಿಗೆ ಮತ್ತು ಅಭಿವೃದ್ದಿಗೆ ಶ್ರಮಿಸಬೇಕಾಗಿದೆ ವಿದಾರ್ಥಿಗಳು ನಿರಂತರ ಕಲಿಕೆ,ದೈರ್ಯ, ಸಾಹಸ,ನಿರ್ದಿಷ್ಟ ಗುರಿ ಸಂವಿಧಾನದ ಆಶಯಗಳು ಇಡೇರಿಸುವಲ್ಲಿ ಇಂದಿನ ಯುವಕರು ಶ್ರಮಿಸಬೇಕಾಗಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಮಾಣ ಪತ್ರಗಳು ವಿತರಿಸಲಾಯಿತು.
ಪ್ರಾಚಾರ್ಯ ಡಾ.ಆರ್.ಎಂ.ಮಿರ್ದೆ, ಪಿಯು ಕಾಲೇಜ್ ಪ್ರಾಚಾರ್ಯ ಪ್ರೊ.ಸಿ.ಬಿ.ಪಾಟೀಲ, ಎನ್‌ಸಿಸಿ ಅಧಿಕಾರಿಗಳಾದ ಡಾ.ರಾಮಚಂದ್ರ ನಾಯಕ, ದೈಹಿಕ ನಿರ್ದೇಶಕ ಎಸ್.ಕೆ.ಪಾಟೀಲ, ಸ್ಕೌಟ್ಸ್ ಮತ್ತು ಗೈಡ್ಸ್ ಅಧಿಕಾರಿಗಳಾದ ಡಾ.ಅನೀಲ.ನಾಯಕ, ಡಾ.ಉಷಾದೇವಿ ಹಿರೇಮಠ, ಸಾಂಸ್ಕೃತಿಕ ವಿಭಾಗದ ಕಾರ್ಯಾದ್ಯಕ್ಷ ಡಾ.ಶ್ರೀನಿವಾಸ ದೊಡ್ಡಮನಿ, ಮಹಾವಿದ್ಯಾಲಯದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಪ್ರೊ.ಶ್ವೇತಾ ಸವನೂರ ಕಾರ್ಯಕ್ರಮ ನಿರೂಪಿಸಿದರು.

