ವಿಜಯಪುರ: ಇಂಡಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ನಡೆಸಿರುವ ಭ್ರಷ್ಟಾಚಾರದ ಕುರಿತು ತನಿಖೆ ಕೈಗೊಂಡು ಅವರನ್ನು ಅಮಾನತ್ತುಗೊಳಿಸುವಂತೆ ಆಗ್ರಹಿಸಿ ಜಯ ಕರ್ನಾಟಕ ಸಂಘಟನೆಯ ವತಿಯಿಂದ ಉಪ ನಿರ್ದೇಶಕರು, ಸಾ.ಶಿ.ಇ. ವಿಜಯಪುರ ಮುಖಾಂತರ ಅಪರ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಧಾರವಾಡ ಇವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಮಹೇಶ ನಾಯಕ ಮಾತನಾಡಿ, ಡಿ.ಬಿ.ಇ. ಪ್ರೌಢಶಾಲಾ ನಿಂಬಾಳ ಎಲ್.ಟಿಗೆ ಸಂಬಂಧಿಸಿದಂತೆ ಅಕ್ರಮವಾಗಿ ನಡೆಯುತ್ತಿರುವ ಶಾಲೆಗೆ ಶಿಸ್ತು ಕ್ರಮ ಕೈಗೊಳ್ಳಲು ತಿಳಿಸಲಾಗಿತ್ತು. ಅದಕ್ಕೆ ತಾವು ಇಂಡಿ ಕ್ಷೇತ್ರ ಶಿಕ್ಷಣ ಅಧಿಕಾರಿಗಳಿಗೆ ವಿಚಾರಣೆ ನಡೆಸಿ ಶಿಸ್ತಿನ ಕ್ರಮ ಕೈಗೊಳ್ಳಲು ಆದಶಿಸಿದ್ದಿರಿ. ಆದರೆ ಇಂಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ತನಿಖೆ ನಡೆಸಿ, ಸ್ವಂತ ಜಾಗವಿಲ್ಲದ ಸರ್ಕಾರದ ಜಾಗದಲ್ಲಿ ಅಕ್ರಮವಾಗಿ ನಡೆಯುತ್ತಿರುವ ಸಂಸ್ಥೆ ಎಂದು ಸ್ಪಷ್ಟವಾಗಿ ಕಂಡು ಬಂದ ಕಾರಣ ಅವರ ವೇತನ ಅನುದಾನವನ್ನು ಸಹ ಎರಡು ತಿಂಗಳು ತಡೆ ಹಿಡಿಯಲಾಗಿತ್ತು. ಆದರೆ ಈಗ ವೇತನ ಅನುದಾನ ಬಿಡುಗಡೆ ಮಾಡಿರುವದರಿಂದ ಇಲ್ಲಿ ಸ್ಪಷ್ಟವಾಗಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಕಂಡುಬರುತ್ತದೆ.
ಆದ್ದರಿಂದ ಕೂಡಲೇ ಭ್ರಷ್ಟಾಚಾರ ಎಸಗಿದ ಕ್ಷೇತ್ರ ಶಿಕ್ಷಣ ಅಧಿಕಾರಿ ಮೇಲೆ ತನಿಖೆ ನಡಿಸಿ ಅಮಾನತ್ತು ಗೊಳಿಸಬೇಕು.
ಒಂದು ವೇಳೆ ಇವರ ಮೇಲೆ ಕ್ರಮ ಕೈಗೊಳ್ಳದೇ ಹೋದಲ್ಲಿ ಜಿಲ್ಲೆಯಾದ್ಯಂತ ಹೋರಾಟ ಕೈಗೊಳ್ಳಲಾಗುವದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ರಾಕೇಶ ಕಲ್ಲೂರ, ಗೌರವಾಧ್ಯಕ್ಷ ಸುರೇಶ ದೇಸಾಯಿ, ಸುರೇಶ ರಜಪೂತ, ವಿಜಯಸಿಂಗ ರಜಪೂತ, ಶಿವಗಂಗಾ ಕಟ್ಟಿಮನಿ, ಮಲ್ಲಮ್ಮ ಲಮಾಣಿ, ಅಶ್ವನಿ ಸಾವಂತ, ಸವಿತಾ ಪೂಜಾರಿ, ನೀಲಕಂಠ ಚವ್ಹಾಣ, ರೇಣುಕಾ ಕಟ್ಟಿಮನಿ, ರೇಣುಕಾ ಅಗಸರ, ಸಂತೋಷ ಚವ್ಹಾಣ, ಮುತ್ತು ಪೊಲೀಸ್‌ಪಾಟೀಲ, ದೇವರ ಹಿಪ್ಪರಗಿ ಅಧ್ಯಕ್ಷ ರಹಿಮಾನ ಕಣಕಾಲ್ ಇನ್ನಿತರರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

