Author: editor.udayarashmi@gmail.com

ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ | ಪ್ಯಾನ್ ಇಂಡಿಯಾ ರಕ್ಷಣೆ & ಪುನರ್ವಸತಿ ಅಭಿಯಾನ ವಿಜಯಪುರ: ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನದ ಅಂಗವಾಗಿ ಒಂದು ತಿಂಗಳ ಪ್ಯಾನ್ ಇಂಡಿಯಾ ರಕ್ಷಣೆ ಮತ್ತು ಪುರ್ನವಸತಿ ಅಭಿಯಾನ ಹಮ್ಮಿಕೊಂಡಿದ್ದು, ಅಭಿಯಾನದ ಅಂಗವಾಗಿ ಜೂ.೫ ರಂದು ತಿಕೋಟಾದಲ್ಲಿ ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ ಹಾಗೂ ವಿವಿಧ ಇಲಾಖೆಗಳ ಜಂಟಿ ಸಹಯೋಗದಲ್ಲಿ ವಿವಿಧ ಅಂಗಡಿ ಹಾಗೂ ವಾಣಿಜ್ಯ ಸಂಸ್ಥೆಗಳಿಗೆ ಭೇಟಿ ನೀಡಿ ಕರಪತ್ರ ಹಾಗೂ ಸ್ಟೀಕರ್ ಅಂಟಿಸುವ ಮೂಲಕ ಜಾಗೃತಿ ಮೂಡಿಸಲಾಯಿತು.ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಕೈಗೊಂಡ ಅಭಿಯಾನದ ಸಂದರ್ಭದಲ್ಲಿ ಯಾವುದೇ ಬಾಲ ಮತ್ತು ಕಿಶೋರ ಕಾರ್ಮಿಕರು ಪತ್ತೆಯಾಗಿರುವುದಿಲ್ಲ. ಈ ಅಭಿಯಾನದಲ್ಲಿ ಕಾರ್ಮಿಕ ನಿರೀಕ್ಷಕರಾದ ಶ್ರೀಮತಿ ಜಗದೇವಿ ಸಜ್ಜನ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ಯೋಜನಾ ನಿರ್ದೇಶಕ ಕುಮಾರಿ ನೀಲಮ್ಮಾ ಎಚ್. ಖೇಡಗಿ, ಶಿರಸ್ತೆದಾರ ಆರ್.ಎಚ್.ಸುಣಗಾರ, ದೈಹಿಕ ಶಿಕ್ಷಣ ಪರಿವೀಕ್ಷಕ ಸಿ.ಎಂ.ಕೋರೆ, ಸಹಾಯಕ ಶಿಶು ಅಭಿವೃದ್ದಿ ಯೋಜನಾಧಿಕಾರಿ ವ್ಹಿ.ಕೆ.ಹೊಸಮನಿ, ಸಮಾಜ ಕಲ್ಯಾಣ ಇಲಾಖೆಯ…

Read More

ವಿಜಯಪುರ: ಜಿಲ್ಲೆಯ ತಾಳಿಕೋಟಿ ತಾಲೂಕಿನ ವನಹಳ್ಳಿ ಗ್ರಾಮದಲ್ಲಿ ಹೊಸದಾಗಿ ಹೊಸದಾಗಿ ನಿರ್ಮಿಸಲಾಗುತ್ತಿರುವ ೧೧೦/೧೧ ಕೆ.ವಿ ವಿದ್ಯುತ್‌ವಿತರಣಾ ಕೇಂದ್ರಕ್ಕೆ ತಂತಿ ಜೋಡಣೆ ಕಾಮಗಾರಿಯ ದಿನಾಂಕ: ೦೮.೦೬.೨೦೨೪ರಂದು ಬೆಳಿಗ್ಗೆ ೧೦.೦೦ ಗಂಟೆಯಿಂದ ಸಾಯಂಕಾಲ ೫.೦೦ ಗಂಟೆವರೆಗೆ ಕೈಗೊಳ್ಳುವುದರಿಂದ ಸದರಿ ದಿನದಂದು ೧೧೦ ಕೆ.ವಿ ಉಪಕೇಂದ್ರ ತಾಳಿಕೋಟಿ ಉಪಕೇಂದ್ರದಿಂದ ಹೊರಹೋಗುವ ಎಲ್ಲಾ ೧೧ಕೆ.ವಿ ನಿರಂತರ ಜ್ಯೋತಿ ಮಾರ್ಗಗಳು, ನೀರು ಸರಬರಾಜು ಮಾರ್ಗಗಳು, ಕೃಷಿ ನೀರಾವರಿ ಮಾರ್ಗಗಳು ಹಾಗೂ ಗ್ರಾಮಗಳಿಗೆ ವಿದ್ಯುತ್ ಸರಬರಾಜು ಇರುವುದಿಲ್ಲ. ಗ್ರಾಹಕರು ಸಹಕರಿಸುವಂತೆ ಬಸವನಬಾಗೇವಾಡಿ ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರು ಕೋರಿದ್ದಾರೆ.

Read More

ವಿಜಯಪುರ: ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಮುಳವಾಡ ಮಧ್ಯಂತರ ಪಂಪಿನ ಮನೆಯಿಂದ ಜಲನಗರ ಪಂಪಿನ ಮನೆಯವರೆಗೆ ಅಳವಡಿಸಿರುವ ಮುಖ್ಯ ಏರು ಕೊಳವೆ ಮಾರ್ಗವು ಬರ್ಸ್ಟ ಆಗಿದ್ದು, ಜಲಮಂಡಳಿಯಿಂದ ತುರ್ತು ದುರಸ್ತಿ ಕಾಮಗಾರಿ ಕೈಗೊಳ್ಳಲಾಗುತ್ತಿರುವುದರಿಂದ ಜೂ.೬ ಮತ್ತು ೭ ರಂದು ಎರಡು ದಿವಸಗಳು ವಿಜಯಪುರ ನಗರಕ್ಕೆ ಕೊಲ್ಹಾರ ಶುದ್ಧ ಕುಡಿಯುವ ನೀರಿನ ಘಟಕದಿಂದ ನೀರು ಸರಬರಾಜುವ ಪ್ರದೇಶಗಳಿಗೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಜಲಮಂಡಳಿಯೊಂದಿಗೆ ಸಹಕರಿಸುವಂತೆ ಜಲಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ವಿಜಯಪುರ: ಜಿಲ್ಲಾ ಕೃಷಿ ತರಬೇತಿ ಕೇಂದ್ರದ ವತಿಯಿಂದ ಜಿಲ್ಲೆಯ ರೈತ-ರೈತ ಮಹಿಳೆಯರಿಗೆ ಜೂ.೧೧ ರಂದು ವಿಜಯಪುರದ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ವಿವಿಧ ಬೆಳೆಗಳಲ್ಲಿ ಬೀಜೋಪಚಾರ ಮಹತ್ವ ಹಾಗೂ ವಿಧಾನಗಳ ಕುರಿತು ಉಚಿತ ತರಬೇತಿ ಆಯೋಜಿಸಲಾಗಿದೆ.ಆಸಕ್ತ ರೈತರು ತರಬೇತಿಯಲ್ಲಿ ಭಾಗವಹಿಸಿ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಉಪ ಕೃಷಿ ನಿರ್ದೇಶಕರು ಕೋರಿದ್ದಾರೆ. ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಹಾಗೂ ನೊಂದಣಿಗಾಗಿ ಕೃಷಿ ಅಧಿಕಾರಿ ಶ್ರೀಮತಿ ಫಾತಿಮಾ ಬಾನು ಸುತಾರ್ ಮೊ: ೯೮೮೬೧೩೪೩೧೦ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Read More

ವಿಜಯಪುರ: ಕೆಪಿಟಿಸಿಎಲ್ ವತಿಯಿಂದ ೧೧೦ಕೆವ್ಹಿ ಬೇಗಳ ಮೊದಲನೇ ತ್ರೈಮಾಸಿಕ ನಿರ್ವಹಣಾ ಕಾರ್ಯವನ್ನು ಜೂ.೭ರಂದು ಕೈಗೊಳ್ಳುವುದರಿಂದ ಅಂದು ೧೧೦/೧೧ ಕೆವ್ಹಿ ವಿವಿ ಕೇಂದ್ರ ತೊರವಿದಿಂದ ಹೊರಹೋಗುವ ಎಲ್ಲ ೧೧ ಕೆವ್ಹಿ ವಿದ್ಯುತ್ ಮಾರ್ಗಗಳಿಗೆ ಹಾಗೂ ೧೧೦/೧೧ ಕೆವ್ಹಿ ಟಕ್ಕಳಕಿ-ಕನಮಡಿ ಮಾರ್ಗದ ವಿದ್ಯುತ್ ವಾಹಕ ಎಳೆಯುವ ಕಾಮಗಾರಿ ಕೈಗೊಳ್ಳುವುದರಿಂದ ಬೆಳಿಗ್ಗೆ ೧೦ ರಿಂದ ೪ ಗಂಟೆಯವರೆಗೆ ೧೧೦/೧೧ ಕೆವ್ಹಿ ಟಕ್ಕಳಕಿ ಉಪ ಕೇಂದ್ರದಿಂದ ಹೊರಹೋಗುವ ಎಲ್ಲ ೧೧ ಕೆವ್ಹಿ ವಿದ್ಯುತ್ ಮಾರ್ಗಗಳಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ವಿಜಯಪುರ ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ಕೋರಿದ್ದಾರೆ.

Read More

ವಿಜಯಪುರ: ಪ್ರಜಾಪ್ರಭುತ್ವದಲ್ಲಿ ಜನರ ತೀರ್ಮಾನವೇ ಅಂತಿಮವಾಗಿದ್ದು ಅದನ್ನು ಎಲ್ಲರೂ ಗೌರವಿಸಲೇಬೇಕು. ಕಳೆದ ಲೋಕಸಭಾ ಚುನಾವಣೆಗೆ ಹೋಲಿಸಿದರೆ, ಈ ಬಾರಿ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅತ್ಯುತ್ತಮ ಸಾಧನೆ ತೋರಿದೆಯಾದರೂ ನಿರೀಕ್ಷಿತ ಫಲಿತಾಂಶ ಬಾರದಿರುವುದಕ್ಕೆ ಬೇಸರವಾಗಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿಯ ಮುಖ್ಯ ವಕ್ತಾರ ಸಂಗಮೇಶ ಬಬಲೇಶ್ವರ ಹೇಳಿದ್ದಾರೆ.ಈ ಕುರಿತು ಪತ್ರಿಕೆಗೆ ಪ್ರತಿಕ್ರಿಯಿಸಿದ ಅವರು, ರಾಜು ಆಲಗೂರವರ ಸೋಲನ್ನು ನಿರೀಕ್ಷಿಸಿರಲಿಲ್ಲ. ಆದರೆ ಅವರಿಗೆ ಗಣನೀಯ ಪ್ರಮಾಣದಲ್ಲಿ ಮತದಾನ ಮಾಡಿದ, ಮತದಾರರಿಗೆ ಪಕ್ಷದ ಪರವಾಗಿ ನಾನು ತುಂಬು ಹೃದಯದ ಕೃತಜ್ಞತೆಗಳನ್ನು ಸಮರ್ಪಿಸುತ್ತೇನೆ. ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಸೋತಿರಬಹುದು, ಆದರೆ ಅವರು ಸದಾ ಜನರೊಂದಿಗೆ ಬೆಳೆದು ಬಂದವರು, ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಮ್ ಬಿ ಪಾಟೀಲರ ಹಾಗೂ ಜಿಲ್ಲೆಯ ಶಾಸಕರು ಪಕ್ಷದ ಮುಖಂಡರ ಜೊತೆಗೂಡಿ ಮತ್ತೆ ಜನರ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತೇವೆ. ಇಂಡಿಯಾ ಮೈತ್ರಿಕೂಟ ದೇಶದಲ್ಲಿ ಗಣನೀಯ ಪ್ರಮಾಣದಲ್ಲಿ ಚೇತರಿಸಿಕೊಂಡಿರುವುದು ಭಾರತದ ಜನತೆ ಬದಲಾವಣೆಯನ್ನು ಬಯಸುತ್ತಿದ್ದಾರೆ ಎನ್ನುವುದರ ಪ್ರಬಲ ಮುನ್ಸೂಚನೆಯಾಗಿದೆ. ಹಾಗಾಗಿ ನಮ್ಮ ಕಾರ್ಯಕರ್ತರು ಧೃತಿಗೆಡುವ ಅಗತ್ಯವಿಲ್ಲ.…

Read More

ವಿಜಯಪುರ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನನ್ನ ಗಿಡ ನನ್ನ ಭೂಮಿ ತಂಡ ಹಾಗೂ ವಿವಿಧ ಪರಿಸರ ಸಂಘಟನೆಗಳ ಸಹಯೋಗದೊಂದಿಗೆ ಜ್ಞಾನ ಯೋಗಾಶ್ರಮದ ಮಾರ್ಗದರ್ಶನದಲ್ಲಿ ಈ ನಾಡಿನ ಶ್ರೇಷ್ಠ ಸಂತ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ನಡೆದಾಡಿದ ಸ್ಥಳವಾದ ಬರಟಗೇರಿ ರಸ್ತೆಯ ಪೂನಮ್ ನಗರದಲ್ಲಿ ಏಕಕಾಲಕ್ಕೆ 200 ಕ್ಕೂ ಹೆಚ್ಚು ಗಿಡಗಳನ್ನುಹಚ್ಚುವುದರ ಮೂಲಕ ಪರಿಸರ ಜಾಗೃತಿ ಮೂಡಿಸಲಾಯಿತು.ಜ್ಞಾನ ಯೋಗ ಆಶ್ರಮದ ಪೂಜ್ಯಶ್ರೀ ಬಸವಲಿಂಗ ಸ್ವಾಮಿಗಳು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಪರಿಸರ ಉಳಿದರೆ ಮಾತ್ರ ಮನುಕುಲದ ಉಳಿವು, ಅದಕ್ಕಾಗಿ ಪರಿಸರ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ ಎಂದು ತಿಳಿಸಿದರು, ದಿವ್ಯ ಸಾನಿಧ್ಯವನ್ನು ವಹಿಸಿದ ಈಶಪ್ರಸಾದ ಮಹಾಸ್ವಾಮಿಗಳು ಗುರುದೇವಶ್ರಮ ಅಥರ್ಗಾ ಅವರು ಮಾತನಾಡಿ, ಜಾಗತಿಕ ತಾಪಮಾನವನ್ನು ಪ್ರಕೃತಿ ನಮಗೆ ಕೊಡುವ ಎಚ್ಚರಿಕೆಯ ಗಂಟೆಯನ್ನಾಗಿ ತಿಳಿದುಕೊಂಡು ಗಿಡಗಳನ್ನು ನೆಟ್ಟು ಬೆಳೆಸುವುದೊಂದೇ ಅದಕ್ಕಿರುವ ಪರಿಹಾರ, ಈ ಪವಿತ್ರ ಕಾರ್ಯವನ್ನು ಮಾಡುತ್ತಿರುವ ನನ್ನ ಗಿಡ ನನ್ನ ಭೂಮಿ ತಂಡದ ಕೆಲಸವನ್ನು ಶ್ಲಾಘಿಸಿದರುಪ್ರಸ್ತಾವಿಕವಾಗಿ ನನ್ನ ಗಿಡ ನನ್ನ ಭೂಮಿ ತಂಡದ ಸಂಚಾಲಕ ಬಸವರಾಜ…

Read More

ವಿಜಯಪುರ: ಬಾದ್ಮಿ ಅಮಾವಾಸ್ಯೆ ನಿಮಿತ್ತ ಗುರುವಾರ ನಾಗಠಾಣದಲ್ಲಿ ಸಡಗರ ಸಂಭ್ರಮದಿಂದ ಚೌಡೇಶ್ವರಿ ದೇವಿಯ ಜಾತ್ರೆ ನೆರವೇರಿತು. ಜಾತ್ರೆಯ ಆರಂಭಕ್ಕೂ ಮುಂಚೆ ಮಹಿಳೆಯರು ಅಂಬಲಿ ಬಿಂದಿಗೆ ಹೊತ್ತು, ಬಾಸಿಂಗ, ಕಳಸದ ಮೆರವಣಿಗೆಯ ಜೊತೆಗೆ ಗುಡಿ ತಲುಪಿ, ಅಂಬಲಿ ಅರ್ಪಿಸಿದರು. ಅಪಾರ ಸಂಖ್ಯೆಯ ಭಕ್ತರು,ವಾದ್ಯ ಮೇಳದೊಂದಿಗೆ ದೇವಿಯ ಮುಖವಾಡ ಹೊತ್ತವರು ಇಡೀ ಗ್ರಾಮದ ಭಕ್ತರ ಮನೆ ಮನೆಗೆ ಭೇಟಿ ನೀಡಿ, ಕಾಯಿ-ಕರ್ಪೂರದೊಂದಿಗೆ ನೈವೇದ್ಯ ಸ್ವೀಕರಿಸಿ, ಉಡಿ ತುಂಬಿಕೊಂಡು ಆಶೀರ್ವದಿಸುವ ದೃಶ್ಯ ವಿಶೇಷವಾಗಿತ್ತು.ಚೌಡೇಶ್ವರಿಯು ಅತ್ಯಂತ ಶಕ್ತಿಶಾಲಿ ದೇವತೆಗಳಲ್ಲಿ ಒಬ್ಬಳಾಗಿದ್ದು, ಈಕೆಯ ಬಳಿ ಏನೇ ಬೇಡಿಕೊಂಡರೂ ಅದು ಈಡೇರುತ್ತದೆ ಎನ್ನುವ ನಂಬಿಕೆ ನಾಗಠಾಣ ಗ್ರಾಮದ ಭಕ್ತರಲ್ಲಿ ಈಗಲೂ ಜನಜನಿತವಾಗಿದೆ.ಕುಂಬಾರ ಮನೆತನದ ಮಹಿಳೆಯರು ಬಜಾರಕ್ಕೆ ಕಿಚಡಿ ತರುವರು.ಅಲ್ಲಿ ಔಡಲ ಕಟ್ಟಿಗೆಯ ಹಂದರದಲ್ಲಿ ಮಜ್ಜಿಗೆ ಕಡಿಯುವಳು. ಅಲ್ಲಿಂದ ನೇರವಾಗಿ ತನ್ನ ಗುಡಿಗೆ ಬಂದು ತಲುಪುವಳು.ಕುಂಬಾರ ಮನೆತನದ ಭೀಮರಾಯ, ಅಮೋಘಸಿದ್ದ, ಪವಾಡೇಶ, ಶಿವಾನಂದ, ಅಮೋಘಸಿದ್ದ, ಮಲ್ಲು, ಶರಣು,ಸೋಮನಿಂಗ, ಶ್ರೀಶೈಲ, ಸಿದ್ದು, ಪುಂಡಲೀಕ, ವಿಠಲ,ಬಾಬು,ಮಹಾಂತೇಶ ನರಸಪ್ಪ, ಹನಮಂತ, ಬಸವರಾಜ, ಪಿಂಟು, ಗಿರಮಲ್ಲ, ಚವಡಪ್ಪ,…

Read More

-ಸಂತೋಷ್ ರಾವ್ ಪೆರ್ಮುಡಪೆರ್ಮುಡ ಮನೆ, ಪಟ್ರಮೆ ಗ್ರಾಮ ಅಂಚೆ ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ ಆಗಷ್ಟೇ ಅಗಾಧ ಪರಿಣಾಮವುಂಟು ಮಾಡಿದ್ದ ಮಹಾಭಾರತ ಯುದ್ಧವು ಮುಗಿದಿತ್ತು. ಹದಿನೆಂಟು ದಿನಗಳ ಕಾಲ ನಡೆದ ಈ ಯುದ್ಧದ ಪರಿಣಾಮವು ದ್ರೌಪದಿಯನ್ನು ಆಕೆಯ ಎಂಭತ್ತನೆಯ ವಯಸ್ಸಿನಲ್ಲೂ ಮಾನಸಿಕವಾಗಿ ಮತ್ತು ದೈಹಿಕವಾಗಿ ಜರ್ಜರಿತಗೊಳಿಸತ್ತು. ಊರಿನ ಎಲ್ಲೆಡೆ ವಿಧವೆಯರು, ಕೈ ಕಾಲು ಕಳೆದುಕೊಂಡು ಅಂಗವೈಕಲ್ಯಗೊಂಡ ಪುರುಷರು, ಅನಾಥ ಮಕ್ಕಳು ಓಡಾಡುತ್ತಿದ್ದರು. ನಂದನವನದಂತಿದ್ದ ಹಸ್ತಿನಾಪುರವು ಸಂಪೂರ್ಣ ಸ್ಮಶಾನ ಮೌನಕ್ಕೀಡಾಗಿತ್ತು. ಹಸ್ತಿನಾಪುರದ ರಾಣಿಯಾದ ದ್ರೌಪದಿಯು ಶೂನ್ಯಮನಸ್ಕಳಾಗಿ ಗೋಡೆಯನ್ನು ನೋಡುತ್ತಾ ಕುಳಿತಿದ್ದಳು. ಆಗ ಶ್ರೀಕೃಷ್ಣನು ಅಲ್ಲಿಗೆ ಬಂದಾಗ ದ್ರೌಪದಿಯು ಓಡೋಡಿ ಬಂದು ಕೃಷ್ಣನನ್ನು ತಬ್ಬಿಕೊಂಡು ಅಳತೊಡಗಿದಳು. ಕೃಷ್ಣ ದ್ರೌಪದಿಯ ತಲೆಯನ್ನು ನೇವರಿಸಿ, ಸಮಾಧಾನ ಮಾಡತೊಡಗಿದ. ಆಗ ಕಣ್ಣೀರಿಡುತ್ತಾ ದ್ರೌಪದಿಯು ಕೃಷ್ಣಾ ಏನಿದೆಲ್ಲ? ಹೀಗೆಲ್ಲ ಆಗುತ್ತದೆಯೆಂದು ನಾನಂದುಕೊಂಡೇ ಇರಲಿಲ್ಲ ಎಂದಳು.ಆಗ ಕೃಷ್ಣನು ದ್ರೌಪದೀ, ಕರ್ತವ್ಯ ಮತ್ತು ನಿಯತ್ತು ಎಂಬುವುದು ಅತ್ಯಂತ ಕ್ರೂರಿಗಳು, ಅವುಗಳು ನಾವಂದುಕೊಂಡಂತೆ ಇರುವುದಿಲ್ಲ. ನಾವು ಮಾಡುವ ಪ್ರತಿಯೊಂದು ಕರ್ಮಗಳನ್ನು ಅವುಗಳ ಪರಿಣಾಮಗಳಲ್ಲಿ ಬದಲಾಯಿಸಿಬಿಡುತ್ತವೆ.…

Read More

ಮುದ್ದೇಬಿಹಾಳ: ಪಟ್ಟಣದ ಜ್ಞಾನ ಭಾರತಿ ವಿದ್ಯಾ ಮಂದಿರ ಪ್ರೌಢ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಜರುಗಿತು.ಮುಖ್ಯೋಪಾದ್ಯಾಯ ರಾಮಚಂದ್ರ ಹೆಗಡೆ, ಸಂಸ್ಥೆಯ ನಿರ್ದೇಶಕಿಯರುಗಳಾದ ಲೀಲಾ ಭಟ್ಟ ಮತ್ತು ಶಾಂತಾ ಭಟ್ಟ, ಆಂಗ್ಲ ಮಾಧ್ಯಮ ಮುಖ್ಯ ಗುರುಮಾತೆ ರಂಜಿತಾ ಹೆಗಡೆ, ಪ್ರಾಥಮಿಕ ಮುಖ್ಯ ಗುರುಮಾತೆ ಸರಸ್ವತಿ ಮಡಿವಾಳರ, ಶಿಕ್ಷಕರಾದ ಬಿ.ಟಿ.ಭಜಂತ್ರಿ, ಬಿ.ಆರ್.ಬೆಳ್ಳಿಕಟ್ಟಿ, ಶಿವಶಂಕರಯ್ಯ ಹಿರೇಮಠ, ಲೋಹಿತ ಜೈನಾಪೂರ ಸೇರಿದಂತೆ ಇತರರು ಹಾಜರಿದ್ದರು.ಪೊಲೀಸ್ ಠಾಣೆಯಲ್ಲಿ ಪರಿಸರ ದಿನಾಚರಣೆಮುದ್ದೇಬಿಹಾಳ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪರಿಸರ ದಿನಾಚರಣೆ ನಿಮಿತ್ಯ ಗಿಡಗಳನ್ನು ನೆಡಲಾಯಿತು.ಪಿಎಸ್‌ಐ ಸಂಜೀವ ತಿಪರೆಡ್ಡಿ, ಕ್ರೈಂ ಪಿಎಸ್‌ಐ ಎಸ್.ಆರ್.ನಾಯಕ, ಸಿಬ್ಬಂದಿಗಳಾದ ಆರ್.ಎಸ್.ಪಾಟೀಲ, ಸಲೀಂ ಹತ್ತರಕಿಹಾಳ, ಎಂ.ಎ.ಬೋಳರೆಡ್ಡಿ, ಎಂ.ಬಿ.ಮುಳವಾಡ ಇದ್ದರು.ಬಾಲಾಜಿ ಶುಗರ್ಸ್ ಪ್ರೈ.ಲಿಯಲ್ಲಿ ವಿಶ್ವ ಪರಿಸರ ದಿನಮುದ್ದೇಬಿಹಾಳ: ತಾಲೂಕಿನ ಯರಗಲ್ಲ ಗ್ರಾಮದ ಬಾಲಾಜಿ ಶುಗರ್ಶ ಪ್ರೈ.ಲಿ ಕಂಪನಿಯಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.ಈ ವೇಳೆ ಅಧ್ಯಕ್ಷ ಎಚ್.ಎಸ್.ಪಾಟೀಲ, ನಿರ್ದೇಶಕರುಗಳಾದ ಎಚ್.ಎಲ್.ಪಾಟೀಲ, ಡಾ.ಅಜೀತ ಕನಕರೆಡ್ಡಿ, ರಾಹುಲ ಪಾಟೀಲ, ಶ್ರೀನಿವಾಸ ಅರಕೇರಿ, ಅಧಿಕ ಪಾಟೀಲ, ಪ್ರಜ್ವಲ ಪಾಟೀಲ ಸಿಬ್ಬಂದಿಗಳಾದ ಎಸ್.ಐನಾಪೂರ, ಬಸವರಾಜ…

Read More