ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕಲಬುರ್ಗಿ ಜಿಲ್ಲೆಯ ವಾಣಿಜ್ಯ ತೆರಿಗೆ ಇಲಾಖೆಯ ಉಪ ಅಯುಕ್ತರಾಗಿರುವ ಬಿ ಜಿ ಚಿಮ್ಮಲಗಿ ಇವರಿಗೆ ಅಮ್ಮ ಫೌಂಡೇಶನ್ ವತಿಯಿಂದ ಕೊಡುವ “ರಾಜ್ಯಮಟ್ಟದ ಸಿರಿಗನ್ನಡ ಸಾಧಕ” ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ನವೆಂಬರ್ 22ರಂದು ವಿಜಯಪುರದ ಗಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ನಡೆಯುವ “ರಾಜ್ಯಮಟ್ಟದ ಸಿರಿಗನ್ನಡ ಸಂಭ್ರಮ 2026” ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಕನ್ನಡ ನಾಡು-ನುಡಿ, ನೆಲ ಜಲ ಭಾಷೆಗಾಗಿ ಹಲವಾರು ವರ್ಷಗಳಿಂದ ಸಮಾಜಮುಖಿ ಕಾರ್ಯನಿರ್ವಹಿಸುವುದರ ಜೊತೆಗೆ ಉತ್ತಮ ಸೈಕ್ಲಿಂಗ್ ಪಟುವಾಗಿದ್ದಾರೆ. ಸಾರ್ವಜನಿಕ ಸೇವೆಯಲ್ಲಿ ಇವರ ಸಾಧನೆ ಗುರುತಿಸಿ ಈ ಪ್ರಶಸ್ತಿ ನೀಡಿದೆ ಎಂದು ಅಮ್ಮ ಫೌಂಡೇಶನ್ ಗೌರವಾಧ್ಯಕ್ಷ ಯುಐ ಶೇಖ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

