ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ನಗರದ ಬಸವೇಶ್ವರ ಸರ್ಕಲ್ ಹತ್ತಿರ ಗೋಕಾಕ ಚಳವಳಿಯ ರೂವಾರಿ ಶ್ರೀ ರೇ.ಚ. ರೇವಡಿಗಾರ ಪ್ರತಿಷ್ಠಾನ ಹಾಗೂ ೩೭೧(ಜೆ) ಹೋರಾಟ ಸಮಿತಿ ನೇತೃತ್ವದಲ್ಲಿ ೪೯ ದಿನಗಳಿಂದ ನಡೆಯುತ್ತಿರುವ ಧರಣಿ ಸತ್ಯಾಗ್ರಹಕ್ಕೆ ಮಹಿಳಾ ಜಾಗರಣಾ ವೇದಿಕೆ ಹಾಗೂ ಕರ್ನಾಟಕ ಮಹಿಳಾ ಪರ ಜನ ಜಾಗೃತಿ ಸಮಿತಿ ಪದಾಧಿಕಾರಿಗಳು ಬೆಂಬಲ ವ್ಯಕ್ತಪಡಿಸಿದರು.
ಕರ್ನಾಟಕ ಮಹಿಳಾ ಪರ ಜನ ಜಾಗೃತಿ ಸಮಿತಿ ಜಿಲ್ಲಾಧ್ಯಕ್ಷೆ ನೀಲಮ್ಮ ಯಡ್ರಾಮಿ, ಮಾತನಾಡಿ, ವಿಜಯಪುರ ಜಿಲ್ಲೆಯು ಶೈಕ್ಷಣಿಕ, ಆರ್ಥಿಕ, ಔದ್ಯೋಗಿಕವಾಗಿ ಹಿಂದುಳಿದಿದೆ ಎಲ್ಲ ಅಂಶಗಳು ಡಾ. ನಂಜುಂಡಪ್ಪ ವರದಿಯಲ್ಲಿ ಉಲ್ಲೇಖವಿದೆ ಅಲ್ಲದೆ ಕಲ್ಯಾಣ ಕರ್ನಾಟಕದ ೬ ಜಿಲ್ಲೆಗಳಲ್ಲಿ ಕೈಗಾರಿಕಾ ಘಟಕಗಳು ಸ್ಥಾಪನೆಯಾಗಿ ಅಲ್ಲಿರುವ ಜನರಿಗೆ ಉದ್ಯೋಗ ಸೃಷ್ಠಿಸಿದೆ ಅದೇ ರೀತಿಯಲ್ಲಿ ಈ ಜಿಲ್ಲೆಯನ್ನು ೩೭೧ ಜೆಗೆ ಸೇರ್ಪಡೆ ಮಾಡಿದರೆ ಇಲ್ಲಿರುವ ಮಕ್ಕಳ ಬಾಳು ಬೆಳಗಿದಂತಾಗುತ್ತದೆ. ನಾವೇನು ಸಮ್ಮನೆ ಕೇಳುತ್ತಿಲ್ಲ ಆ ವರದಿಯಲ್ಲಿದೆ ಎನ್ನುವ ಕಾರಣಕ್ಕೆ ಧ್ವನಿ ಎತ್ತಿದ್ದೇವೆ ಆ ವರದಿ ತಪ್ಪಾಗಿದ್ದರೆ ಎಲ್ಲವನ್ನು ರದ್ದುಗೊಳಿಸಿ ಪುನರ್ ಪರಿಶೀಲನೆ ಮಾಡಿ ಈ ಬಾಗಕ್ಕೂ ಸೌಲಭ್ಯ ಒದಗಿಸಿಕೊಡುವಲ್ಲಿ ಡಿ.೨ ರಂದು ನಡೆಯಲಿರುವ ಚಳಿಗಾಲ ಅಧಿವೇಶನದಲ್ಲಿ ಈ ವಿಷಯದ ಕುರಿತು ಚರ್ಚೆ ನಡೆಬೇಕು ಎಂದು ಒತ್ತಾಯಿಸಿದರು.
ಮಹಿಳಾ ಜಾಗರಣಾ ವೇದಿಕೆಯ ಶೈಲಜಾ ಸ್ಥಾವರಮಠ ಮಾತನಾಡಿ, ರಜಾಕರ ಹಾವಳಿಯಲ್ಲಿ ನಗರದ ಪ್ರದೇಶದ ಗೋಲಿಬಾರ ಮಡ್ಡಿ, ಕಕ್ಕಳಮೇಲಿ, ಮಾಡಬಾಳ, ಚಟ್ಟರಕಿ, ಸೇರಿದಂತೆ ತಾಲೂಕಿನ ಕೆಲವು ಕಡೆಗಳಲ್ಲಿ ರಜಾರಕರ ಧಂಗೆಯಲ್ಲಿ ಶರಣಗೌಡ ಸರ್ಇನಾಮದಾರ, ಸಿದ್ದಗೊಂಡಪ್ಪ ಪಾಟೀಲ ಸೇರಿದಂತೆ ಅನೇಕರು ಹೋರಾಟ ನಡೆಸಿರುವ ಬಗ್ಗೆ ದಾಖಲೆಗಳಿವೆ ಅದರ ಮರುಪರಿಶೀಲನೆ ನಡೆಸುವುದು ಮಹಿಳೆಯರ ಹಕ್ಕೋತ್ತಾಯವಾಗಿದೆ ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಹಿಳಾ ಜಾಗ್ರಣ ವೇದಿಕೆ ಹಾಗೂ ಕರ್ನಾಟಕ ಮಹಿಳಾ ಪರ ಜನ ಜಾಗೃತಿ ಸಮಿತಿಯ ಜಿಲ್ಲಾಧ್ಯಕ್ಷ ನೀಲಮ್ಮ ಯಡ್ರಾಮಿ, ಮಹಿಳಾ ಜಾಗೃಣ ವೇದಿಕೆಯ ಶೈಲಜಾ ಸ್ತಾವರಮಠ, ಅರುಣಾ ಹಿರೇಮಠ, ಲಕ್ಷೀಬಾಯಿ ಕುರಿ, ಭಾಗ್ಯಶ್ರೀ ತಳವಾರ, ಲಕ್ಕಮ್ಮ ಬಿರಾದಾರ, ಭಾಗ್ಯಶ್ರೀ ಯಾಳವಾರ, ಜಯಶ್ರೀ ಯಾಳವಾರ, ಅಂಬಿಕಾ ಹೊರಕೇರಿ, ಬಾಗು ಮಣ್ಣೂರ, ಸಮಿತ್ರಾ ಹಡಪದ, ಶರಣಮ್ಮ ಬಿಳೆಬಾವಿ, ಗೌಶಿಯಾ ಶೇಖ, ಭಾರತಿ ಗುತ್ತರಗಿ, ಶಿವಮ್ಮ ಬೆಟಗೇರಿ, ಶೃತಿ ಗೂಳೂರ. ಶಾರದಾ ಸಂಗಮ, ಭಾರತಿ ಹಿರೇಮಠ, ಜಗದೇವಿ ಕಲಬುರ್ಗಿ, ಸವಿತಾ ಗಾನೂರ, ಸಾವಿತ್ರಿ ಬಂದರಕೋಟಗಿ ಸೇರಿದಂತೆ ಸಮಿತಿಯ ಶಂಕರ ಮಲ್ಲೇದ, ಪಂಡಿತ ಯಂಪೂರೆ, ಸಂಗಪ್ಪ ಬ್ಯಾಕೋಡ ಇದ್ದರು.

