ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಅವರು, 2026-27ನೇ ಸಾಲಿನ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಸಮುದಾಯ ಭವನಗಳ ನಿರ್ಮಾಣ ಕಾಮಗಾರಿಗೆ ರೂ.68 ಲಕ್ಷ ಅನುದಾನ ಮಂಜೂರಿಸಿದ್ದಾರೆ.
ನಗರ ಮತಕ್ಷೇತ್ರದಲ್ಲಿ ಬರುವ ತೊರವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೃಷ್ಣವಿದೇವಿ ಸೇವಾ ಸಮಿತಿಯ ಸಮುದಾಯ ಭವನಕ್ಕೆ ರೂ.10 ಲಕ್ಷ, ಕಂದಾಯ ನೌಕರರ ಬಡಾವಣೆಯ ಜಿಲ್ಲಾ ಕಂದಾಯ ನೌಕರರ ಸಂಘದ ಶ್ರೀ ಆಂಜನೇಯ ದೇವಸ್ಥಾನ ಸಮುದಾಯ ಭವನಕ್ಕೆ ರೂ.10 ಲಕ್ಷ, ವಾರ್ಡ್ ನಂ.5ರ ಆದರ್ಶ ನಗರದ ಬಸವಣ್ಣ ದೇವಸ್ಥಾನದ ಹತ್ತಿರ ಸಮುದಾಯ ಭವನಕ್ಕೆ ರೂ.10 ಲಕ್ಷ, ವಾರ್ಡ್ ನಂ.4ರ ಮಾನಸ ರೆಸಿಡೆನ್ಸಿ ದರ್ಗಾ ರೋಡ ಹಣಮಂತ ದೇವರ ಗುಡಿ ಹತ್ತಿರ ಸಮುದಾಯ ಭವನಕ್ಕೆ ರೂ.10 ಲಕ್ಷ, ತೊರವಿ ಎಲ್.ಟಿ-2ರ ಮರಿಯಮ್ಮ (ಮರಗಮ್ಮ) ದೇವಸ್ಥಾನ ಹತ್ತಿರ ಸಮುದಾಯ ಭವನಕ್ಕೆ ರೂ.5 ಲಕ್ಷ, ವಾರ್ಡ್ ನಂ.32 ಜೋರಾಪುರ ಪೇಠ ಗೊಂಧಳಿ ಗಲ್ಲಿಯ ಭೋವಿ ಸಮಾಜದ ಕಲ್ಯಾಣ ಸಂಘದ ಸಮುದಾಯ ಭವನ ನಿರ್ಮಾಣಕ್ಕೆ ರೂ.9 ಲಕ್ಷ ವಾರ್ಡ್ ನಂ.2ರ ದರ್ಗಾದ ಖಂಜರಭಾಟ ಓಣಿಯ ಲಕ್ಷ್ಮೀ ಗುಡಿ ಹತ್ತಿರ ಸಮುದಾಯ ಭವನ ನಿರ್ಮಾಣಕ್ಕೆ ರೂ.14 ಲಕ್ಷ ಅನುದಾನ ಸೇರಿ ಒಟ್ಟು ರೂ.68 ಲಕ್ಷ ಅನುದಾನ ಮಂಜೂರಿಸಿದ್ದಾರೆ ಎಂದು ನಗರ ಶಾಸಕರ ಸಾರ್ವಜನಿಕ ಸಂಪರ್ಕ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.

