ಉದಯರಶ್ಮಿ ದಿನಪತ್ರಿಕೆ
ಅಥಣಿ: ನಗರದ ಖೋತ ಸಭಾ ಭವನದಲ್ಲಿ ಭಾನುವಾರ ದಿ 11.10.2026 ರಂದು ಬೆಳಗ್ಗೆ 11 ಗಂಟೆಗೆ ಶ್ರೀಮತಿ ಸಾಂಯವ್ವ ಶ್ರೀಕಾಂತ ಫೌಂಡೇಶನ್ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಫೌಂಡೇಶನ್ ಅಧ್ಯಕ್ಷ ರವಿ ಕಾಂಬಳೆ ತಿಳಿಸಿದ್ದಾರೆ.
ಅವರು ಪಟ್ಟಣದ ಡಿಎಸ್ಎಸ್ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ಮಾಹಿತಿ ನೀಡಿದರು.
ಈ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಸಹಕಾರ ಸಚಿವರು ಹಾಗೂ ಶಾಸಕ ಲಕ್ಷ್ಮಣ ಸವದಿ ಹಾಗೂ ಹುಬ್ಬಳ್ಳಿ ವಾ.ಕ.ಸಾ.ಸಂ. ಅಧ್ಯಕ್ಷರು ಮತ್ತು ಕಾಗವಾಡ ಶಾಸಕರಾದ ರಾಜು ಕಾಗೆ ಜ್ಯೋತಿ ಬೆಳಗಿಸುವವರು ಹುಬ್ಬಳ್ಳಿ ವಲಯದ ಆಂತರಿಕ ಭದ್ರತಾ ವಿಭಾಗ ಪೊಲೀಸ್ ಅಧೀಕ್ಷಕರಾದ ರವೀಂದ್ರ ಗಡಾದಿ ಹಾಗೂ ಕರ್ನಾಟಕ ಮಹಾರಾಷ್ಟ್ರದ ಹೆಸರಾಂತ ಉದ್ಯಮಿಗಳು, ಧಮ್ಮ ಭೂಮಿ ಗೂಗವಾಡ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಸಿ.ಆರ್. ಸಾಂಗ್ಲಿಕರ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಬೆಳಗಾವಿ ಜಿಲ್ಲಾ ಸಂಘಟನಾ ಸಂಚಾಲಕರಾದ ಸಂಜಯ ತಳವಲಕರ ವಹಿಸುವರು
ಮುಖ್ಯ ಅತಿಥಿಗಳಾಗಿ ಮಾಜಿ ಸಚಿವರಾದ ಶ್ರೀಮಂತ ಪಾಟೀಲ ಹಾಗೂ ಮಾಜಿ ಶಾಸಕರಾದ ಮಹೇಶ ಕುಮಠಳ್ಳಿ ವಿಶೇಷ ಆಹ್ವಾನಿತರಾಗಿ ಪದ್ಮಶ್ರೀ ಪುರಸ್ಕೃತರಾದ ಡಾ. ಸೀತವ್ವ ಜೋಡಟ್ಟಿ ಅಥಣಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ದತ್ತಾ ವಾಸ್ಟರ್ ಹಿರಿಯ ನ್ಯಾಯವಾದಿ ಕೆ.ಎನ್. ವನಜೋಳ ಮಕ್ಕಳ ತಜ್ಞರಾದ ಡಾ. ಆನಂದ ಗುಂಜಿಗಾವಿ ರಾವಸಾಬ ಐಹೊಳೆ ಕಾಂಗ್ರೆಸ್ ಮುಖಂಡರಾದ ರಮೇಶ ಶಿಂದಗಿ ಹಲ್ಯಾಳ ಸಕ್ಕರೆ ಕಾರ್ಖಾನೆ ಸದಸ್ಯರಾದ ಘುಳಪ್ಪ ಜತ್ತಿ ಕೆಎಂಸಿ ಆಸ್ಪತ್ರೆಯ ವೈದ್ಯರಾದ ಡಾ. ಕವಿತಾ ಕೊಟ್ರೆ ಡಾ. ಸದಾಶಿವ ಭಜಂತ್ರಿ ಹಾಗೂ ಕೋಮಲ ಕಾಂಬಳೆ ಅವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಕುಮಾರ ಬನಸೋಡೆ ಪಾಂಡು ಕಾಂಬಳೆ ದತ್ತು ಕಾಂಬಳೆ ನಿಜಾಮ್ ಮುಲ್ಲಾ ಚಂದು ಬನಸೋಡೆ ರಮೇಶ ತಳಕೇರಿ ಭೀರಪ್ಪ ಕಾಂಬಳೆ ಕಿರಣ ಕಾಂಬಳೆ ಅಮರ ಕಾಂಬಳೆ ಮಹಾಂತೇಶ ಬನಸೋಡೆ ನೀಲಕಂಠ ಕಾಂಬಳೆ ಮಹಾದೇವ ಮಾದರ ಲಕ್ಕಪ್ಪ ಕಾಂಬಳೆ ಅಶೋಕ ನಿಡೋಣಿ ಬಾಬು ಕಾಂಬಳೆ ಹಣಮಂತ ಮೇಲಕೇರಿ ಜಿನ್ನಪ್ಪ ದಾನ್ನೊಳ್ಳಿ ಕಾಡಪ್ಪ ಕಾಂಬಳೆ ರಮೇಶ ಕಾಂಬಳೆ ಸೇರಿದಂತೆ ಇನ್ನಿತಿತರು ಉಪಸ್ಥಿತರಿದ್ದರು.

