ಉದಯರಶ್ಮಿ ದಿನಪತ್ರಿಕೆ
ಇಂಡಿ: ಚಿಕ್ಕ ಚಿಕ್ಕ ಬೂದು ಅಥವಾ ಹಳದಿ ಬಣ್ಣದ ತುಕ್ಕು ಹಿಡಿದ ಹಾಗೆ ಚುಕ್ಕೆಗಳು ಎಲೆಯ ಮೇಲೆ ಕಾಣಿಸಿಕೊಳ್ಳುತ್ತವೆ. ಚುಕ್ಕೆಯ ಸುತ್ತಲೂ ಉಂಗುರ ಆಕಾರದ ಹಳದಿ ಬಣ್ಣವನ್ನು ಕಾಣಬಹುದು. ಅತಿ ಹೆಚ್ಚಿನ ಮಳೆ , ಮೋಡ ಕವಿದ ವಾತಾವರಣ, ಇದ್ದರೆ ರೋಗ ಉಲ್ಬಣಗೊಂಡು ಚುಕ್ಕೆಗಳು ಒಂದಕ್ಕೊಂದು ಸೇರಿ ನಂತರ ದೊಡ್ಡ ಗಾತ್ರಕ್ಕೆ ತಿರುಗಿ ಆಕಾರ ಕಳೆದು ಕೊಳ್ಳುವದು . ಕಾಂಡದ ಮೇಲೂ ಸಿಡುಬಿನ ಚಿಕ್ಕ ಚಿಕ್ಕ ದುಂಡಾಕಾರದ ಉಬ್ಬಿದ ಚುಕ್ಕೆಗಳನ್ನು ನೋಡಬಹುದು.ಹಣ್ಣಿನ ಮೇಲೆ ಉಬ್ಬಿದ ಚಿಕ್ಕ ಚಿಕ್ಕ ಸಿಡುಬಿನ ಆಕಾರದ ಚುಕ್ಕೆಗಳನ್ನು ಸಣ್ಣ ಕಾಯಿಯಿಂದ ಹಿಡಿದು ಹಣ್ಣಾಗುವ ವರೆಗೂ ಕಾಣ ಬಹುದು. ಇದರಿಂದ ಮಾರುಕಟ್ಟೆ ದರ ಕಡಿಮೆ ಯಾಗುತ್ತದೆ ಎಂದು ಕೃಷಿ ವಿಜ್ಞಾನ ಕೇಂದ್ರದ ಡಾ. ಹೀನಾ ತಿಳಿಸಿದ್ದಾರೆ.
ಅವರು ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ರೈತರಿಗೆ ಮಾಹಿತಿ ನೀಡುವ ಕುರಿತು ಮಾತನಾಡಿದರು.
ಹತೋಟೆಗೆ ಬ್ಲೆöÊಟಾಕ್ಸ ೩.೦ ಗ್ರಾಂ ಪ್ರತಿ ಲೀಟರಿಗೆ ನೀರಿಗೆ ಬೆರೆಸಿ ಸಿಂಪಡಿಸಬೇಕು. ೨೦ ದಿನದ ನಂತರ ಸ್ಟೆçಪ್ಟೋಮೈಸಿನ್ ಸಲ್ಪೇಟ್ ೦.೫ ಗ್ರಾಂ ಜೀವನಾಶಕದ ಜೊತೆಗೆ ಬ್ಲೆöÊಟಾಕ್ಸ ೩ ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ೨೫-೩೦ ದಿನಗಳ ಅಂತರದಲ್ಲಿ ಮೂರು ಬಾರಿ ಸಿಂಪರಣೆ ಕೈಕೊಳ್ಳಬೇಕು.
ರೋಗದ ಬಾಧೆತೀರ್ವವಾಗಿದ್ದರೆ ಅವಶ್ಯಕತೆಗೆ ಅನುಗುಣವಾಗಿ ಕೆಲವು ದಿನಗಳ ನಂತರ ಮತ್ತೊಮ್ಮೆ ಇದೇ ಸಿಂಪಡಣೆಯನ್ನು ಪುನರಾವರ್ತಿಸಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕೆವಿಕೆ ಮುಖ್ಯಸ್ಥ ಡಾ. ಶಿವಶಣಕರಮೂರ್ತಿ, ಡಾ. ಪ್ರೇಮಚಂದ್ರ ಮತ್ತಿತರಿದ್ದರು.

