Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್: ಅರ್ಜಿ ಆಹ್ವಾನ

ಕಾಲಮಿತಿಯಲ್ಲಿ ಅರ್ಜಿಗಳನ್ನು ವಿಲೇವಾರಿ ಮಾಡಲು ಕ್ರಮ

ಕಾಮಗಾರಿಗಳ ಗುಣಮಟ್ಟ ಕಾಯ್ದುಕೊಳ್ಳುವುದು ಜನರ ಜವಾಬ್ದಾರಿ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ದಾಖಲೆಗಳಿಲ್ಲದೆ ದ್ವಿ.ದ.ಸ ಕರ್ತವ್ಯ ನಿರ್ವಹಣೆಗೆ ಹೊಣೆ ಯಾರು?
(ರಾಜ್ಯ ) ಜಿಲ್ಲೆ

ದಾಖಲೆಗಳಿಲ್ಲದೆ ದ್ವಿ.ದ.ಸ ಕರ್ತವ್ಯ ನಿರ್ವಹಣೆಗೆ ಹೊಣೆ ಯಾರು?

By No Comments3 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ನೇಮಕಾತಿ ಆದೇಶ ಇಲ್ಲ, ಸೇವಾ ಪುಸ್ತಕವೂ ಇಲ್ಲ; ಆದರೂ ಚಡಚಣ ಬಿಇಒ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಸಿಬ್ಬಂದಿ ಕಾರ್ಯನಿರ್ವಹಣೆ!

ಉದಯರಶ್ಮಿ ದಿನಪತ್ರಿಕೆ

ಚಡಚಣ: ಸರ್ಕಾರಿ ನೌಕರರ ಸೇವೆಗೆ ಸಂಬಂಧಿಸಿದ ಪ್ರಮುಖ ದಾಖಲೆಗಳೇ ಕಚೇರಿಯಲ್ಲಿ ಲಭ್ಯವಿಲ್ಲ. ನೇಮಕಾತಿ ಆದೇಶವೂ ಇಲ್ಲ, ಬಡ್ತಿ ಆದೇಶವೂ ಇಲ್ಲ, ಸೇವಾ ಪುಸ್ತಕವೂ ಇಲ್ಲ. 2022ರಿಂದ ಸೇವಾ ಪುಸ್ತಕ ಸಲ್ಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳು ಸೂಚಿಸಿದ್ದರೂ ಇದುವರೆಗೆ ಸಿಬ್ಬಂದಿ ಸಲ್ಲಿಸಿಲ್ಲ. ಕರ್ತವ್ಯಕ್ಕೆ ಹಾಜರಾದ ದಿನದಿಂದ ನಿರ್ವಹಿಸಿದ ಸೇವಾ ಸಂಕಲನದ ದಾಖಲೆಗಳೂ ಲಭ್ಯವಿಲ್ಲ ಎಂದು ತಿಳಿಸಲಾಗಿದೆ. ಇಷ್ಟೇ ಅಲ್ಲ, ಸಿಬ್ಬಂದಿಯ ಸೇವಾ ಪುಸ್ತಕವು ಬಿಇಒ ಕಚೇರಿಯ ಎ1 ವಿಭಾಗದಲ್ಲಿ ಲಭ್ಯವಿಲ್ಲ ಎಂದು ಆದರೂ ಸಂಬಂಧಪಟ್ಟ ಸಿಬ್ಬಂದಿ ಚಡಚಣ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದು ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಲಾದ ಪ್ರಶ್ನೆಗೆ ಶಿಕ್ಷಣ ಇಲಾಖೆಯ ಸಾರ್ವಜನಿಕ ಮಾಹಿತಿ ಅಧಿಕಾರಿ ಎಸ್.ಪಿ.ಮೋಕಾಶಿ ನೀಡಿರುವ ಉತ್ತರದಿಂದ ಬೆಳಕಿಗೆ ಬಂದಿದೆ.
ಚಡಚಣ ಬಿಇಒ ಕಚೇರಿಯಲ್ಲಿ ಸಿಆರ್‌ಟಿ/ದ್ವಿತೀಯ ದರ್ಜೆ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿರುವ ಎಸ್.ಪಿ. ಮುಲ್ಲಾ ಅವರ ನೇಮಕಾತಿ, ಬಡ್ತಿ ಹಾಗೂ ಸೇವಾ ದಾಖಲೆಗಳ ಕುರಿತು ಆರ್‌ಟಿಐ ಕಾರ್ಯಕರ್ತ ಚೇತನ ಶಿವಸಿಂಪಿ ಅವರು ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಕೋರಿದ್ದರು. ಇದಕ್ಕೆ ಸಾರ್ವಜನಿಕ ಮಾಹಿತಿ ಅಧಿಕಾರಿ ನೀಡಿರುವ ಲಿಖಿತ ಉತ್ತರದಲ್ಲಿ ಹಲವು ಮಹತ್ವದ ದಾಖಲೆಗಳು ಕಚೇರಿಯಲ್ಲಿ ಲಭ್ಯವಿಲ್ಲ ಎಂದು ತಿಳಿಸಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ.
“ನೇಮಕಾತಿ ಆದೇಶ ಇಲ್ಲದಿದ್ದರೆ ಸೇವೆಯ ಆಧಾರವೇನು?”
ನೇಮಕಾತಿ ಆದೇಶವೇ ಕಚೇರಿಯಲ್ಲಿ ಲಭ್ಯವಿಲ್ಲ ಎಂದು ಅಧಿಕೃತವಾಗಿ ಉತ್ತರಿಸಿರುವಾಗ, ಸಂಬಂಧಪಟ್ಟ ಸಿಬ್ಬಂದಿ ಯಾವ ಆದೇಶದ ಆಧಾರದ ಮೇಲೆ ಮತ್ತು ಯಾವ ಹುದ್ದೆಗೆ ಅನುಕಂಪದಡಿ ನೇಮಕ ಹೊಂದಿದ್ದರೆ ಮೃತ ವ್ಯಕ್ತಿ ಅನುದಾನಿತ ಅಥವಾ ಸರಕಾರಿ ಸೇವೆ ಸಲ್ಲಿಸುತ್ತಿದ್ದರು ಎಂಬಿತ್ಯಾದಿ ಪ್ರಶ್ನೆ ಎದುರಾಗಿದೆ.
ನೇಮಕಾತಿ ಆದೇಶ ಎಲ್ಲಿದೆ? ಯಾವ ಪ್ರಾಧಿಕಾರದಿಂದ ನೇಮಕಾತಿ ನಡೆದಿದೆ? ಕರ್ತವ್ಯಕ್ಕೆ ಹಾಜರಾಗಲು ಯಾವ ವರ್ಷ ಆದೇಶ ನೀಡಲಾಗಿತ್ತು?ಪಡೆದಿರುವ ಶಿಕ್ಷಣ ಎಷ್ಟು? ಯಾವ ಹುದ್ದೆಗೆ?ಮೊಟ್ಟಮೊದಲು ಎಲ್ಲಿ ಸೇವೆಸಲ್ಲಿಸಿದರು?ಮೂಲ ವೇತನ ಎಷ್ಟು? ಬಡ್ತಿ ಹೊಂದಿದ್ದರೆ ಯಾವ ಆಧಾರದ ಮೇಲೆ?ಎಂಬಿತ್ಯಾದಿ ಮಾಹಿತಿ ಒಳಗೊಂಡ ಸೇವಾ ಪುಸ್ತಕ ಎಲ್ಲಿ? ಸೇವಾ ಪುಸ್ತಕ ಇಲ್ಲಿಯವರೆಗೆ ಸಲ್ಲಿಸದಿದ್ದರೂ ಇದುವರೆಗೆ ಅಧಿಕಾರಿಗಳು ಯಾವ ಕ್ರಮ ಕೈಗೊಂಡಿದ್ದಾರೆ? ಎಂಬ ಪ್ರಶ್ನೆಗಳಿಗೆ ಇದೀಗ ಶಿಕ್ಷಣ ಇಲಾಖೆ ಸ್ಪಷ್ಟ ಉತ್ತರ ನೀಡಬೇಕಿದೆ.
ಇದರ ಜೊತೆಗೆ, ನೇಮಕಾತಿ ಆದೇಶ ಲಭ್ಯವಿಲ್ಲದ ಕಾರಣ 2025-26 ಹಾಗೂ 2026-27ನೇ ಸಾಲಿನ ವಾರ್ಷಿಕ ವೇತನ ಬಡ್ತಿ ಮಂಜೂರು ಮಾಡಿಲ್ಲ ಎಂದು ಸಾರ್ವಜನಿಕ ಮಾಹಿತಿ ಅಧಿಕಾರಿ ಉತ್ತರಿಸಿರುವದರಿಂದ ಎಸ್.ಪಿ. ಮುಲ್ಲಾ ಅವರ ನೇಮಕಾತಿ ಮತ್ತು ಬಡ್ತಿ ವಿಷಯದಲ್ಲಿ ಹಲವು ಅನುಮಾನಗಳು ಕಂಡು ಬಂದಿರುವದರಿಂದಲೂ, ಹಾಗಾದರೆ ವರ್ಷ(2024-25) ಮತ್ತು ಅದಕ್ಕಿಂತ ಮೊದಲು ಸಂಬಂಧಪಟ್ಟ ಸಿಬ್ಬಂದಿಗೆ ವೇತನ ಸೇರಿದಂತೆ ಇತರೆ ಸೇವಾ ಸೌಲಭ್ಯಗಳು ಯಾವ ದಾಖಲೆಗಳ ಆಧಾರದ ಮೇಲೆ ಮಂಜೂರಾಗಿದ್ದವು? ವೇತನ ಪಾವತಿಗೆ ಬಳಸಲಾದ ಸೇವಾ ದಾಖಲೆಗಳು ಯಾವುವು? ಎಂಬ ಪ್ರಶ್ನೆಗಳೂ ಸಹಜವಾಗಿ ಮೂಡಿವೆ ಮತ್ತು ಮಂಜೂರು ಮಾಡಿದ ಅಧಿಕಾರಿ ಉತ್ತರಿಸಬೇಕಾಗುತ್ತದೆ.
“ನಾಲ್ಕು ವರ್ಷಗಳಿಂದ ದಾಖಲೆ ಸಲ್ಲಿಕೆಯಾಗಿಲ್ಲ; ಕ್ರಮವೇನು?”*
2022ರಿಂದ ಸೇವಾ ಪುಸ್ತಕ ಸಲ್ಲಿಸುವಂತೆ ಸೂಚಿಸಿದ್ದರೂ ಸಿಬ್ಬಂದಿ ಅದನ್ನು ಸಲ್ಲಿಸಿಲ್ಲ ಎಂಬುದು ಅಧಿಕಾರಿಗಳ ಉತ್ತರದಿಂದಲೇ ಸ್ಪಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ಸಂಬಂಧಪಟ್ಟ ಸಿಬ್ಬಂದಿಯ ವಿರುದ್ಧ ಇಲಾಖೆ ಇದುವರೆಗೆ ಕೈಗೊಂಡಿರುವ ಕ್ರಮವೇನು ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಸೇವಾ ಪುಸ್ತಕ ಸಲ್ಲಿಸದಿರುವುದು, ನೇಮಕಾತಿ ಆದೇಶ ಕಚೇರಿಯಲ್ಲಿ ಲಭ್ಯವಿಲ್ಲದಿರುವುದು ಹಾಗೂ ಬಡ್ತಿ ಆದೇಶವೂ ದಾಖಲೆಗಳಲ್ಲಿ ಕಾಣದಿರುವುದರ ಕುರಿತು ಮೇಲಾಧಿಕಾರಿಗಳು ಗಂಭೀರವಾಗಿ ಪರಿಶೀಲನೆ ನಡೆಸಬೇಕಿದೆ.

ಜಿಲ್ಲಾಧಿಕಾರಿಗಳು ಮಧ್ಯಸ್ಥಿಕೆ ವಹಿಸಲು ಆಗ್ರಹ

ವಿಜಯಪುರ ಜಿಲ್ಲಾಧಿಕಾರಿಗಳು ಮಧ್ಯಸ್ಥಿಕೆ ವಹಿಸುವಂತೆ ಸಾರ್ವಜನಿಕರು ಹಾಗೂ ಆರ್‌ಟಿಐ ಕಾರ್ಯಕರ್ತ ಚೇತನ ಶಿವಸಿಂಪಿ ಒತ್ತಾಯಿಸಿದ್ದಾರೆ.
ಆರ್‌ಟಿಐ ಉತ್ತರದಲ್ಲೇ ದಾಖಲೆಗಳು ಲಭ್ಯವಿಲ್ಲ ಎಂಬ ಅಂಶ ದಾಖಲಾಗಿರುವುದರಿಂದ, ಇದೀಗ ದಾಖಲೆಗಳ ಕೊರತೆಗಿಂತಲೂ—ಅಂತಹ ದಾಖಲೆಗಳಿಲ್ಲದೆ ಸರ್ಕಾರಿ ಸೇವೆ ಹೇಗೆ ಮುಂದುವರಿಯಿತು ಎಂಬ ಪ್ರಶ್ನೆಗೆ ಶಿಕ್ಷಣ ಇಲಾಖೆ ಉತ್ತರ ನೀಡಬೇಕಾದ ಅನಿವಾರ್ಯತೆ ಎದುರಾಗಿದ್ದು, ನೇಮಕಾತಿ ಕಾನೂನುಬದ್ಧವಾಗಿದೆಯೇ, ಮೂಲ ನೇಮಕಾತಿ ಆದೇಶ ಎಲ್ಲಿದೆ, ಸೇವಾ ಪುಸ್ತಕ ಏಕೆ ಸಲ್ಲಿಕೆಯಾಗಿಲ್ಲ, ಕಳೆದ ಹಲವು ವರ್ಷಗಳ ವೇತನ ಪಾವತಿಗೆ ಯಾವ ದಾಖಲೆಗಳನ್ನು ಆಧಾರವಾಗಿಟ್ಟುಕೊಳ್ಳಲಾಗಿದೆ ಹಾಗೂ 2022ರಿಂದ ಸೇವಾ ಪುಸ್ತಕ ಸಲ್ಲಿಕೆಯಾಗದಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಏಕೆ ಕಠಿಣ ಕ್ರಮ ಕೈಗೊಂಡಿಲ್ಲ ಎಂಬುದನ್ನು ಉನ್ನತ ಮಟ್ಟದ ತನಿಖೆ ಮೂಲಕ ಬಹಿರಂಗಪಡಿಸಬೇಕು ಮತ್ತು ವಿಜಯಪುರ ಜಿಲ್ಲಾಧಿಕಾರಿಗಳು ಮಧ್ಯಸ್ಥಿಕೆ ವಹಿಸಿ ಸಾರ್ವಜನಿಕರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಸಾರ್ವಜನಿಕರು ಮತ್ತು ಆರ್‌ಟಿಐ ಕಾರ್ಯಕರ್ತ ಚೇತನ ಶಿವಸಿಂಪಿ ಒತ್ತಾಯಿಸಿದ್ದಾರೆ.

“ದಾಖಲೆ ಸಲ್ಲಿಸದಿದ್ದರೆ ಪರಿಶೀಲನೆ ಹೇಗೆ? ನೋಟಿಸ್ ಜಾರಿ ಮಾಡಿದ್ದೇವೆ; ಡಿಡಿಪಿಐ ಆದೇಶದಂತೆ ಮುಂದಿನ ಕ್ರಮ ಕೈಗೊಳ್ಳುತ್ತೆವೆ. ಆರ್‌ಟಿಐ ಕಾರ್ಯಕರ್ತ ಚೇತನ ಶಿವಸಿಂಪಿಯವರಿಗೆ ಚಡಚಣ ಬಿಇಒ ಕಚೇರಿಯಿಂದ ನೀಡಿರುವ ಮಾಹಿತಿ ಸರಿಯಾಗಿದ್ದು, ಸಿಬ್ಬಂದಿ ಎಸ್.ಪಿ. ಮುಲ್ಲಾ ಅವರ ಸೇವೆಗೆ ಸಂಬಂಧಿಸಿದ ಅಗತ್ಯ ದಾಖಲೆಗಳನ್ನು ಸಲ್ಲಿಸುವಂತೆ ಹಲವು ಬಾರಿ ನೋಟಿಸ್ ಜಾರಿ ಮಾಡಲಾಗಿದೆ.”

– ಹೆಚ್.ನಾಗೇಂದ್ರಪ್ಪ
ಬಿಇಒ ಅಧಿಕಾರಿ

BIJAPUR NEWS bjp congress patil public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್: ಅರ್ಜಿ ಆಹ್ವಾನ

ಕಾಲಮಿತಿಯಲ್ಲಿ ಅರ್ಜಿಗಳನ್ನು ವಿಲೇವಾರಿ ಮಾಡಲು ಕ್ರಮ

ಕಾಮಗಾರಿಗಳ ಗುಣಮಟ್ಟ ಕಾಯ್ದುಕೊಳ್ಳುವುದು ಜನರ ಜವಾಬ್ದಾರಿ

ಕುಸ್ತಿ: ಚಿಕ್ಕಪಡಸಲಗಿ ಶಾಲೆ ವಿದ್ಯಾರ್ಥಿಗಳ ಸಾಧನೆ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್: ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
  • ಕಾಲಮಿತಿಯಲ್ಲಿ ಅರ್ಜಿಗಳನ್ನು ವಿಲೇವಾರಿ ಮಾಡಲು ಕ್ರಮ
    In (ರಾಜ್ಯ ) ಜಿಲ್ಲೆ
  • ಕಾಮಗಾರಿಗಳ ಗುಣಮಟ್ಟ ಕಾಯ್ದುಕೊಳ್ಳುವುದು ಜನರ ಜವಾಬ್ದಾರಿ
    In (ರಾಜ್ಯ ) ಜಿಲ್ಲೆ
  • ಕುಸ್ತಿ: ಚಿಕ್ಕಪಡಸಲಗಿ ಶಾಲೆ ವಿದ್ಯಾರ್ಥಿಗಳ ಸಾಧನೆ
    In (ರಾಜ್ಯ ) ಜಿಲ್ಲೆ
  • ಅಕ್ರಮವಾಗಿ ಸಾಗಿಸುತ್ತಿದ್ದ 33.83 ಟನ್ ಅಕ್ಕಿ ಜಪ್ತಿ
    In (ರಾಜ್ಯ ) ಜಿಲ್ಲೆ
  • ದಾಖಲೆಗಳಿಲ್ಲದೆ ದ್ವಿ.ದ.ಸ ಕರ್ತವ್ಯ ನಿರ್ವಹಣೆಗೆ ಹೊಣೆ ಯಾರು?
    In (ರಾಜ್ಯ ) ಜಿಲ್ಲೆ
  • ಕಾಯಕಯೋಗಿ ಒಕ್ಕಲಿಗ ಮುದ್ದಣ್ಣ
    In (ರಾಜ್ಯ ) ಜಿಲ್ಲೆ
  • ಗ್ರಾಪಂ ಅಧಿಕಾರಿಗಳ ನಿರ್ಲಕ್ಷಕ್ಕೆ ಸ್ಥಳೀಯರ ಹಿಡಿಶಾಪ
    In (ರಾಜ್ಯ ) ಜಿಲ್ಲೆ
  • ವಾಲ್ಮೀಕಿ ಜಯಂತಿ: ಅ.೯ರಂದು ಪೂರ್ವಭಾವಿ ಸಭೆ
    In (ರಾಜ್ಯ ) ಜಿಲ್ಲೆ
  • ವಿದ್ಯುತ್ ಶಾರ್ಟ್‌ ಸರ್ಕ್ಯೂಟ್‌ಗೆ ಕಬ್ಬು ಬೆಳೆ ಆಹುತಿ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.