ಕಾನೂನು ಮಾಪನ ಶಾಸ್ತ್ರ ಇಲಾಖೆಯ ನಿರೀಕ್ಷಕರುಗಳಿಗೆ ವಹಿಸುವಂತೆ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಕಾರ್ಯದರ್ಶಿ ರಾಜಕುಮಾರ ನಾಯಕ ಮನವಿ
ಉದಯರಶ್ಮಿ ದಿನಪತ್ರಿಕೆ
ಬೆಂಗಳೂರು: ಆಹಾರ, ನಾಗರಿಕ ಸರಬರಾಜು ಸರಬರಾಜು ಸಚಿವರಾದ ರಿಜ್ವಾನ್ ಅರ್ಷದ್ ಅವರ ಸೂಚನೆಯಂತೆ ರಾಜ್ಯಾದ್ಯಂತ ನಡೆಸಲಾದ ಪೆಟ್ರೋಲ್ ಪಂಪ್‌ಗಳ ತಪಾಸಣೆಯ ವೇಳೆ ಪೆಟ್ರೋಲ್ ವಿತರಣೆಯಲ್ಲಿ ಕಂಡುಬಂದ ಅಧಿಕ ಪ್ರಮಾಣದ ವ್ಯತ್ಯಾಸದ ಕುರಿತು ಮಾಧ್ಯಮಗಳು ವರದಿ ಮಾಡಿವೆ. ಸಮರ್ಪಕ ತಪಾಸಣೆ ಕಾರ್ಯ ನಿರ್ವಹಿಸಲು ಕಾನೂನು ಮತ್ತು ಮಾಪನಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕರು ಮತ್ತು ಇತರ ಮೇಲಾಧಿಕಾರಿಗಳೊಂದಿಗೆ ನಿರೀಕ್ಷಕರುಗಳಿಗೂ ಅವಕಾಶ ಕಲ್ಪಿಸಿದರೆ ತಪಾಸಣೆ ಕಾರ್ಯ ಚುರುಕಾಗಲು ಸಾಧ್ಯವಿದೆ, ನಿರೀಕ್ಷಕರಿಗೂ ಜವಾಬ್ದಾರಿ ವಿಸ್ತರಿಸಬೇಕು ಎಂದು ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಕಾರ್ಯದರ್ಶಿ ರಾಜಕುಮಾರ ನಾಯಕ ಮನವಿ ಮಾಡಿದ್ದಾರೆ.
ಈ ಕುರಿತು ಸಚಿವರಿಗೆ ಹಾಗೂ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳಿಗೆ ಪತ್ರ ಬರೆದು ಮನವಿ ಮಾಡಿರುವ ಅವರು, ಆಹಾರ ಸಚಿವರ ಸೂಚನೆ ಹಾಗು ಮಾರ್ಗದರ್ಶನದಲ್ಲಿ ನಡೆಸಲಾದ ಪೆಟ್ರೋಲ್ ವಂಪ್‌ಗಳ ತಪಾಸಣೆಯಲ್ಲಿ ವಿತರಣೆಯಲ್ಲಿ ಬಹಳಷ್ಟು ವ್ಯತ್ಯಾಸಗಳು ಕಂಡುಬಂದಿದ್ದು ಗ್ರಾಹಕರು ಮೋಸಹೋಗುತ್ತಿರುವುದು ಸ್ಪಷ್ಟವಾಗಿದೆ. ಸಮರ್ಪಕವಾದ ತಪಾಸಣಾ ಕಾರ್ಯಗಳು ನಡೆಸಲು ದೇಶದ ಇತರೆ ರಾಜ್ಯಗಳ ಮಾದರಿಯಲ್ಲಿ ನಿರೀಕ್ಷಕರಿಗೂ ಸತ್ಯಾಪನೆ ಕಾರ್ಯದ ಜವಾಬ್ದಾರಿ ವಹಿಸಬೇಕು. ನಿರೀಕ್ಷಕರೂ ಸೇರಿದಂತೆ ಸಹಾಯಕ ನಿಯಂತ್ರಕರು ಮತ್ತು ಇತರ ಮೇಲಾಧಿಕಾರಿಗಳು ತಪಾಸಣೆ ಮಾಡುವುದರಿಂದ ನಿರಂತರವಾಗಿ ವಿತರಣೆಯ ಮೇಲೆ ನಿಗಾವಹಿಸಲು ಮತ್ತು ಹೆಚ್ಚಿನ ತಪಾಸಣೆ ನಡೆಸಲು ಇಲಾಖೆಗೆ ಸಾದ್ಯವಾಗುತ್ತದೆ.
ಕಾನೂನು ಮಾಪನ ಶಾಸ್ತ್ರ ಇಲಾಖೆಯಿಂದ ನಿಯಮಾನುಸಾರ ಪರವಾನಗಿ ಪಡೆದ ಖಾಸಗಿ ಜಿ.ಎ.ಟಿ.ಸಿ. ಕೇಂದ್ರಗಳು ಸ್ಥಾಪನೆಯಾಗುತ್ತಿರುವೆ.ವಾಯು ಮಾಲಿನ್ಯ ಇಲಾಖೆಯಲ್ಲಿ ಈಗಾಗಲೇ ಜಾರಿಯಲ್ಲಿರುವಂತೆ ಇಲಾಖೆಯಿಂದ ಪರವಾನಗಿ ಪಡೆದ ಖಾಸಗಿ ಏಜೆನ್ಸಿಗಳು ನೀಡುವ ಮಾಲಿನ್ಯ ನಿಯಂತ್ರಣ ಪರೀಕ್ಷೆ (ಎಮಿಶನ್ ಟೆಸ್ಟ್) ಪತ್ರದಂತೆ ಜಿ.ಎ.ಟಿ.ಸಿ. ಕೇಂದ್ರಗಳು ಸತ್ಯಾಪನೆ ಪತ್ರ ನೀಡುವುದರಿಂದ ಸತ್ಯಾಪನೆಯಯ ವ್ಯಾಪ್ತಿ ಬಳಕೆದಾರರ ಹಿತಕ್ಕಾಗಿ ವಿಸ್ತಾರವಾಗಲಿದೆ.ಕಾನೂನಿನ ಪರಿಣಾಮಕಾರಿ ಜಾರಿಗೆ ದೇಶದ ಇತರೆ ರಾಜ್ಯಗಳಲ್ಲಿರುವಂತೆ
ಜಿಲ್ಲಾಮಟ್ಟದ ಕಾನೂನು ಮಾಪನ ಶಾಸ್ತ್ರ ಸಹಾಯಕ ನಿಯಂತ್ರಕರ ಜೊತೆಗೆ ಉಪವಿಭಾಗ ಮಟ್ಟದ ಸಹಾಯಕ ನಿಯಂತ್ರಕರ ಅಧೀನ ಅಧಿಕಾರಿಗಳಾದ ನಿರೀಕ್ಷಕರುಗಳಿಗೆ ಪೆಟ್ರೋಲ್ ಪಂಪ್, ವೇ ಬ್ರೆಡ್‌ಗಳ ಸತ್ಯಾಪನೆ ಕಾರ್ಯವನ್ನು ನೀಡುವುದರಿಂದ ಗ್ರಾಹಕರ ಹಿತದೃಷ್ಟಿ, ನಿಖರ ವಿತರಣೆಯ ಸಮರ್ಪಕ ಜಾರಿ ಸಾಧ್ಯವಿದೆ.
ಸಹಾಯಕ ನಿಯಂತ್ರಕರ ಅಧೀನ ಅಧಿಕಾರಿಗಳಾದ ಕಾನೂನು ಮಾಪನ ಶಾಸ್ತ್ರ ನಿರೀಕ್ಷಕರು ಸತ್ಯಾಪನೆ ಮಾಡಿ, ವರದಿ ನೀಡುವುದರಿಂದ ಯಾವುದೇ ವ್ಯತ್ಯಯಗಳಾದಲ್ಲಿ ಸಹಾಯಕ ನಿಯಂತ್ರಕರು ತಪಾಸಣೆ ಮತ್ತು ಕ್ರಮವಹಿಸಬಹುದಾಗಿದೆ.ದೇಶದ ಇತರೆ ರಾಜ್ಯಗಳಲ್ಲಿರುವಂತಹ ವ್ಯವಸ್ಥೆಯನ್ನು ಕರ್ನಾಟಕ ರಾಜ್ಯದಲ್ಲಿಯೂ ಜಾರಿಗೊಳಿಸಬೇಕೆಂದು ಮನವಿಯಲ್ಲಿ ವಿವರಿಸಲಾಗಿದೆ.

