ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಜಿಲ್ಲಾ ಕೃಷಿ ತರಬೇತಿ ಕೇಂದ್ರದಿಂದ ರೈತರಿಗಾಗಿ ಆರೋಗ್ಯಕರ ಮಣ್ಣು, ಸಮೃದ್ಧ ಬೆಳೆ, ಸುಸ್ಥಿರ ಆದಾಯ ಶೀರ್ಷಿಕೆಯಡಿ ೩ ದಿನಗಳ ಉಚಿತ ವಿಶೇಷ ತರಬೇತಿ ಕಾರ್ಯಕ್ರಮ ಅಕ್ಟೋಬರ್ ೭ ರಿಂದ ೯ ರವರೆಗೆ ಹಿಟ್ನಳ್ಳಿಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಆಯೋಜಿಸಲಾಗಿದೆ.
ಗರಿಷ್ಠ ೫೦ ರೈತರಿಗೆ ಮಾತ್ರ ತರಬೇತಿಗೆ ಅವಕಾಶವಿದೆ. ಆಸಕ್ತರು ಅಕ್ಟೋಬರ್ ೫ ರೊಳಗಾಗಿ ನೋಂದಣಿ ಮಾಡಿಕೊಳ್ಳಬೇಕು. ತರಬೇತಿಯಲ್ಲಿ ಮಣ್ಣಿನ ಆರೋಗ್ಯ, ಪೋಷಕಾಂಶ ನಿರ್ವಹಣೆ, ಮಿಶ್ರಬೆಳೆ, ಅಂತರ್‌ಬೆಳೆ ಕುರಿತು ಮಾಹಿತಿ ನೀಡಲಾಗುವುದು.
ಜತೆಗೆ ಬೀಜಾಮೃತ, ಜೀವಾಮೃತ, ಘನಜೀವಾಮೃತ, ಪಂಚಗವ್ಯ, ಕಂಪೋಸ್ಟ್ ಹಾಗೂ ಜೈವಿಕ ಗೊಬ್ಬರಗಳ ತಯಾರಿಕೆ ಹಾಗೂ ಸಮಗ್ರ ಕೀಟ ನಿರ್ವಹಣೆ,ನೀಮಾಸ್ತç, ಅಗ್ನಿಯಾಸ್ತ್ರ, ದಶಪರ್ಣಿ ಕಷಾಯ ತರಬೇತಿ ನೀಡಲಾಗುವುದು. ಇವುಗಳೊಟ್ಟಿಗೆ ಸ್ಥಳದಲ್ಲೇ ನೈಸರ್ಗಿಕ ಕೃಷಿ ಉತ್ಪನ್ನಗಳ ತಯಾರಿಕೆ ಮತ್ತು ಕೃಷಿ ಕ್ಷೇತ್ರಕ್ಕೆ ಭೇಟಿ ಕಾರ್ಯಕ್ರಮವಿದೆ. ಗ್ರೇಡಿಂಗ್,ಪ್ಯಾಕೇಜಿಂಗ್,ಬ್ರ್ಯಾಂಡಿಗ್ ಹಾಗೂ ನೇರ ಮಾರಾಟ ಸೌಲಭ್ಯವಿದೆ. ತರಬೇತಿಯಲ್ಲಿ ಭಾಗವಹಿಸುವ ರೈತರಿಗೆ ಉಚಿತ ಊಟ ಮತ್ತು ವಸತಿ ಸೌಲಭ್ಯ ಕಲ್ಪಿಸಲಾಗುವುದು.
ಹೆಚ್ಚಿನ ಮಾಹಿತಿ, ನೋಂದಣಿಗಾಗಿ ಕೃಷಿ ಅಧಿಕಾರಿಗಳಾದ ಎಂ.ಆರ್. ಮುದರಗಿ: ೮೨೭೭೬೩೦೬೧೫, ಫಾತಿಮಾ ಭಾನು ಸುತಾರ್: ೮೨೭೭೬೩೦೬೧೯, ಗೀತಾ ಭಜಂತ್ರಿ: ೯೯೮೬೦೫೪೭೫೦ ದೂರವಾಣಿ: ೦೮೩೫೨-೨೯೫೨೭೮ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಉಪ ಕೃಷಿ ನಿರ್ದೇಶಕರ ಪ್ರಕಟಣೆ ತಿಳಿಸಿದೆ.
