Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಗ್ರಾಮೀಣ ಸಂಪರ್ಕ ಬಲಪಡಿಸುವತ್ತ ಮಹತ್ವದ ಹೆಜ್ಜೆ

ಸರ್ಕಾರಿ ಶಾಲೆ ಮಕ್ಕಳಿಗೆ ಸ್ವಂತ ಹಣದಿಂದ ಶೂ-ಸಾಕ್ಸ್ ವಿತರಣೆ

ಪಂಚ ಗ್ಯಾರಂಟಿ ಯೋಜನೆಗಳಿಂದ ಜನರ ಜೀವನಮಟ್ಟ ಸುಧಾರಣೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಮತಪಟ್ಟಿಯಲ್ಲಿ ಎರಡೆರಡು ಕಡೆ ಮುಸ್ಲಿಂ ಮತದಾರರ ಹೆಸರು
(ರಾಜ್ಯ ) ಜಿಲ್ಲೆ

ಮತಪಟ್ಟಿಯಲ್ಲಿ ಎರಡೆರಡು ಕಡೆ ಮುಸ್ಲಿಂ ಮತದಾರರ ಹೆಸರು

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ವಿಜಯಪುರ ದಲ್ಲಿ ದಾಖಲೆ ಬಿಡುಗಡೆ ಮಾಡಿದ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪ

ಉದಯರಶ್ಮಿ ದಿನಪತ್ರಿಕೆ

ವಿಜಯಪುರ: ಕೆಲವು ಮುಸ್ಲಿಂ ಮತದಾರರು ನಾಲ್ಕೈದು ಕಡೆಗಳ ಮತಪಟ್ಟಿಯಲ್ಲಿದ್ದಾರೆ, ಒಂದು ಕಡೆ ಬೇರೆ ಬಟ್ಟೆ ಹಾಕಿಕೊಂಡು ಫೋಟೋ ಇರಿಸಿದರೆ, ಇನ್ನೊಂದು ಮತ ಪಟ್ಟಿಯಲ್ಲಿ ಬೇರೆ ಉಡುಗೆಯಲ್ಲಿ ಅದೇ ವ್ಯಕ್ತಿ ಇದ್ದಾನೆ, ಕೆಲವು ವ್ಯಕ್ತಿಗಳು ಮರಣವನ್ನಪ್ಪಿದ್ದರೂ ಸಹ ಅವರ ಹೆಸರು ಮತಪಟ್ಟಿಯಲ್ಲಿ ಇರಿಸಲಾಗಿದೆ, ಇಂತಹ ೧೬ ಸಾವಿರ ಪ್ರಕರಣಗಳು ಸಂಶಯವಿದೆ ಎಂದು ನಾವು ಆಕ್ಷೇಪಣೆ ಸಲ್ಲಿಸಿದ್ದೇವೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಈ ಕುರಿತಾದ ಮಹತ್ವದ ದಾಖಲೆ ಹಾಗೂ ಎರಡು ಕಡೆ ಇರುವ ಮತದಾರರ ಪಟ್ಟಿಯ ಛಾಯಾಚಿತ್ರ ಸಮೇತವಾಗಿ ವಿವರಣೆ, ಮರಣವನ್ನಪ್ಪಿ ಅವರ ಮರಣ ಉತಾರೆ ಲಗತ್ತಿಸಿ ಆಕ್ಷೇಪಣೆ ಸಲ್ಲಿಸಿದ ಸಮಗ್ರ ದಾಖಲೆಯನ್ನು ಯತ್ನಾಳ ಬಿಡುಗಡೆಗೊಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವು ವ್ಯಕ್ತಿಗಳು ಜನ್ನತ್‌ಗೆ ಹೋಗಿ ವಾಪಸ್ಸು ಬಂದರೆ ಅದು ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಲ್ಲಿಯೇ ಮಾತ್ರ, ನಮ್ಮ ಹಿಂದೂ ಬಾಂಧವರು ಸಂಸ್ಕಾರವಂತರು, ಸತ್ತವರ ಹೆಸರಿನಲ್ಲಿ ಮತದಾನ ಮಾಡುವ ಹೇಯ ಕೃತ್ಯ ಯಾರೂ ಮಾಡಲ್ಲ. ಈ ರೀತಿ ಮಾಡುವವರು ಅವರು ಮಾತ್ರ. ಹೀಗಾಗಿ ಇಬ್ರಾಹಿಂ ಆದಿಲ್‌ಷಾಹಿ ಕಾಲದಿಂದಲೂ ಅವರ ಹೆಸರುಗಳು ಇಂದಿಗೂ ಇವೆ ಎಂದು ಲೇವಡಿ ಮಾಡಿದರು.
ಭಾರತೀಯ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ ಓರ್ವ ದಕ್ಷ ಅಧಿಕಾರಿ, ಅವರು ಯಾವ ಪಕ್ಷದ ಏಜೆಂಟರೂ ಅಲ್ಲ, ಈ ಹಿಂದೆ ಚುನಾವಣಾ ಆಯೋಗವನ್ನು ಯಾವ ರೀತಿ ಕಾಂಗ್ರೆಸ್ ದುರಪಯೋಗಪಡಿಸಿಕೊಂಡಿದೆ ಎಂಬುದು ಪ್ರತಿಯೊಬ್ಬರಿಗೂ ಗೊತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಘನತೆ ಬದಿಗೊತ್ತಿ ಚುನಾವಣಾ ಮುಖ್ಯ ಆಯುಕ್ತರ ಪ್ರತಿಕೃತಿ ದಹಿಸಿರುವುದು ಅವರಿಗೆ ಶೋಭೆ ತರುವ ಸಂಗತಿಯಲ್ಲ ಎಂದು ವಾಗ್ದಾಳಿ ನಡೆಸಿದರು.
ಚುನಾವಣಾ ಆಯೋಗದ ಮುಖ್ಯ ಆಯುಕ್ತರಿಗೆ ಅವಮಾನ, ರಾಜ್ಯದ ರೈತರಿಗೆ ಬರ ಪರಿಹಾರ ಘೋಷಣೆ ಮೊದಲಾದ ವಿಷಯಗಳನ್ನಿಟ್ಟುಕೊಂಡು ಅ.೬ ರಂದು ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದರು.
ಪಾಲಿಕೆ ಮೇಯರ್ ಎಂ.ಎಸ್. ಕರಡಿ, ಪಾಲಿಕೆ ಸದಸ್ಯರಾದ ಪ್ರೇಮಾನಂದ ಬಿರಾದಾರ, ಗಿರೀಶ ಬಿರಾದಾರ, ರಾಜು ಕುರಿಯವರ, ಜವಾಹರ್ ಗೋಸಾವಿ, ಕಿರಣ ಪಾಟೀಲ, ರಾಜೇಶ ದೇವಗಿರಿ, ರಾಹುಲ್ ಜಾಧವ, ಕುಮಾರ ಗಡಗಿ, ಮುಖಂಡರಾದ ಚಂದ್ರು ಚೌಧರಿ, ಗುರು ಗಚ್ಚಿನಮಠ, ವಿಜಯಕುಮಾರ ಡೋಣಿ, ಶಂಕರ ಹೂಗಾರ, ಬಾಬು ಶಿರಶ್ಯಾಡ, ವಿಕ್ರಂ ಗಾಯಕವಾಡ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಆಕ್ಷೇಪಣೆ ಮರಳಿ ಪಡೆದಿಲ್ಲ

ಮುಸ್ಲಿಂ ಮತಗಳ ಆಕ್ಷೇಪಣೆಯನ್ನು ನಾವು ಸಲ್ಲಿಸಿದ್ದೇವೆ, ಆದರೆ ನಾವು ಆಕ್ಷೇಪಣೆ ಮರಳಿ ಪಡೆದಿಲ್ಲ, ಸಚಿವ ಎಂ.ಬಿ.ಪಾಟೀಲರು ಈ ಬಗ್ಗೆ ಹೇಳಿದರೆ ಅದೇನು ವೇದ ವಾಕ್ಯವೇ? ಎಂದು ಶಾಸಕ ಯತ್ನಾಳ ಹೇಳಿದರು.
ನಮಗೆ ೧೬ ಸಾವಿರಕ್ಕೂ ಹೆಚ್ಚು ಮತದಾರರಿಗೆ ಸಂಬಂಧಿಸಿದಂತೆ ಡೌಟ್ ಇದೆ, ದಾಖಲೆ ಸಮೇತ ನಾವು ಆಕ್ಷೇಪಣೆ ಸಲ್ಲಿಕೆ ಮಾಡಿದ್ದೇವೆ, ಇದನ್ನು ಹಿಂದಕ್ಕೆ ಪಡೆಯುವ ಪ್ರಶ್ನೆಯೇ ಇಲ್ಲ ಎಂದರು.
ಬಲ್ಕ್ ಆಗಿ ಆಕ್ಷೇಪಣೆ ಸಲ್ಲಿಸುವ ಅವಕಾಶವಿದೆ, ನಾವು ನಿಯಮಾವಳಿಗಳ ಪ್ರಕಾರವೇ ೮೩೦೦ ಕ್ಕೂ ಹೆಚ್ಚು ಆಕ್ಷೇಪಣೆಗಳನ್ನು ಸಲ್ಲಿಕೆ ಮಾಡಲಾಗಿದೆ ಎಂದರು.

ಮುಸ್ಲಿಂ ಸಂಘಟನೆಗಳಿಂದ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ

ಬಿಎಲ್‌ಓಗಳು ಮನೆ-ಮನೆಗೆ ಹೋಗಬೇಕು, ಆದರೆ ಕೆಲವು ಮತಾಂಧ ಶಕ್ತಿಗಳು ರೆಹಮಾನ್ ಫೌಂಡೇಷನ್, ಸನಾ ಫೌಂಡೇಷನ್ ಮೊದಲಾದ ಸಂಘಟನೆಗಳು ಈ ಪ್ರಕ್ರಿಯೆಗೆ ಧಕ್ಕೆ ತರಲು ಕಾನೂನು ಬಾಹಿರವಾಗಿ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡುತ್ತಿವೆ, ಜೊತೆಗೆ ನಮ್ಮ ಕಾರ್ಯಕರ್ತರ ಮೇಲೆಯೂ ಹಲ್ಲೆ ನಡೆಸಿದ್ದಾರೆ, ಪಾಲಿಕೆಯ ಮಾಜಿ ಸದಸ್ಯನೋರ್ವ ತನ್ನ ಒಡೆತನದ ಶಾಲೆಯಲ್ಲಿ ಬಿಎಲ್‌ಓಗಳ ಸಭೆಯನ್ನು ಕಾನೂನುಬಾಹಿರವಾಗಿ ಕರೆದಿದ್ದಾನೆ ಎಂದು ಶಾಸಕ ಯತ್ನಾಳ ಆರೋಪಿಸಿದರು.

BIJAPUR NEWS bjp congress patil public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಗ್ರಾಮೀಣ ಸಂಪರ್ಕ ಬಲಪಡಿಸುವತ್ತ ಮಹತ್ವದ ಹೆಜ್ಜೆ

ಸರ್ಕಾರಿ ಶಾಲೆ ಮಕ್ಕಳಿಗೆ ಸ್ವಂತ ಹಣದಿಂದ ಶೂ-ಸಾಕ್ಸ್ ವಿತರಣೆ

ಪಂಚ ಗ್ಯಾರಂಟಿ ಯೋಜನೆಗಳಿಂದ ಜನರ ಜೀವನಮಟ್ಟ ಸುಧಾರಣೆ

ಹಿಂಗಾರು ಬಿತ್ತನೆ ಆರಂಭ: ಬೀಜೋಪಚಾರ, ಜೈವಿಕ ಗೊಬ್ಬರ ಬಳಕೆಗೆ ಸಲಹೆ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಗ್ರಾಮೀಣ ಸಂಪರ್ಕ ಬಲಪಡಿಸುವತ್ತ ಮಹತ್ವದ ಹೆಜ್ಜೆ
    In (ರಾಜ್ಯ ) ಜಿಲ್ಲೆ
  • ಸರ್ಕಾರಿ ಶಾಲೆ ಮಕ್ಕಳಿಗೆ ಸ್ವಂತ ಹಣದಿಂದ ಶೂ-ಸಾಕ್ಸ್ ವಿತರಣೆ
    In (ರಾಜ್ಯ ) ಜಿಲ್ಲೆ
  • ಪಂಚ ಗ್ಯಾರಂಟಿ ಯೋಜನೆಗಳಿಂದ ಜನರ ಜೀವನಮಟ್ಟ ಸುಧಾರಣೆ
    In (ರಾಜ್ಯ ) ಜಿಲ್ಲೆ
  • ಹಿಂಗಾರು ಬಿತ್ತನೆ ಆರಂಭ: ಬೀಜೋಪಚಾರ, ಜೈವಿಕ ಗೊಬ್ಬರ ಬಳಕೆಗೆ ಸಲಹೆ
    In (ರಾಜ್ಯ ) ಜಿಲ್ಲೆ
  • ಗಾಂಧಿ ಜಯಂತಿ: ಪ್ರಾಣಿವಧೆ- ಮಾಂಸ ಮಾರಾಟ ನಿಷೇಧ
    In (ರಾಜ್ಯ ) ಜಿಲ್ಲೆ
  • ಅ.೭ ರಿಂದ ರೈತರಿಗೆ ಉಚಿತನೈಸರ್ಗಿಕ ಕೃಷಿ ತರಬೇತಿ ಕಾರ್ಯಕ್ರಮ
    In (ರಾಜ್ಯ ) ಜಿಲ್ಲೆ
  • ಅ.೧ ರಂದು ಕಾನೂನು ಅರಿವು ಕಾರ್ಯಕ್ರಮ
    In (ರಾಜ್ಯ ) ಜಿಲ್ಲೆ
  • ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ ಮಿಂಚಿದ ವಿದ್ಯಾರ್ಥಿಗಳು
    In (ರಾಜ್ಯ ) ಜಿಲ್ಲೆ
  • ​ರೈತರು-ಸೈನಿಕರ ಆರ್‌ಟಿಐ ಅರ್ಜಿಗಳಿಗೆ ನಿರ್ಲಕ್ಷ್ಯ: ತಪ್ಪಿತಸ್ಥ ಅಧಿಕಾರಿಗಳಿಗೆ ದಂಡ
    In (ರಾಜ್ಯ ) ಜಿಲ್ಲೆ
  • ಮತಪಟ್ಟಿಯಲ್ಲಿ ಎರಡೆರಡು ಕಡೆ ಮುಸ್ಲಿಂ ಮತದಾರರ ಹೆಸರು
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.