ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಭರವಸೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಾಲಗೇರಿ ಕೆರೆ ತುಂಬಲು ಸಣ್ಣ ನೀರಾವರಿ ಇಲಾಖೆಯ ಮೂಲಕ ಯೋಜನೆ ಶಾಶ್ವತ ಯೋಜನೆ ರೂಪಿಸಲಾಗುವುದು ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.
ಶನಿವಾರ
ತಿಕೋಟಾ ತಾಲೂಕಿನ ಡೋಕಳೆವಾಡಿ ಗ್ರಾಮದಲ್ಲಿ ಸುಮಾರು ರೂ. 5 ಕೋ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸೇತುವೆ ಮತ್ತು ಸಂಪರ್ಕ ರಸ್ತೆ ಸುಧಾರಣೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
179 ಹಳ್ಳಗಳನ್ನು ತುಂಬುವುದರಿಂದ 1400 ಕಿ. ಮಿ. ನಷ್ಟು ಪ್ರದೇಶಕ್ಕೆ ನೀರಾವರಿಯ ಅನುಕೂಲವಾಗಲಿದೆ. ರೈತರಿಗೆ ಅಗತ್ಯವಿರುವರೆಗೆ ಕಾಲುವೆಗೆ ನೀರು ಹರಿಸಲಾಗುವುದು. ಅಲ್ಲದೇ, ಜಿಲ್ಲೆಯಲ್ಲಿ ಕೈಗಾರಿಕೆಗಳನ್ನು ಪ್ರಾರಂಭಿಸುವ ಮೂಲಕ ಕನಿಷ್ಟ ಐದು ಸಾವಿರ ಯುವಕರಿಗೆ ಉದ್ಯೋಗ ಕೊಡಿಸುವ ಉದ್ದೇಶವಿದೆ. ಸ್ಥಳೀಯ ಮೀನಾದೇವಿ ದೇವಸ್ಥಾನವನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಅವರು ಹೇಳಿದರು.
ಮುಖಂಡ ಎಸ್. ಎಚ್. ನಾಡಗೌಡ ಮಾತನಾಡಿ, ಸಚಿವ ಎಂ. ಬಿ. ಪಾಟೀಲರ ಅವಿರತ ಪ್ರಯತ್ನದಿಂದ ಬೇರಾವ ಕ್ಷೇತ್ರದಲ್ಲೂ ಕಾಣದ ಅಭಿವೃದ್ಧಿ ಬಬಲೇಶ್ವರ ಮತಕ್ಷೇತ್ರದಲ್ಲಿ ಆಗುತ್ತಿದೆ. ವಾರದಲ್ಲಿ ಒಂದೆರಡಾದರೂ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಏನಾದರೂ ಕಾರ್ಯಕ್ರಮಗಳು ನಡೆಯುತ್ತಿವೆ. ಇವು ಸಚಿವರ ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪೋಪಟ ಮಹಾರಾಜರು, ಮುಖಂಡರಾದ ವಿಠ್ಠಲ ಜಾಧವ, ಮಧುಕರ ಸಾಹುಕಾರ ಜಾಧವ, ಓಗೆಪ್ಪ ಗೋಪಣೆ, ರಾಜಶೇಖರ ಪವಾರ, ಗುರುಪಾದಗೌಡ ದಾಶ್ಯಾಳ, ಗೀತಾಂಜಲಿ ಪಾಟೀಲ, ಅಮಸಿದ್ದ ನಾಯಕ, ಲೋಕೋಪಯೋಗಿ ಇಲಾಖೆಯ ಎಇಇ ರವಿ ಪವಾರ, ನಾನಾ ಗ್ರಾಮಸ್ಥರು ಉಪಸ್ಥಿತರಿದ್ದರು.

