ವಿಜಯಪುರ ಜಿಲ್ಲಾ ನೂತನ ಛಾಯಾಗ್ರಾಹಕರ ಸಂಘದಿಂದ ವಿಶ್ವ ಛಾಯಾಗ್ರಹಣ ದಿನಾಚರಣೆ, ಹಿರಿಯಛಾಯಾಗ್ರಾಹಕರಿಗೆ ಗೌರವ ಸನ್ಮಾನ, ಛಾಯಾಗ್ರಾಹಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಛಾಯಾಚಿತ್ರಗಳ ಪ್ರದರ್ಶನ
ಉದಯರಶ್ಮಿ ದಿನಾಚರಣೆ
ವಿಜಯಪುರ: ಜಿಲ್ಲಾ ನೂತನ ಛಾಯಾಗ್ರಾಹಕರ ಸಂಘ ಹಾಗೂ ಕರ್ನಾಟಕ ರಾಜ್ಯ ಛಾಯಾಚಿತ್ರಗ್ರಾಹಕರ ಸಂಘದ ಸಹಯೋಗದಲ್ಲಿ ಆ.೧೮ ರಂದು ವಿಶ್ವ ಛಾಯಾಗ್ರಹಣ ದಿನಾಚರಣೆ, ಹಿರಿಯ ಛಾಯಾಗ್ರಾಹಕರಿಗೆ ಗೌರವ ಸನ್ಮಾನ, ಛಾಯಾಗ್ರಾಹಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಛಾಯಾಚಿತ್ರಗಳ ಪ್ರದರ್ಶನ ವಿಜಯಪುರದ ಕಂದಗಲ್ ಶ್ರೀ ಹನುಮಂತರಾಯ್ ರಂಗಮಂದಿರದಲ್ಲಿ ನಡೆಯಿತು ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ಯುವ ಭಾರತ್ ಸಮಿತಿಯ ಅಧ್ಯಕ್ಷ ಹಾಗೂ ಹವ್ಯಾಸಿ ಛಾಯಾಗ್ರಾಹಕರದ ಉಮೇಶ್ ಕಾರಜೋಳ ಮಾತನಾಡುತ್ತ, ಛಾಯಾಗ್ರಾಹಕರು ಇಂದು ಬಹಳ ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ಸರ್ಕಾರ ಛಾಯಾಗ್ರಹಣ ಅಕಾಡೆಮಿ ಪ್ರಾರಂಭ ಮಾಡಿದರೆ ಛಾಯಾಗ್ರಾಹಕರಿಗೆ ಹೆಚ್ಚಿನ ಜ್ಞಾನ ವಿಸ್ತರಿಸಿಕೊಳ್ಳಲು ಮತ್ತು ಸರ್ಕಾರದ ಸವಲತ್ತುಗಳನ್ನು ಪಡೆಯಲು ಅನುಕೂಲವಾಗುತ್ತದೆ ಎಂದರು.
ಒಂದು ಚಿತ್ರ ಸಾವಿರ ಕಥೆ ಹೇಳುವ ಸಾಮರ್ಥ್ಯ ಹೊಂದಿದೆ. ಅದರಲ್ಲೂ ಛಾಯಾಗ್ರಹಣ ಐತಿಹಾಸಿಕ ದಾಖಲೆ ಸೃಷ್ಟಿಸುವ, ದಾಖಲಿಸುವ ಒಂದು ಅದ್ಭುತ ಮಾಧ್ಯಮ ಎಂದು ಖ್ಯಾತ ವಾಗ್ಮಿ, ಅಂಕಣಕಾರ, ಹವ್ಯಾಸಿ ಛಾಯಾಗ್ರಹಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಛಾಯಾಗ್ರಹಕರು ಹಲವಾರು ಐತಿಹಾಸಿಕ ಘಟನೆಗಳನ್ನು ತಮ್ಮ ಜೀವದ ಹಂಗು ತೊರೆದು ಆ ಕ್ಷಣವನ್ನು ಸೆರೆ ಹಿಡಿದು ಜಗತ್ತಿನ ಮನೆ ಮಾತಾಗಿದ್ದಾರೆ ಇತಿಹಾಸದ ಸಾಕ್ಷಿಪ್ರಜ್ಞೆ ಆಗಿದ್ದಾರೆ ಎಂದು ಸೂಲಿಬೆಲೆ ನುಡಿದರು.
ಕರ್ನಾಟಕ ಛಾಯಾಗ್ರಾಹಕರ ಸಂಘದ ನಿರ್ದೇಶಕ ನಾಗರಾಜ್ ಟಿ.ಸಿ. ಮಾತನಾಡುತ್ತಾ, ಸರ್ಕಾರ ಛಾಯಾಗ್ರಾಹಕರನ್ನು ಕಾರ್ಮಿಕ ಇಲಾಖೆಯಲ್ಲಿ ಸೇರಿಸಿದ್ದಾರೆ. ಆದರೆ ಕಟ್ಟಡ ಕಾರ್ಮಿಕರಿಗೆ ಸಿಗುವ ಎಲ್ಲ ಸವಲತ್ತುಗಳು ಛಾಯಾಗ್ರಾಹಕರಿಗೂ ಸಿಗುವಂತೆ ಅವಕಾಶ ಮಾಡಿ ಛಾಯಾಗ್ರಹಕರ ಬದುಕನ್ನು ಉಜ್ವಲಗೊಳಿಸಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಯುವ ಮುಖಂಡ ಶ್ರೀಶೈಲಗೌಡ ಬಿರಾದಾರ (ಮಾಗಣಗೇರಿ) ಮಾತನಾಡುತ್ತ, ವೃತ್ತಿನಿರತ ಛಾಯಾಗ್ರಾಹಕರಿಗೆ ಅನುಕೂಲ ಮಾಡಿಕೊಡಲು ಎಲ್ಲ ರೀತಿಯಿಂದಲೂ ಪ್ರಯತ್ನಿಸಲಾಗುವುದು ಎಂದು ಹೇಳಿದರು.
ಎಸ್.ಬಿ. ವಿಸ್ಡಮ್ ಅಕಾಡೆಮಿಯ ಸಂಸ್ಥಾಪಕ ಶರಣಯ್ಯ ಬಂಡಾರಿಮಠ ಮಾತನಾಡಿದರು.
ವಿಜಯಪುರ ಜಿಲ್ಲಾ ನೂತನ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ರಮೇಶ್ ಚವ್ಹಾಣ ಪ್ರಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.
ಇದೇ ಸಂದರ್ಭದಲ್ಲಿ ಹಿರಿಯ ಛಾಯಾಗ್ರಹಾಕರಾದ ವಿಜಯಪುರದ ಗುರುರಾಜ ಬಿದರಿ, ಪ್ರಕಾಶ ಹಿಪ್ಪರಗಿ, ವಿಶ್ವೇಶ್ವರಯ್ಯ ಮಠಪತಿ, ಕೊಲ್ಲಾರದ ಹಣಮಂತ ಹೂಗಾರ, ಬಸವನ ಬಾಗೇವಾಡಿಯ ಅಶೋಕ ತೆಗ್ಗಳ್ಳಿ, ಚಡಚಣದ ರಾಜಶೇಖರ ಡೋಣಜ, ನಿಡೋಣಿಯ ನೇಮಿನಾಥ ನೇಜ, ತಿಕೋಟಾದ ಭೀಮಪ್ಪ ಬಸರಗಿ ಇವರನ್ನು ವೇದಿಕೆಯ ಮೇಲಿದ್ದ ಗಣ್ಯರು ಸನ್ಮಾನಿಸಿ ಗೌರವಿಸಿದರು. ಎಸ್.ಎಸ್.ಎಲ್.ಸಿ ಯಲ್ಲಿ ಹೆಚ್ಚು ಅಂಕ ಪಡೆದ ಮಂಜುನಾಥ ಸಂಗಮೇಶ ಬಿರಾದಾರ, ಪಿ.ಯೂ.ಸಿ ಯಲ್ಲಿ ಹೆಚ್ಚು ಅಂಕ ಪಡೆದ ಕೌಶಿಕ ದೇವಯ್ಯ ಹಿರೇಮಠ, ಆಕಾಶ ಗುರುಸಂಗಯ್ಯ ಮಠಪತಿ, ಅಭೀಶೇಕ್ ಸುರೇಶ ರಾಠೋಡ, ವಿದ್ಯಾರ್ಥಗಳನ್ನು ಪ್ರತಾಭ ಪುರಸ್ಕಾರ ನೀಡುವ ಮೂಲಕ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳಾದ ಪ್ರಶಾಂತ ಪಟ್ಟಣಶಟ್ಟಿ, ಸುರೇಶ ರಾಠೋಡ, ಸತೀಶ ಕಲಾಲ, ರಾಜುಸಿಂಗ ರಜಪೂತ, ಗುರುಬಾಳಪ್ಪ ಗಲಗಲಿ, ಮಲ್ಲಿಕರ್ಜುನ ಪಾರ್ವತಿ, ಪವನ ಅಂಗಡಿ. ಮಹೇಶ ಕುಂಬಾರ. ವಿನೊದ ಮಣ್ಣೂರ, ವಿದ್ಯಾಧರ ಸಾಲಿ, ಛಾಯಾಗ್ರಾಹಕರಾದ ಸಂಗಯ್ಯಾ ಮಠಪತಿ, ಮಹೇಶ ಪಾಟೀಲ್, ಸಂಜಯ ರೇವೆ, ಶಿವರಾಜ ಕುಂಟೋಜಿ, ರವಿ. ತಾಳಿಕೋಟಿ, ಶಶಿಕುಮಾರ ಕುಂಬಾರ, ಸುಭಾಸ ಪವಾರ, ಸಂಗಮೇಶ ಬಿರಾದಾರ, ಚಂದ್ರಕಾಂತ ವಡ್ಡರ, ಸುನಿಲ ಬಿರಾದಾರ, ಸುರೇಶ ಗಲ್ಪಿ, ಬಾಳು ಕುಲರ್ಕಣಿ, ಮಲ್ಲು ಚಕ್ರವರ್ತಿ ಸುನಿಲ ಭೈರವಾಡಗಿ, ವಿಜಯ ಮೈದರಗಿ, ಗೌಡಪ್ಪಾ ಬಿರಾದಾರ, ವಿರೇಶ ಗಬ್ಬೂರ, ಸಹಿತ ಎಲ್ಲ ಛಾಯಾಗ್ರಾಹಕರು ಉಪಸ್ಥಿತರಿದ್ದರು.