ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವಿಜಯಪುರದ ಭೂತನಾಳ ಕೆರೆ ಹತ್ತಿರದ ಮೀನುಗಾರಿಕೆ ಸಂಶೋಧನಾ ಮತ್ತು ಮಾಹಿತಿ ಕೇಂದ್ರದಲ್ಲಿ ಆಗಸ್ಟ್ ೨೨ ರಂದು ಕಟ್ಲಾ, ರೋಹು ಹಾಗೂ ಸಾಮಾನ್ಯ ಗೆಂಡೆ (ಗೌರಿ) ಮೀನುಮರಿಗಳನ್ನು ತಲಾ ೧.ರೂ ನಂತೆ ಮಾರಾಟ ಮಾಡಲಾಗುತ್ತಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ: ೯೯೪೫೯೫೯೭೦೪, ೯೯೦೦೭೭೬೨೦೫, ೦೮೩೫೨-೨೬೪೫೧೬ ಹಾಗೂ ೯೪೮೦೫೧೮೬೭೯ ಸಂಪರ್ಕಿಸಬಹುದಾಗಿದೆ ಎಂದು ಮೀನುಗಾರಿಕೆ ಸಂಶೋಧನಾ ಮತ್ತು ಮಾಹಿತಿ ಕೇಂದ್ರದ ಪ್ರಕಟಣೆ ತಿಳಿಸಿದೆ.